ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 03, 2017
ಶ್ರೀ ಅಯ್ಯಪ್ಪ ತಿರುವಿಳಕ್ಕ್ ಮಹೋತ್ಸವ 8-9 ರಂದು
ಬದಿಯಡ್ಕ : 34ನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪ ತಿರುವಿಳಕ್ಕ್ ಮಹೋತ್ಸವವು ಡಿಸೆಂಬರ್ 8 ಮತ್ತು 9ರಂದು ಬದಿಯಡ್ಕ ಶ್ರೀ ಗಣೇಶಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
ಡಿ.8ರಂದು ಬೆಳಗ್ಗೆ 9.30ಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಉಗ್ರಾಣ ತುಂಬಿಸುವುದು. ಡಿ.9ರಂದು ಪ್ರಾತಃಕಾಲ 5.30ಕ್ಕೆ ಗಣಪತಿ ಹೋಮ, ವಿವಿಧ ಭಜನ ಸಂಘಗಳಿಂದ ಭಜನೆ, 11 ಗಂಟೆಗೆ ಚಂದ್ರಹಾಸ ರೈ ಪೆರಡಾಲ ಗುತ್ತು ಅಧ್ಯಕ್ಷತೆಯಲ್ಲಿ ಧಾಮರ್ಿಕ ಸಭೆಯನ್ನು ಉದ್ಯಮಿ ವಸಂತ ಪೈ ಬದಿಯಡ್ಕ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಪೆರಡಾಲ ಸೇವಾ ಸಹಕಾರೀ ಬ್ಯಾಂಕ್ ಅಧ್ಯಕ್ಷ ಜಯದೇವ ಖಂಡಿಗೆ, ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಧಾಮರ್ಿಕ ಉಪನ್ಯಾಸ ನೀಡಲಿರುವರು. ಹಿರಿಯರಾದ ಗೋಪಾಲ ಮಾಸ್ತರ್ ಬದಿಯಡ್ಕ, ತಿರುಪತಿ ಕುಮಾರ ಭಟ್ ಶುಭಾಶಂಸನೆಗೈಯಲಿರುವರು.
ಮಧ್ಯಾಹ್ನ ಶರಣಂ ವಿಳಿ, ಮಹಾಪೂಜೆ, ಅನ್ನದಾನ. ಅಪರಾಹ್ನ 2ರಿಂದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ತಂಡದಿಂದ `ಸುಧನ್ವ ಮೋಕ್ಷ' ಯಕ್ಷಗಾನ ತಾಳಮದ್ದಳೆ, ಸಾಯಂ 5.45ಕ್ಕೆ ಸುರೇಶ್ ಮಿಮಿಕ್ರಿ ಯಾದವ್ ಜಯನಗರ ಇವರಿಂದ ಮಿಮಿಕ್ರಿ, ಸಾಯಂ 6.45ಕ್ಕೆ ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಿಂದ ಪಾಲೆಕೊಂಬು ಮೆರವಣಿಗೆ ಹೊರಡುವುದು, 6.30ರಿಂದ ವೈಷ್ಣವಿ ನಾಟ್ಯಾಲಯ ಪುತ್ತೂರು ಪ್ರಸ್ತುತಪಡಿಸುವ ನೃತ್ಯಾಧಾರ, ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಪುತ್ತೂರು ಇವರ ಶಿಷ್ಯೆ ಕುಮಾರಿ ಹಷರ್ಿತ ಎನ್ ಬದಿಯಡ್ಕ ಇವಳಿಂದ ಭರತನಾಟ್ಯ ಮತ್ತು ಸಂಸ್ಥೆಯ ವಿದ್ಯಾಥರ್ಿಗಳಿಂದ `ಶ್ರೀಕೃಷ್ಣ ಲೀಲೆ' ನೃತ್ಯ ರೂಪಕ. ರಾತ್ರಿ 9ರಿಂದ ಮಲ್ಲ ಶ್ರೀ ದುಗರ್ಾಪರಮೇಶ್ವರೀ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ. ರಾತ್ರಿ 12.30ಕ್ಕೆ ಪೂಜೆ, ತಾಯಂಬಕ, ಅಯ್ಯಪ್ಪನ್ ಪಾಟ್, ಪೊಲಿಪ್ಪಾಟ್, ಪೂವರ್ಾಹ್ನ 3.30ಕ್ಕೆ ಕಾಲಪ್ಪೊಲಿ, ಅಗ್ನಿಪೂಜೆ, 4ಕ್ಕೆ ತಿರಿ ಉಯಿಚ್ಚಿಲ್, ಅಯ್ಯಪ್ಪ ಮತ್ತು ವಾವರನ ಯುದ್ಧ ಅಯ್ಯಪ್ಪನ್ ವಿಳಕ್ಕ್. ರಾತ್ರಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ.





