HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಗಡಿನಾಡಿನ ಅರಿಬೈಲು ಕಂಬಳ ಸಂಪನ್ನ
   ಮಂಜೇಶ್ವರ: ಗಡಿನಾಡು ಕಾಸರಗೊಡಿನ ಏಕೈಕ ಕಂಬಳವೆಂಬ ಖ್ಯಾತಿಯ ಅರಿಬೈಲು ಕಂಬಳ ಸೋಮವಾರ ವೈವಿಧ್ಯಮಯವಾಗಿ ನಡೆದು ಸಂಪನ್ನಗೊಂಡಿತು.
  ಸೋಮವಾರ ಅಪರಾಹ್ನ ಅರಿಬೈಲು ಶ್ರೀನಾಗಬ್ರಹ್ಮ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆಯ ಬಳಿಕ ಕ್ಷೇತ್ರದ ಪ್ರಧಾನ ಅರ್ಚಕ ರಾಧಾಕೃಷ್ಣ ಅನರ್ಿರಾಯರು ಚಾಲನೆ ನೀಡಿದರು. ಅವರು ಮಾತನಡಿ ತೌಳವ ಸಂಸ್ಕೃತಿಯ ಗಟ್ಟಿ ಬೇರಾಗಿರುವ ಕಂಬಳ ಇಲ್ಲಿಯ ಕೃಷಿ, ಸಹೋದರತೆ, ಪರಸ್ಪರ ಸಂಬಂಧಗಳ ಪ್ರತೀಕವಾಗಿ ಸಾವಿರಾರು ವರ್ಷಗಳಿಂದ ಈ ನೆಲದ ಮಣ್ಣಿಗೆ ನೀಡಿರುವ ಕೊಡುಗೆಗಳು ಅಪೂರ್ವ. ಅವನ್ನು ಮುಂದುವರಿಸಿಕೊಂಡೊಯ್ಯುವ ಶಕ್ತಿ ಎಲ್ಲರ ಅಂತರಾಳದಲ್ಲಿರಲಿ ಎಮದು ತಿಳಿಸಿದರು.
  ಕ್ಷೇತ್ರದ ಮೊಕ್ತೇಸರ ಗೋಪಾಲ ಶೆಟ್ಟಿ ಅರಿಬೈಲು ಪ್ರಾಸ್ತಾವಿಕವಾಗಿ ಮಾತನಾಡಿ ಯುವ ಸಮೂಹಕ್ಕೆ ಸಾಮಾಜಿಕ ಅಂತಸ್ಸತ್ವದ ಮೂಲ ಸ್ವರೂಪವನ್ನು ಪರಿಚಯಿಸುವಲ್ಲಿ ಪ್ರೆರಣೆಯಾಗುವ ಇಂತಹ ಆಚರಣೆಗಳು ಮನೋರಂಜನೆ ಮಾತ್ರವಾಗಿರದೆ ಸಂಬಂಧ, ಹೃದಯ ವೈಶಾಲ್ಯತೆ, ಕೃಷಿ ಸಂಸ್ಕೃತಿಯತ್ತ ಮನಮಾಡುವ ನಿಟ್ಟಿನಲ್ಲಿ ಬಲ ನೀಡಲಿ ಎಂದು ತಿಳಿಸಿ ಕಾರ್ಯಕ್ರಮ ನಿರೂಪಿಸಿದರು.
  ರಮೇಶ್ ಶೆಟ್ಟಿ, ಬಾಬು, ಅರಿಂಗಳ ತೀಪರ್ುಗಾರರಾಗಿ ಸಹಕರಿಸಿದರು. ಪಕೀರ್ ಬಂಜನ್ ಕಟ್ಟೆ, ನಾರಾಯಣ ಅರಿಬೈಲು ಸಹಕರಿಸಿದರು. ಬಳಿಕ ಕಂಬಳದ ಗದ್ದೆಯಲ್ಲಿ ಪರಂಪರಿಕ ಪೂಕರೆ ನಡೆಯಿತು. ರಾತ್ರಿ ಶ್ರೀನಾಗಬ್ರಹ್ಮರ ಸನನಿಧಿಯಲ್ಲಿ ದೇವರ ಮಹಾಪೂಜೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅರಿಬೈಲು ಶ್ರೀನಾಗಬ್ರಹ್ಮ ಯುವಕ ಮಂಡಲದ ವಾಷರ್ಿಕೋತ್ಸವ, ನೃತ್ಯ ಕಾರ್ಯಕ್ರಮ, ವಿಟ್ಲದ ವಿಠಲ ನಾಯಕ್ ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ, ಮಂಜೇಶ್ವರದ ಶಾರದಾ ಆಟರ್್ ತಂಡದವರಿಂದ ನಿತ್ಯೆ ಬನ್ನಗ ತುಳು ನಾಟಕ ಪ್ರದರ್ಶನಗೊಂಡಿತು.
     ಕಂಬಳದಲ್ಲಿ ಭಾಗವಹಿಸಿ ಬಹುಮಾನಿರಾದ ತಂಡಗಳು:
     ಕಂಬಳದಲ್ಲಿ ಕೊಡ್ಲಮೊಗರಿನ ಪಾಲೆಂಗ್ರಿ ಮೊಯ್ದೀನ್ ಕುಂಞಿ, ಪಟ್ಟತ್ತಮೊಗರು ಹೊಸಮನೆ ಕೃಷ್ಣ ಶೆಟ್ಟಿ, ಕಲ್ಲಾಜೆ ಜಗನ್ನಾಥ ಶೆಟ್ಟಿ, ತಲಪಾಡಿ ಪಂಜಲ ರವೀಂದ್ರ ಪಕಳ, ದೇರ್ಲ ಬೆಳ್ಮ ಪೊಯ್ಯೆಲು ಇಬ್ರಾಹಿಂ ಬ್ಯಾರಿ, ಕೌಡೂರು ಬೀಡು ಮಾರಪ್ಪ ಭಂಡಾರಿ, ಕುಂಜತ್ತೂರು ಹೊಸಮನೆ ಶಾಂತಪ್ಪ ಶೆಟ್ಟಿ, ಮಾಣಿಬೈಲು ವಸಂತ ಶೆಟ್ಟಿಯವರ ಕೋಣಗಳು ಕಂಬಳದಲ್ಲಿ ಪಾಲ್ಗೊಂಡವು.ಹಗ್ಗ ಹಿರಿಯ ವಿಭಾಗದಲ್ಲಿ ಕಾಡೂರು ಬೀಡು ಮಾರಪ್ಪ ಭಂಡಾರಿಯವರ ಕೋಣಗಳು ಪ್ರಥಮ, ನೇಗಿಲು ವಿಭಾಗದಲ್ಲಿ ದೇರ್ಲ ಬೆಳ್ಮ ಪೊಯ್ಯೆಲ್ ಇಬ್ರಾಹಿಂ ಬ್ಯಾರಿಯವರ ಕೋಣಗಳು ಪ್ರಥಮ ಸ್ಥಾನವನ್ನು ಗಳಿಸಿವೆ.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries