ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 03, 2017
ಬಾವಿಕ್ಕೆರೆ ರಸ್ತೆ ಸಮಸ್ಯೆ; ಕುಡಿಯುವ ನೀರಿನ ಸರಬರಾಜಿಗೆ ತಡೆ
ಮುಳ್ಳೇರಿಯ: ಹದಗೆಟ್ಟ ರಸ್ತೆಯನ್ನು ದುರಸ್ತಿ ಮಾಡದಿರುವುದು, ಜನಪ್ರತಿನಿಧಿಗಳು ಮತ್ತು ಉದ್ಯೋಗಿಗಳು ವಾಗ್ಧಾನ ನೆರವೇರಿಸದುದನ್ನು ಪ್ರತಿಭಟಿಸಿ ಜಲ ಪ್ರಾಧಿಕಾರದ ಅಭಿಯಂತರರನ್ನು ಗುರುವಾರ ತಡೆದು ಬಾವಿಕ್ಕೆರೆ ಕುಡಿಯುವ ನೀರಿನ ಯೋಜನೆಯ ನೀರು ಸರಬರಾಜಿಗೆ ಊರವರು ತಡೆಯೊಡ್ಡಿದರು.
ಇದರೊಂದಿಗೆ ಕಾಸರಗೋಡು ನಗರ ಸಭೆ ಮತ್ತು ನಾಲ್ಕು ಪಂಚಾಯಿತಿಗಳಿಗೆ ನೀರು ಸರಬರಾಜು ಸ್ಥಗಿತಗೊಂಡಿತು. ಇದರಿಂದಾಗಿ ಜಿಲ್ಲಾಧಿಕಾರಿಯವರು ತುತರ್ು ಸಭೆ ನಡೆಸಿದರು. ಭೀಮಾಕಾರದ ಕೊಳವೆಗಳನ್ನು ಜೋಡಿಸುವಾಗ ರಸ್ತೆಯು ಹಾಳಾಗುತ್ತಿದ್ದರೂ ಇದನ್ನು ದುರಸ್ತಿ ಮಾಡಲು ಯಾವುದೇ ಕ್ರಮ ಜಲ ನಿಗಮದಿಂದ ನಡೆಯುತ್ತಿಲ್ಲ. ಹೀಗಾಗಿ ಊರವರು ಒಟ್ಟಾಗಿ ಸಹಾಯಕ ಅಭಿಯಂತರ ಕೆ.ಅರುಣ್ ಅವರನ್ನು ತಡೆಯಲು ಮುಂದಾದರು. ನೀರು ಸರಬರಾಜಿಗೆ ತಡೆಯೊಡ್ಡಿದ ಕಾರಣ ಅಭಿಯಂತರರು ಅಲ್ಲಿಗೆ ತಲಪಿದ್ದರು. ಆಗ ತಡೆಯೊಡ್ಡಿದ ಘಟನೆ ನಡೆಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಆದೂರು ಎಸ್ಐ ಪ್ರಶೋಭ್ ಊರವರೊಂದಿಗೆ ಚಚರ್ೆ ನಡೆಸಿದರು. ಸಮಸ್ಯೆ ಪರಿಹರಿಸಲು ಸ್ಭೆ ಕರೆಯುವ ಜಿಲ್ಲಾಧಿಕಾರಿಯವರ ಭರವಸೆಯ ಮೇರೆಗೆ ಊರವರು ಮುಷ್ಕರದಿಂದ ಹಿಂದೆ ಸರಿದರು.
ಮೂರು ವರ್ಷಗಳ ಹಿಂದೆ ಕಾಸರಗೋಡು ನಗರ ಸಭೆಯ ವ್ಯಾಪ್ತಿಗೆ ಕುಡಿಯುವ ನೀರು ಮೊಟಕುಗೊಂಡ ಕಾರಣ ಜಿಲ್ಲಾಧಿಕಾರಿಗಳು, ಉದುಮ ಮತ್ತು ಕಾಸರಗೋಡು ಶಾಸಕರು, ಪಂಚಾಯತು ಅಧ್ಯಕ್ಷರು ಈ ವಿಷಯದಲ್ಲಿ ಚಚರ್ೆ ನಡೆಸಿ ರಸ್ತೆ ದುರಸ್ತಿಯ ಬಗ್ಗೆ ಭರವಸೆ ನೀಡಿದ್ದರು. ಆದರೆ ಭರವಸೆ ಈಡೇರಲೇ ಇಲ್ಲ.
ಮಳೆಗಾಲ ಕಳೆದ ಬಳಿಕ ಇದೀಗ ಮೇಲಿನ ರಸ್ತೆಯ ಅವಸ್ಥೆ ಶೋಚನೀಯವಾಗಿದೆ. ಹೀಗಾಗಿ ಊರವರು ಪುನಃ ಪ್ರತಿಭಟನೆ ನಡೆಸಲೇ ಬೇಕಾಯಿತು. ಪ್ರತಿಭಟನೆಗೆ ಎ.ಬಿ.ಕುಟ್ಟಿಯಾನಂ, ಕಬೀರ್ ಅಹಮ್ಮದ್, ಕಲಾಂ ಪಳ್ಳಿಕ್ಕಾಲ್, ಕೆ.ಎಂ.ಕಬೀರ್, ಮೊಯ್ದು ಮಣಿಯಂಗೋಡು, ಮುತಲೀಬ್, ಇಕ್ಬಾಲ್, ಅಬ್ದುಲ್ಲ ಬಾವಿಕ್ಕೆರೆ, ಬಷೀರ್ ಕೆಕೆಪುರಂ, ಕಲಾಂ ಮೊದಲಾದವರು ನೇತೃತ್ವ ನೀಡಿದರು.





