HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಪ್ರಮಾಣೀಕರಿಸಿ ನೋಡುವ ಪ್ರವೃತ್ತಿ ಮೇಧಾವಿಯಾಗಿಸುತ್ತದೆ-ಶಿಕ್ಷಕ ಪದ್ಮನಾಭ ಎಂ
   ಮುಳ್ಳೇರಿಯ : ಮನುಷ್ಯನಲ್ಲಿರುವ ಪ್ರಕೃತಿಯ ಬಗೆಗಿನ ಕುತೂಹಲ ಮತ್ತು ಅನುಭವಕ್ಕೆ ಬಂದ ಪ್ರತಿಯೊಂದನ್ನು ಪ್ರಶ್ನಿಸುವ ತಿಳಿದುಕೊಳ್ಳುವ ಪ್ರವೃತ್ತಿಯಿಂದಾಗಿ ಹೊಸ, ಹೊಸ ಸಂಶೋಧನೆಗಳು ಆವಿಷ್ಕಾರಗಳು ನಡೆದು ನಮ್ಮ ಆಧುನಿಕ ಜೀವನ ಇಷ್ಟು ಸಂಪನ್ನವಾಗಿದೆ. ಕಂಪ್ಯೂಟರ್, ಮೊಬೈಲ್ನಂತಹ ವಿಜ್ಞಾನದ ಕೌತುಕಗಳು ಇಂದು ವಿದ್ಯಾಥರ್ಿಗಳಿಗೂ ಲಭ್ಯವಾಗಿದೆ ಎಂದು ಜಿ.ಎಚ್.ಎಸ್ ಮೂಡಂಬೈಲು ಶಾಲಾ ಅಧ್ಯಾಪಕರಾದ ಪದ್ಮನಾಭ ಎಂ ಅಭಿಪ್ರಾಯಪಟ್ಟರು.
ಅವರು ಮವ್ವಾರು ಷಡಾನನ ಯುವಕ ಸಂಘ ಮತ್ತು ಗ್ರಂಥಾಲಯದ ಸಭಾಂಗಣದಲ್ಲಿ ಜರಗಿದ ಕೇರಳ ರ್ಯಾಲಿ ಫೋರ್ ಸಯನ್ಸ್-2017 ಕಾರ್ಯಕ್ರಮದ ಅಂಗವಾಗಿ ನಡೆದ ವಿಜ್ಞಾನ ರಸಪ್ರಶ್ನೆ ಮತ್ತು ಸೆಮಿನಾರ್ನಲ್ಲಿ ಉಪನ್ಯಾಸನೀಡುತ್ತಿದ್ದರು.
ಸರ್ ಐಸಕ್ ನ್ಯೂಟನ್ ನಂತಹ ಮೇಧಾವಿ, ವಿದ್ಯಾಥರ್ಿ ದಿಶೆಯಲ್ಲಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ತನ್ನ ಪ್ರತಿಭೆ ಹಾಗೂ ಪ್ರತಿಯೊಂದನ್ನು ಪ್ರಮಾಣಿಕರಿಸಿ ನೋಡುವ ಪ್ರವೃತ್ತಿಯಿಂದಾಗಿ ಹೇಗೆ ವಿಜ್ಞಾನಿಯಾಗಿ ಬೆಳೆದ ಎಂದು ವಿವರಿಸಿದರು.
ಸುಮಾರು 30ಕ್ಕಿಂತಲೂ ಹೆಚ್ಚು ಎಲ್.ಪಿ.,  ಯು.ಪಿ, ಹೈಸ್ಕೂಲ್ , ಮತ್ತು ಪ್ಲಸ್-ಟು ಮೇಲಿನ ತರಗತಿಗಳ  ವಿದ್ಯಾಥರ್ಿಗಳು ಉತ್ಸಾಹದಿಂದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಕೃಷ್ಣಮೂತರ್ಿ ಎಡಪ್ಪಾಡಿಯವರು ವಿದ್ಯಾಥರ್ಿಗಳು ಪಠ್ಯಪುಸ್ತಕದ ಓದಿಗೆ ಮಾತ್ರ ಸೀಮಿತವಾಗಬಾರದು. ಸುತ್ತಮುತ್ತಲಿನ ವಿದ್ಯಾಮಾನಗಳನ್ನು ಗಮನಿಸುತ್ತಾ ತಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಬೇಕು. ವಿದ್ಯೆಯ ಜೊತೆಗೆ ವ್ಯವಹಾರ ಜ್ಞಾನವನ್ನು ಕೂಡ ಗಳಿಸಬೇಕು. ವಾಚನಾಲಯದ ಗ್ರಂಥಭಂಡಾರವನ್ನು ವಿದ್ಯಾಥರ್ಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆನೀಡಿದರು.
ಸ್ಪಧರ್ಾ ವಿಜೇತರಿಗೆ ಪದ್ಮನಾಭ ಅವರು ಬಹುಮಾನ ವಿತರಿಸಿದರು. ಸಂಘದ ಕಾರ್ಯದಶರ್ಿ ಸದಾಶಿವ ಕೆ ಸ್ವಾಗತಿಸಿ ವಂದಿಸಿದರು. ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನು ಕೃಷ್ಣಮೂತರ್ಿ ಎಡಪ್ಪಾಡಿ, ಅಧ್ಯಾಪಿಕೆ ಶ್ಯಾಮಲ, ಅಧ್ಯಾಪಿಕೆ ವಾಣಿಶ್ರೀ ನಡೆಸಿಕೊಟ್ಟರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries