HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಪೇಟೆ ಕಿರಿಕಿರಿ ದೂರಗೊಳಿಸಲು ನಿಧರ್ಾರ- ಬದಿಯಡ್ಕದಲ್ಲಿ ಗೂಡಂಗಡಿಗಳನ್ನು 15 ದಿನಗಳೊಳಗೆ ತೆರವು
    ಬದಿಯಡ್ಕ: ಬದಿಯಡ್ಕ ಪೇಟೆಯ ಗೂಡಂಗಡಿಗಳನ್ನು 15 ದಿನಗಳೊಳಗೆ ತೆರವುಗೊಳಿಸಲು ಗ್ರಾಮ ಪಂಚಾಯತು ಆಡಳಿತ ಸಮಿತಿ ನಿರ್ಧರಿಸಿದೆ. ಮಂಗಳವಾರ ನಡೆದ ಸಭೆಯಲ್ಲಿ ಈ ನಿಧರ್ಾರ ಕೈಗೊಳ್ಳಲಾಗಿದೆ. ಈ ಬಗ್ಗೆ ವಿಜ್ಞಾಪನೆ ಹೊರಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
  ಕುಂಬಳೆ ರಸ್ತೆಯ ನವಜೀವನ ಜಂಕ್ಷನ್, ಪುತ್ತೂರು ರಸ್ತೆಯ ಕೆಡೆಂಜಿ ಜಂಕ್ಷನ್ ಮೇಲಿನ ಪೇಟೆಯ ಸರಕಾರಿ ಆಸ್ಪತ್ರೆ ಜಂಕ್ಷನ್ಗಳಲ್ಲಿ ಗೂಡಂಗಡಿಗಳು ಕಾಯರ್ಾಚರಿಸ ಕೂಡದೆಂದು ಪಂಚಾಯತು ಆಡಳಿತ ಸಮಿತಿ ನಿರ್ಧರಿಸಿದೆ. ಈ ಬಗ್ಗೆ ಗೂಡಂಗಡಿ ವ್ಯಾಪಾರಿಗಳ ಸಂಘಟನೆ ಪ್ರತಿನಿಧಿಗಳೊಂದಿಗೆ ಡಿ. 12ರಂದು ಚಚರ್ೆ ನಡೆಸುವುದಾಗಿ ಪಂಚಾಯತು ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ತಿಳಿಸಿದ್ದಾರೆ. ಆಡಳಿತ ಮಂಡಳಿ ಸಭೆಯಲ್ಲಿ ಕೆಲವು ವ್ಯಾಪಾರಿಗಳು ಸಾರ್ವಜನಿಕ ಸ್ಥಳವನ್ನು ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿದ್ದಾರೆಂಬ ಆರೋಪವೂ ಕೇಳಿ ಬಂದಿದೆ. ಆದರೆ ಆ ವಿಷಯದಲ್ಲಿ ಲೋಕೋಪಯೋಗಿ ಇಲಾಖೆ ಕ್ರಮಕೈಗೊಳ್ಳಬೇಕಾಗಿದೆಯೆಂದು ಕಾರ್ಯದಶರ್ಿ ಸಭೆಯಲ್ಲಿ ತಿಳಿಸಿದ್ದಾರೆ.
   ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ದೂರಿನ ಹಿನ್ನೆಲೆಯಲ್ಲಿ ಗೂಡಂಗಡಿಗಳ ವಿರುದ್ಧ  ಕ್ರಮಕೈಗೊಳ್ಳಲಾಗಿದೆ. ಪೇಟೆಯಲ್ಲಿ ಸಮಾಂತರ ಹೋಟೆಲ್ಗಳೂ ಕಾಯರ್ಾಚರಿಸುತ್ತಿವೆಯೆಂದೂ ಕೆಲವು ಗೂಡಂಗಡಿಗಳು ಜೀನಸು ಅಂಗಡಿಗಳಾಗಿ ಮಾಪರ್ಾಡುಗೊ ಡಿವೆಯೆಂಬ ಆರೋಪವುಂಟಾಗಿದೆ. ಈ ದೂರುಗಳ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತು ಕಚೇರಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲೂ ಗೂಡಂಗಡಿಗಳ ತೆರವಿಗೆ ನಿಧರ್ಾರ ಕೈಗೊಳ್ಳಲಾಗಿತ್ತು. ಆದರೆ ಈ ಸಭೆಗೆ ಗೂಡಂಗಡಿ ವ್ಯಾಪಾರಿಗಳ ಸಂಘಟನೆ  ಪ್ರತಿನಿಧಿಗಳನ್ನು ಆಹ್ವಾನಿಸಿರಲಿಲ್ಲ.
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries