HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                      ಕೃಷಿ ನಾಶ ಅವಲೋಕನಕ್ಕೆ ಸಚಿವರ ಆದೇಶ
    ಕಾಸರಗೋಡು: ರಾಜ್ಯದಲ್ಲಿ  ಹಲವಾರು ಕೃಷಿಕರ ಬೆಳೆಗಳಿಗೆ ಚಂಡಮಾರುತದಿಂದಾಗಿ ವ್ಯಾಪಕ ನಾಶನಷ್ಟ  ಉಂಟಾಗಿರುವ ಹಿನ್ನೆಲೆಯಲ್ಲಿ  ಅಧಿಕಾರಿಗಳು ಸ್ಥಳ ಸಂದರ್ಶನ ನಡೆಸಿ ಸಮಗ್ರ ವರದಿ ತಯಾರಿಸಬೇಕು ಎಂದು ಕೃಷಿ ಸಚಿವ ವಿ.ಎಸ್.ಸುನಿಲ್ಕುಮಾರ್ ಆದೇಶ ನೀಡಿದ್ದಾರೆ.
    ಚಂಡಮಾರುತದಿಂದಾಗಿ ಕೃಷಿಕರಿಗೆ ಭಾರೀ ನಷ್ಟವಾಗಿರುವ ಬಗ್ಗೆ  ಪ್ರಾಥಮಿಕ ವರದಿ ತಿಳಿಸಿದೆ. ಇದರಂತೆ ಆರು ಜಿಲ್ಲೆಗಳಲ್ಲಿ  1662 ಹೆಕ್ಟೇರ್ ಪ್ರದೇಶದಲ್ಲಿ  15,005 ಮಂದಿ ಕೃಷಿಕರಿಗೆ 33 ಕೋಟಿ ರೂಪಾಯಿ ಕೃಷಿ ನಾಶ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.
    ಕೃಷಿ ನಾಶ ಉಂಟಾದ ಎಲ್ಲಾ  ಸ್ಥಳಗಳಲ್ಲಿ  ಕೃಷಿ ಮತ್ತು ಕಂದಾಯ ಇಲಾಖೆ, ಪಂಚಾಯತ್ ಸದಸ್ಯರನ್ನು  ಒಳಗೊಂಡ ತಂಡವು ಡಿ.8ರಂದು ಸ್ಥಳ ಸಂದಶರ್ಿಸಿ ಮೌಲ್ಯಮಾಪನ ನಡೆಸಲಿದೆ. ಪಂಚಾಯತ್ ಮಟ್ಟದಲ್ಲಿ  ಕೃಷಿ ಅಧಿಕಾರಿ, ಗ್ರಾಮಾಧಿಕಾರಿ, ಕೃಷಿ ಸಹಾಯಕ ನಿದರ್ೇಶಕರು, ನೋಡೆಲ್ ಸಹಾಯಕ ನಿದರ್ೇಶಕರು, ಪಂಚಾಯತ್, ಬ್ಲಾಕ್, ಜಿಲ್ಲಾ  ಮಟ್ಟದ ಸದಸ್ಯರನ್ನು  ಒಳಗೊಂಡ ತಂಡ ಪರಿಶೀಲನೆ ನಡೆಸಲಿದೆ.
   ಕೃಷಿಕರಿಂದ ಆಗಾಗ್ಗೆ  ನೇರವಾಗಿ ಅಜರ್ಿಗಳನ್ನು  ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳು ಸಾಧ್ಯವಾದಷ್ಟು  ಸಂದರ್ಶನ ಸಂದರ್ಭದಲ್ಲೇ ಅಜರ್ಿಗಳನ್ನು  ಶಿಫಾರಸು ಮಾಡಬೇಕು ಎಂದು ಸಚಿವರು ಆದೇಶಿಸಿದ್ದಾರೆ. ಸಂದರ್ಶನಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಳನ್ನು  ಮಾಧ್ಯಮಗಳ ಮೂಲಕ  ಮುಂಚಿತವಾಗಿ ತಿಳಿಸಲಾಗುವುದು.
    ಲಭಿಸುವ ಅಜರ್ಿಗಳನ್ನು  ಪರಿಶೀಲಿಸಿ ಕೃಷಿಕರಿಗೆ ಮಂಜೂರುಗೊಳಿಸಬಹುದಾದ ಸೌಲಭ್ಯಗಳನ್ನು  ಶಿಫಾರಸು ಮಾಡಿ, ಕೃಷಿ - ಕಂದಾಯ ಇಲಾಖೆಗಳಲ್ಲಿ  ದೊರಕಬೇಕಾದ ಮೊತ್ತವನ್ನು  ಪ್ರತ್ಯೇಕವಾಗಿ ಸಂಗ್ರಹಿಸಲಾಗುವುದು. ಕಂದಾಯ ಇಲಾಖೆಯಿಂದ ಲಭಿಸಬೇಕಾದ ಮೊತ್ತಕ್ಕಾಗಿ ಆಯಾ ಜಿಲ್ಲಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ  ತಿಳಿಸಲಾಗುವುದು ಎಂದು ಕೃಷಿ ಸಚಿವರು ವಿವರಣೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries