HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಸಚಿವ ಎಂ.ಎಂ.ಮಣಿ ಪ್ರಜಾಪ್ರಭುುತ್ವ ವ್ಯವಸ್ಥೆಗೆ ಕಳಂಕ : ಹಿಂದು ಐಕ್ಯ ವೇದಿಕೆ
     ಕಾಸರಗೋಡು: ಹಿಂದು ಐಕ್ಯ ವೇದಿಕೆಯ ರಾಜ್ಯಾ`್ಯಕ್ಷೆ ಕೆ.ಪಿ.ಶಶಿಕಲಾ ಟೀಚರ್ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶರ್ಿ ಶೋಭಾ ಸುರೇಂದ್ರನ್ ಅವರ ವಿರುದ್ಧ ಸಿಪಿಎಂನ ಪ್ರಾದೇಶಿಕ ಸಮ್ಮೇಳನದ ಸಾರ್ವಜನಿಕ ಸಮಾರೋಪ ಸಮಾರಂಭದಲ್ಲಿ ಸಚಿವ ಎಂ.ಎಂ.ಮಣಿ ಪ್ರಯೋಗಿಸಿದ ಶಬ್ದ ಪ್ರಯೋಗವು ಅತ್ಯಂತ ಕೀಳು ಮಟ್ಟದ, ಅವಹೇಳನಕಾರಿಯಾದ ಮತ್ತು ಸ್ತ್ರೀ ಸಮಾಜಕ್ಕೆ ಸವಾಲು ಹಾಕಿದಂತಾಗಿದೆ ಎಂದು ಹಿಂದು ಐಕ್ಯ ವೇದಿಕೆಯ ಕಾಸರಗೋಡು ಜಿಲ್ಲಾ ಸಮಿತಿ ಸಭೆಯು ಆಕ್ರೋಶ ವ್ಯಕ್ತಪಡಿಸಿದೆ.
   ಇಡೀ ಸ್ತ್ರೀ ಸಮಾಜವನ್ನೇ ಅವಹೇಳನ ಮಾಡಿಕೊಂಡು ಕೇವಲ ಪಕ್ಷದ ಕಾರ್ಯಕರ್ತರ ಚಪ್ಪಾಳೆ ಗಿಟ್ಟಿಸುವ ಉದ್ದೇಶದೊಂದಿಗೆ ಅವರು ಈ ಶಬ್ದ ಪ್ರಯೋಗಳನ್ನು ಮಾಡಿದ್ದರೂ ತಾನು ಏನು ಮಾಡಿದರೂ ಕೇಳುವವರು ಯಾರೂ ಇಲ್ಲವೆನ್ನುವ ಉದ್ದಟತನವನ್ನು ಸಚಿವರು ತೋರಿದ್ದಾರೆ. ಕೇರಳದ ಹಿಂದು ಸಮಾಜದ ಶಬ್ಧವಾಗಿ ಬದಲಾಗಿರುವ ಕೆ.ಪಿ.ಶಶಿಕಲಾ ಟೀಚರ್ ಅವರನ್ನು ಸಾರ್ವಜನಿಕ ವೇದಿಕೆಯಲ್ಲಿ ಅತ್ಯಂತ ಅವಹೇಳನಕಾರಿಯಾಗಿ ನಿಂದಿಸಿದ ಮಣಿಯ ವಿರುದ್ಧ ಮುಖ್ಯಮಂತ್ರಿಯವರು ಕೂಡಲೇ ಶಿಸ್ತು ಕ್ರಮವನ್ನು ಕೈಗೊಳ್ಳಬೇಕು. ಸಚಿವರಾದ ಬಳಿಕ ನಿರಂತರವಾಗಿ ಸ್ತ್ರೀ ಸಮಾಜವನ್ನು ಅವಹೇಳನ ಮಾಡುತ್ತಿರುವ ವ್ಯಕ್ತಿಯೋರ್ವರು ಸಚಿವ ಹುದ್ದೆಯನ್ನು ಅಲಂಕರಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕವಾಗಿದೆ ಎಂದು ಐಕ್ಯವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
   ಸಚಿವರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರವು ಮುಂದೆ ಬರಬೇಕು. ತನ್ನ ಹೇಳಿಕೆಯನ್ನು ಸಚಿವರು ಹಿಂತೆಗೆದುಕೊಂಡು ಸಾರ್ವಜನಿಕವಾಗಿ ಮಹಿಳಾ ಸಮಾಜದ ಮುಂದೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನ್ಯಾಯಾಲಯವನ್ನು ಸಮೀಪಿಸಲಾಗುವುದು. ಮಾತ್ರವಲ್ಲ ಸಚಿವರನ್ನು ಮತ್ತೊಮ್ಮೆ ಕಾಸರಗೋಡಿಗೆ ಕಾಲೂರಲು ಬಿಡಲಾರೆವು. ಅವರನ್ನು ದಾರಿಯಲ್ಲಿಯೇ ತಡೆಯಲಾಗುವುದು ಎಂದು ಐಕ್ಯ ವೇದಿಕೆಯು ಮುನ್ನೆಚ್ಚರಿಕೆ ನೀಡಿದೆ.
   ಐಕ್ಯವೇದಿಕೆಯ ಜಿಲ್ಲಾಧ್ಯಕ್ಷ ಕರುಣಾಕರ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಿಬಿನ್ ತೃಕ್ಕರಿಪುರ, ಕಾಯರ್ಾಧ್ಯಕ್ಷ ವಾಮನ ಆಚಾರ್ಯ ಬೋವಿಕ್ಕಾನ, ಸಂಘಟನಾ ಕಾರ್ಯದಶರ್ಿ ರಾಜನ್ ಮುಳಿಯಾರ್, ಮಹಿಳಾ ಐಕ್ಯವೇದಿಕೆಯ ರಾಜ್ಯ ಕಾರ್ಯದಶರ್ಿ ಓಮನಾ ಮುರಳಿ, ಜಿಲಾಧ್ಯಕ್ಷೆ ಸತೀ ಕೋಡೋತ್, ಪ್ರಧಾನ ಕಾರ್ಯದಶರ್ಿ ವಸಂತಿ ಕೃಷ್ಣನ್ ಕುಂಬಳೆ ಮೊದಲಾದವರು ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries