ಮನೋಭೂಮಿಕೆ ಬೆಳೆಸುವ ನೃತ್ಯ ಕಲೆಗಳು ವ್ಯಕ್ತಿತ್ವ ಬೆಳೆಸುತ್ತದೆ=ಡಿವೈಎಸ್ಪಿ ಹರಿಶ್ಚಂದ್ರ ನಾಯಕ್
ನೃತ್ಯ ದೀಪಂ 2017 ಉದ್ಘಾಟನೆ
ಕಾಸರಗೊಡು: ಭಾರತೀಯ ಪರಂಪರೆ, ಸಾಂಸ್ಕೃತಿಕ ಪ್ರಕಾರಗಳು ವ್ಯಕ್ತಿತ್ವವನ್ನು ಬೆಳೆಸಿ, ಬೆಸೆಯುವಂತಹ ಶ್ರೀಮಂತಿಕೆ ಹೊಂದಿದೆ. ಇಂದಿನ ಆಧುನಿಕ ಜೀವನ ಶೈಲಿ ಒಟ್ಟು ಬದುಕನ್ನು ಕುಸಿಯುವಂತೆ ಮಾಡುವ ಭೀತಿ ಇದೆ. ಈ ಹಿನ್ನೆಲೆಯಲ್ಲಿ ಸಂಸ್ಕೃತಿ ಸಂವರ್ಧನೆಯ ಭಾರತೀಯ ಶಿಕ್ಷಣ, ಕಲೆಗಳಿಗೆ ಪ್ರೋತ್ಸಾಹ ನೀಡಿ ಬೆಳೆಸಬೇಕು ಎಂದು ಕಾಸರಗೋಡು ಸ್ಪೆಶಲ್ ಮೊಬೈಲ್ ಸ್ಕ್ಯಾಡ್ ಡಿವೈಎಸ್ಪಿ ಹರಿಶ್ಚಂದ್ರ ನಾಯ್ಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗಡಿನಾಡು ಕಾಸರಗೋಡಿನ ಪ್ರಸಿದ್ದ ನೃತ್ಯ ವಿದ್ಯಾಸಂಸ್ಥೆ ನಾಟ್ಯನಿಲಯಂ ಮಂಜೇಶ್ವರದ ಕಾಸರಗೋಡು ಶ್ರೀಕೃಷ್ಣ ನಾಟ್ಯಾಲಯ ವಿಭಾಗದ ನೇತೃತ್ವಲ್ಲಿ ಭಾನುವಾರ ಸಂಜೆ ಕಾಸರಗೋಡು ಉದಯಗಿರಿಯ ಶ್ರೀವಿಷ್ಣುಮೂತರ್ಿ ದೇವಾಲಯ ಪರಿಸರದಲ್ಲಿ ಆಯೋಜಿಸಲಾಗಿದ್ದ ನೃತ್ಯ ದೀಪಂ 2017 ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸುಲಲಿತ ಜೀವನ, ಬದುಕಿನ ಸಾರ್ಥಕತೆಗೆ ಸಂಸ್ಕಾರಯುತ ಜೀವನ ಪ್ರಧಾನ ಕಾರಣವಾಗಿದ್ದು, ಆಧುನಿಕ ವ್ಯವಸ್ಥೆಗಳು ಈ ಹಿನ್ನೆಲೆಯಲ್ಲಿ ಕೈಸೋತಿದೆ ಎಂದು ತಿಳಿಸಿದ ಅವರು, ಭಾರತೀಯ ಮಣ್ಣಿನ ಕಲೆ, ಸಂಸ್ಕೃತಿಗಳಿಗೆ ಸಂಸ್ಕಾರವನ್ನು ಬೆಳೆಸುವ ವಿಶೇಷತೆ ಹೊಂದಿದೆ ಎಂದು ತಿಳಿಸಿದರು. ಯುವ ಸಮೂಹದ ಅಪರಾಧಿ ಮನೋವೃತ್ತಿಗೆ ಕಡಿವಾಣ ಹಾಕಿ ನಿಯಂತ್ರಿಸುವಲ್ಲಿ ಮನೋಭೂಮಿಕೆಗಳನ್ನು ಬೆಸೆದು ಬೆಳೆಸುವ ನೃತ್ಯ ಕಲೆಗಳ ಪರಿಚಯ ಹೆಚ್ಚು ಪರಿಣಾಮಕಾರಿಯೆಂದು ತಿಳಿಸಿದ ಅವರು, ಒತ್ತಡದ ಬದುಕು ಸಮಸ್ಯೆಗಳಿಗೆ ಎಳಸುತ್ತದೆ. ಮಕ್ಕಳ ಆಸಕ್ತಿ, ಸಾಧ್ಯತೆಗಳನ್ನು ಮನಗಂಡು ಪ್ರೇರಣೆ ನೀಡಬೇಕು ಎಂದು ತಿಳಿಸಿದರು.
ಮಧೂರು ಗ್ರಾ.ಪಂ. ಉಪಾಧ್ಯಕ್ಷ ದಿವಾಕರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯ ನೃತ್ಯ ವಿದುಷಃ ಶಶಿಕಲಾ ಟೀಚರ್, ಉಷಾ ಈಶ್ವರ ಭಟ್, ಸಿಂಧೂ ಭಾಸ್ಕರ, ಲತಾ ಶಶಿಧರ್, ಸಂಗೀತ ವಿದ್ವಾನ್ ಸದಾಶಿವ ಆಚಾರ್ಯ, ಅನುಷಾ ಮಾವಿನಕಟ್ಟೆ, ಛಾಯಾಗ್ರಾಹಕ ಅಖಿಲೇಶ್ ನಗುಮುಗಂರವರನ್ನು ವಿಶೇಷ ಆದಾರಗಳೊಂದಿಗೆ ಸನ್ಮಾನಿಸಲಾಯಿತು. ಗುರು ಬಾಲಕೃಷ್ಣ ಮಂಜೇಶ್ವರ, ಶಮರ್ಿಳಾ ಬಾಲಕೃಷ್ಣ, ಕಿರಣ್ ಮಂಜೇಶ್ವರ ಉಪಸ್ಥಿತರಿದ್ದರು. ಸನ್ಮಾನಿತರ ಪರವಾಗಿ ಶಶಿಕಲಾ ಟೀಚರ್ ಹಾಗೂ ಅಖಿಲೇಶ್ ನಗುಮುಗಂ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವಿದ್ಯಾ ಗಣೇಶ್ ಅಣಂಗೂರು ಸ್ವಾಗತಿಸಿ, ಕಿಶೋರ್ ವಂದಿಸಿದರು. ಪವಿತ್ರನ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಾಟ್ಯ ನಿಲಯದ ವಿದ್ಯಾಥರ್ಿಗಳ ರಂಗಪ್ರವೇಶ, ಭರತನಾಟ್ಯ ಪ್ರದರ್ಶನಗಳು ನಡೆದವು.