ಸಮರಸ ವ್ಯಂಗ್ಯ ತರಂಗ:
ಸನ್ಮಿತ್ರರೇ,
ವಿಶಿಷ್ಟವಾಗಿ ಬೆಳೆದುಬಂದಿರುವ ಮನುಷ್ಯನ ಮನೋ ವಿಹಾರದಲ್ಲಿ ವಿಷಯಗಳನ್ನು ಗ್ರಹಿಸುವ, ಅಥರ್ೈಸುವ ಮತ್ತು ಇತರರೊಂದಿಗೆ ಹಂಚುವ ಪ್ರಕ್ರಿಯೆಗೆ ಹೊಸತನ್ನು ನಿಮರ್ಿಸುವ ಶಕ್ತಿ ಇದೆ. ಇಲ್ಲಿ ಹೊಸತು ಎಂದರೆ, ಏನಿದೆಯೋ ಅದು ಕೆಲವೊಮ್ಮೆ ಬೇರೊಂದು ಕೋನದಲ್ಲಿ ಮರುಹುಟ್ಟು ಪಡೆಯುವುದಿರಬಹುದು, ಅಥವಾ ಹೊಸತರ ಆವಿಭರ್ಾವವೂ ಆಗಬಹುದು.
ಇಂದಿನ ಕಾಲಘಟ್ಟದಂತೆ ದಿನನಿತ್ಯದ ವಸ್ತು ವಿಷಯಗಳ ವಿಶ್ಲೇಷಣೆ ವಿವಿಧ ಕೋನಗಳಲ್ಲಿ ಸರಿತಪ್ಪುಗಳ ವಿಮಶರ್ಾತ್ಮಕತೆಯೊಂದಿಗೆ, ಮತ್ತೆ ಕೆಲವೊಮ್ಮೆ ಮೂಲ ಸಿದ್ದಾಂತಕ್ಕೆ ಬದ್ದರಾಗಿವೂ ಇದೆಯೆಂಬುದು ವಿಶೇಷ. ಇಂತಹ ವಿಶ್ಲೇಷಣಾತ್ಮಕತೆಗೆ ಇಂಬು ನೀಡುವಲ್ಲಿ ಚಿತ್ರಗಳು ಕಣ್ಣನ್ನು ಹೊಸತನಕ್ಕೆ ತೆರೆಸಿಕೊಳ್ಳುತ್ತದೆ ಮತ್ತು ಅದಕ್ಕಾಗಿ ಕಾತರಗೊಳಿಸುತ್ತದೆ.
ಯಾವುದೇ ಬರಹ, ಮಾತುಗಳು ಹೆಚ್ಚು ಕ್ರಿಯಾತ್ಮಕವಾಗುವಲ್ಲಿ ಅಕ್ಷುಗಳ ಭಿತ್ತಿಗೆ ಪಟಗಳು ರಾಚುವಂತಿದ್ದರೆ ಪರಿಣಾಮ ಎಣಿಸಿದ್ದಕ್ಕಿಂತ ಭಿನ್ನವಾಗಿ, ಜೊತೆಗೆ ಪರಿಣಾಮಕಾರಿಯಾಗಿ ಮನ ಮುಟ್ಟುತ್ತದೆ. ಈ ಹಿನ್ನೆಲೆಯಲ್ಲಿ ಬೆಳೆದು ಬಂದ ಚಿತ್ರ ಕಲಾವಂತಿಕೆ ಇಂದು ಬೇರೆಬೇರೆ ಕವಲುಗಳಲ್ಲಿ ಹೆಮ್ಮರವಾಗಿ ನಿರೀಕ್ಷೆಗಳನ್ನು ತಣಿಸುತ್ತಿವೆ.
ಹೀಗೆ ಬೆಳೆದುಬಂದ ಚಿತ್ರ ಪರಂಪರೆಯಲ್ಲಿ ವ್ಯಂಗ್ಯ ಚಿತ್ರ ಮಾಧ್ಯಮ ಕ್ಷೇತ್ರದ ಜೀವರಕ್ಷಕ ತುಳಸೀದಳಗಳೆಸರು. ಆಳುವವರು, ಆಳಿಸಿಕೊಳ್ಳುವವರ ಶತಶತಮಾನಗಳ ಬೇಲಿಗಳು ಆಚೀಚೆ ಅಲುಗಾಡುವಲ್ಲಿ ಇಂತಹ ವ್ಯಂಗ್ಯ ಚಿತ್ರಗಳ ಕೊಡುಗೆ ಮಹತ್ತರ. ಈ ಕಾರಣದಿಂದ ಸುದ್ದಿಯ ಜೊತೆಜೊತೆಗೆ ವಾರದಲ್ಲಿ ಕೆಲವು ದಿನ ವ್ಯಂಗ್ಯ ಚಿತ್ರಗಳ ಮೂಲಕ ಸಮರಸ ಸುದ್ದಿ ಇಂದಿನಿಂದ ಓದುಗರ ಮುಂದೆ ಪ್ರಕಟಗೊಳ್ಳಲು ಮುಂದಡಿಯಿರಿಸುತ್ತಿದೆ. ಯುವ ಪತ್ರಕರ್ತ, ವ್ಯಂಗ್ಯ ಚಿತ್ರ ಕಲಾವಿದ ವಿವೇಕ್ ಆದಿತ್ಯ ಈ ನಿಟ್ಟಿನಲ್ಲಿ ಸಮರಸದೊಂದಿಗೆ ಕೈಜೋಡಿಸಿ ಮನೋ ಭಿತ್ತಿಯೊಳಗಿನ ಚಿಂತನೆಯ ಹರಿವನ್ನು ವೇಗಗೊಳಿಸಲು ನಮ್ಮೊಂದಿಗಿದ್ದಾರೆ.