ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಇಂದು ಹರಿಕಥಾ ಸಪ್ತಾಹ ಸಮಾರೋಪ
ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಕೀರ್ತನಕುಟೀರ ಅನಂತಪುರದ ಕಲಾರತ್ನ ಶಂ.ನಾ ಅಡಿಗರ ನೇತೃತ್ವದಲ್ಲಿ ನಡೆಯುತ್ತಿರುವ 9ನೇ ವರ್ಷದ ಹರಿಕಥಾ ಸಪ್ತಾಹದ ಅಂಗವಾಗಿ ಶುಕ್ರವಾರ ಸಂಜೆ ಮಾ.ವಿನೋದ್ ರಂಗಪ್ರವೇಶ ನಡೆಸಿದನು. ಬಳಿಕ ವಿಜಯಲಕ್ಷ್ಮೀ ಶಂ.ನಾ ಅಡಿಗರಿಂದ ಹಾಗೂ ಕೀರ್ತನ ಕಲಾಪ್ರವೀಣೆ ಬಿ.ಜಿ.ನಾಗಲಕ್ಷ್ಮೀ ಶಿವರಾಂ ಮೈಸೂರು ರವರಿಂದ ಭಕ್ತ ಸುಧಾಮ ಹರಿಕಥಾ ಸಂಕೀರ್ತನೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಜನರು ದಿನನಿತ್ಯ ಭಾಗವಹಿಸುತ್ತಿದ್ದಾರೆ. ಶನಿವಾರ ಮಾ.ಮೌನೀಶ್ ರಿಂದ ರಂಗಪ್ರವೇಶ, ಮಾ.ನಂದನ್ ಹೆಬ್ಬಾರ್, ಭಾವನ ರಿಂದ ಹರಿಕಥಾ ಸಂಕೀರ್ತನೆ, ಶಾಂಭವಿಯವರಿಂದ ಭಗ್ನಮನೋರಥ ಹಾಗು ದಿವ್ಯಶ್ರೀಯವರಿಂದ ಭಸ್ಮಾಸುರ ಮೋಹಿನಿ ಹರಿಕಥಾ ಸಂಕೀರ್ತನೆ ನಡೆಯಿತು.
ಭಾನುವಾರ ಬೆಳಿಗ್ಗೆ 9 ರಿಂದ ಕೀರ್ತನಾ ಕುಟೀರದ ವಿದ್ಯಾಥರ್ಿಗಳಿಂದ ದಾಸಸಂಕೀರ್ತನೆ, 9.30 ರಿಂದ ವಿದ್ಯಾಥರ್ಿಗಳಾದ ಕೃತ್ತಿಕಾ, ಸುಪ್ರೀತಾ, ಗಾಯತ್ರೀ ಕೊಂಡೆವೂರು, ಲೇಖನ ರಿಂದ ಹರಿಕಥೆ, 11.30 ರಿಂದ ಶ್ರದ್ದಾ ನಾಯರ್ಪಳ್ಳರಿಂದ ಕರ್ಣಬೇಧನ ಹರಿಕಥಾ ಸಂಕೀರ್ತನೆ ನಡೆಯಲಿದೆ. ಅಪರಾಹ್ನ 2 ರಿಂದ ರಾಜೇಶ್ವರಿ, ಧನ್ಯಶ್ರೀ, ವೈಭವಿಯವರಿಂದ ಹರಿಕಥಾ ಸಂಕೀರ್ತನೆ, ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಖ್ಯಾತ ವೈದ್ಯ ಡಾ.ಬಿ.ಎಸ್ ರಾವ್ ಅಧ್ಯಕ್ಷತೆ ವಹಿಸುವರು. ಮಂಗಳೂರು ಕೃಷ್ಣಕುಟೀರದ ಗೋವಿಂದ ರಾಮ್ ದಾಸಜೀಯವರಿಗೆ ಪ್ರಸ್ತುತ ಸಾಲಿನ ಕೀರ್ತನ ಕಸ್ತೂರಿ ಪ್ರಶಸ್ತಿಪ್ರಧಾನ ಗೈಯ್ಯಲಾಗುವುದು. ಗಣ್ಯರು ಉಪಸ್ಥಿತರಿರುವರು. ಬಳಿಕ ಕಲಾರತ್ನ ಶಂ.ನಾ ಅಡಿಗರಿಂದ ಕೃಷ್ಣ ಸಂಧಾನ ಹರಿಕಥಾ ಸಂಕೀರ್ತನೆ, 8ಕ್ಕೆ ಕೀರ್ತನ ಕುಟೀರದ ವಿದ್ಯಾಥರ್ಿಗಳಿಂದ ಮಂಗಳಾಚರಣೆ ನಡೆಯುವುದರೊಂದಿಗೆ ಸಪ್ತಾಹ ಸಮಾರೋಪಗೊಳ್ಳುವುದು.


