HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ವಿದ್ಯಾನಗರ-ಮುಂಡಿತ್ತಡ್ಕ ರಸ್ತೆ ಶೋಚನೀಯಾವಸ್ಥೆ ಪರಿಹರಿಸಲು ಕ್ರಿಯಾ ಸಮಿತಿ ರೂಪೀಕರಣ
   ಬದಿಯಡ್ಕ: ಹಲವಾರು ವರ್ಷಗಳಿಂದ ಡಾಮರೀಕರಣಗೊಳ್ಳದೆ ಅಲ್ಲಲ್ಲಿ ಹೊಂಡಗುಂಡಿಗಳಿಂದ ಸಂಚಾರ ತೊಡಕಾಗಿ ತೀವ್ರ ಸಮಸ್ಯೆಗೆ ಕಾರಣವಾಗಿರುವ ವಿದ್ಯಾನಗರ-ಮಾನ್ಯ-ಮುಮಡಿತ್ತಡ್ಕ ರಸ್ತೆಯನ್ನು ಅಭಿವೃದ್ದಿಪಡಿಸುವಂತೆ ಒತ್ತಾಯಿಸಿ ಶುಕ್ರವಾರ ರಾತ್ರಿ ಬಾರಿಕ್ಕಾಡ್ ಕಲಾ ಕ್ಲಬ್ ಪರಿಸರದಲ್ಲಿ ಸೇರಿದ ಜನಪರ ಕ್ರಿಯಾ ಸಮಿತಿ ಹೋರಾಟದ ಮುನ್ಸೂಚನೆ ನೀಡಿದೆ.
     ಜಿಲ್ಲಾ ಕೇಂದ್ರಸ್ಥಾನವಾಗಿರುವ ಕಲೆಕ್ಟರೇಟ್ ಸನಿಹ ಹಾದುಹೋಗುವ ವಿದ್ಯಾನಗರ-ಮುಂಡಿತ್ತಡ್ಕ ರಸ್ತೆ ಜನನಿಬಿಡ ರಸ್ತೆಯಾಗಿದ್ದು, ದಿನನಿತ್ಯ ನೂರಾರು ವಾಹನಗಳು-ಸಾರ್ವಜನಿಕರು ಸಂಚರಿಸುತ್ತಾರೆ. ಮುಂಡಿತ್ತಡ್ಕ, ಪಳ್ಳ, ಕನ್ನೆಪ್ಪಾಡಿ, ನೀಚರ್ಾಲು, ಮಾನ್ಯ, ಕೊಲ್ಲಂಗಾನ, ಕಲ್ಲಕಟ್ಟ ಪರಿಸರದ ಸಹಿತ ಇನ್ನಿತರ ಪ್ರದೇಶಗಳಿಂದ ಕಾಸರಗೋಡಿಗೆ ತಲಪಲು ಅತ್ಯಂತ ನಿಕಟವಾಗಿರುವ ಈ ರಸ್ತೆಯ ಕಳೆದ 3 ವರ್ಷಗಳ ಶೋಚನೀಯಾವಸ್ಥೆ ಸಮಸ್ಯೆ ಸೃಷ್ಟಿಸಿದೆ. ರಸ್ತೆ ಅವ್ಯವಸ್ಥೆ ಸರಿಪಡಿಸಲು ನಿರಂತರ ಬೇಡಿಕೆ ಸಲ್ಲಿಸಿದ್ದರೂ ಅಧಿಕೃತರು ಕಣ್ಣೆತ್ತಿಯೂ ಗಮನಿಸದೆ ತೀವ್ರ ನಿರ್ಲಕ್ಷ್ಯವಹಿಸುತ್ತಿರುವುದರಿಂದ ಸಾರ್ವಜನಿಕರು ಒಗ್ಗಟ್ಟಾಗಿ ಹೋರಾಟಕ್ಕೆ ಮುಂದಾಗಬೇಕಾದ ಸ್ಥಿತಿ ನಿಮರ್ಾಣವಾಗಿದ್ದು, ಇದರಿಂದ ಶುಕ್ರವಾರ ರಾತ್ರಿ ಸಾರ್ವಜನಿಕರು, ವಿವಿಧ ವಾಹನ ಮಾಲಕರು-ಚಾಲಕರು, ವಿದ್ಯಾಥರ್ಿಗಳ ಸಹಿತ ನೂರಕ್ಕಿಂತಲೂ ಮಿಕ್ಕಿದ ಜನರು ಭಾಗವಹಿಸಿ ಚಚರ್ಿಸಿದ ನಿರ್ಣಯದ ಮೇರೆಗೆ ಕ್ರಿಯಾ ಸಮಿತಿಗೆ ರೂಪು ನೀಡಲಾಗಿದೆ.
  ಅಧಿಕೃತರು ಶೀಘ್ರ ಡಾಮರೀಕರಣ ಪ್ರಕ್ರಿಯೆಗೆ ಚಾಲನೆ ನೀಡಬೇಕು.ಇನ್ನೂ ನಿರ್ಲಕ್ಷ್ಯ ಮುಂದುವರಿದರೆ ಕ್ರಿಯಾ ಸಮಿತಿ ಪ್ರಭಲ ಹೋರಾಟಕ್ಕೆ ಧುಮುಕಿ ಬೇಡಿಕೆ ಪೂರೈಸಲು ಮುನ್ನುಗ್ಗುವುದು ಎಂದು ಕ್ರಿಯಾ ಸಮಿತಿ ತೀಮರ್ಾನ ಕೈಗೊಂಡಿತು.
  ಸಭೆಯಲ್ಲಿ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ಸಲಾಂ(ಅಧ್ಯಕ್ಷ), ಎಂ.ಎಚ್.ಜನಾರ್ಧನ್(ಉಪಾಧ್ಯಕ್ಷ), ಹನೀಫ್ ಪೊಯ್ಯ, ಅಶ್ರಫ್ ನಾಲತ್ತಡ್ಕ, ಅಶ್ರಫ್ ಸೋಂಕಾಲ್, ಅಜಿತ್ ಪಾಂಬಾಚಿಕಡವು, ಆಸೀಫ್ ಪಾಟಲಡ್ಕ, ಸುಬೈರ್ ನಾಯ್ಮಾರ್ಮೂಲೆ, ಕುಮಾರನ್ ಪಾಂಬಾಚಿಕಡವು, ಜಬ್ಬಾರ್ ಹಿಮಾಯತ್ನಗರ್ ರನ್ನೊಳಗೊಂಡ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಮಾಡಲಾಯಿತು.
   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries