HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಬಂದರುಗಳ ಅಭಿವೃದ್ಧಿ ಅನಿವಾರ್ಯ : ಸಚಿವ ರಾಮಚಂದ್ರನ್ ಕಡನ್ನಪಳ್ಳಿ
   ಕಾಸರಗೋಡು: ಯಾವುದೇ ರಾಜ್ಯಗಳ ಅಭಿವೃದ್ಧಿಗೆ ವಾಣಿಜ್ಯ ಹಾಗೂ ಕೈಗಾರಿಕೆಗಳ ಏಳಿಗೆಯು ಅತ್ಯಗತ್ಯ. ಜತೆಗೆ ಇದಕ್ಕಾಗಿ ಬಂದರುಗಳ ಅಭಿವೃದ್ಧಿಯು ಅನಿವಾರ್ಯವಾಗಿದೆ ಎಂದು ರಾಜ್ಯ ಬಂದರು-ಮ್ಯೂಸಿಯಂ ಪ್ರಾಚ್ಯವಸ್ತು ಖಾತೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ ತಿಳಿಸಿದ್ದಾರೆ.
   ಕಾಸರಗೋಡು ರೈಲು ನಿಲ್ದಾಣದ ಹಿಂಭಾಗದಲ್ಲಿರುವ ಬಂದರು ಕಚೇರಿ ಆವರಣದಲ್ಲಿ ನೂತನವಾಗಿ ನಿಮರ್ಿಸಲಾದ ಬಂದರು ಕಚೇರಿ ಮತ್ತು ಕ್ವಾಟಸರ್್ನ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
   ಇಂದು ರಸ್ತೆ ಮೂಲಕವಿರುವ ದೀರ್ಘ ದೂರದ ಸಂಚಾರವು ತೀರಾ ತ್ರಾಸದಾಯಕವಾಗಿದೆ. ಇದಕ್ಕೆ ಏಕೈಕ ಪರಿಹಾರವು ಜಲಸಾರಿಗೆಯಾಗಿದೆ. ಆದುದರಿಂದ ಇದನ್ನು ಜಾರಿಗೊಳಿಸಲು ಕೇರಳ ಸರಕಾರವು ತೀವ್ರ ಮುತುವಜರ್ಿವಹಿಸಿದೆ ಎಂದು ಅವರು ತಿಳಿಸಿದರು.
    ಯಾವುದೇ ಪ್ರದೇಶದ ಅಭಿವೃದ್ಧಿಗೆ ಎಲ್ಲರೂ ಪಕ್ಷ, ಜಾತಿ, ಭೇದ ಮರೆತು ಕಾರ್ಯವೆಸಗಬೇಕು. ಅಲ್ಲದೆ ಇದಕ್ಕೆ ಆ ಪರಿಸರದ ಜನರ ಪಾಲುದಾರಿಕೆಯೂ ಅತ್ಯವಶ್ಯಕವಾಗಿದೆ. ಆಗ ಮಾತ್ರವೇ ಆ ಪ್ರದೇಶವು ಹೆಚ್ಚಿನ ಅಭಿವೃದ್ಧಿಯನ್ನು ಹೊಂದಲು ಸಾಧ್ಯ. ಇಲ್ಲಿನ ಬಂದರು ಕಚೇರಿಯಲ್ಲಿ ನೌಕರರ ಕೊರತೆ ಇರುವುದನ್ನು ಸಂಬಂಧಪಟ್ಟವರು ಈಗಾಗಲೇ ತನ್ನ ಗಮನಕ್ಕೆ ತರಲಾಗಿದೆ. ಅದನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ಸಚಿವರು ತಿಳಿಸಿದರು. ಇಲ್ಲಿನ ಸಮುದ್ರದ ಹೊಳೆ ಬದಿಯಿಂದ ಡ್ರಜ್ಜಿಂಗ್ ಮೂಲಕ ಸಂಗ್ರಹಿಸುವ ಮರಳು ಮೂಲಕ ಸರಕಾರದ ಬೊಕ್ಕಸಕ್ಕೆ ಪ್ರತೀ ತಿಂಗಳು ಒಂದು ಕೋಟಿ ರೂ.ಲಭಿಸುತ್ತಿದೆ. ಬಂದರು ಕಚೇರಿ ಮತ್ತು ಕ್ವಾಟಸರ್್ ನಿಮರ್ಾಣಕ್ಕೆ 2.33ಕೋಟಿ ರೂ.ವನ್ನು ವ್ಯಯಿಸಲಾಗಿದೆ ಎಂದು ಅವರು ತಿಳಿಸಿದರು.
   ಸಮಾರಂಭದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಸಾಂಸದ ಪಿ.ಕರುಣಾಕರನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿವಿಧ ಕ್ಷೇತ್ರದ ಗಣ್ಯರಾದ ಎ.ಎಂ.ಕಡವತ್ತ್, ಅನಂತನ್ ನಂಬ್ಯಾರ್, ಜಿ.ನಾರಾಯಣನ್, ಕೆ.ಕೃಷ್ಣನ್ ನಂಬ್ಯಾರ್, ಕುರ್ಯಾಕೋಸ್, ಕೆ.ವಿಜಿ ಮತ್ತಿತರರು ಶು`ಹಾರೈಸಿದರು. ಕ್ಯಾಪ್ಟನ್ ಅಶ್ವಿನಿ ಪ್ರತಾಪ್ ಸ್ವಾಗತಿಸಿದರು. ಮನೋಜ್ಕುಮಾರ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries