HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಪದಸಂಪತ್ತು, ಲಯ ಮತ್ತು ಆಶಯ ನಿರ್ವಹಣೆಯಲ್ಲಿ ಭಾಮಿನಿ ಷಟ್ಪದಿಯ ಯಶಸ್ಸು - ಡಾ| ಪಿ. ಶ್ರೀಕೃಷ್ಣ ಭಟ್
   ಪೆರ್ಲ: ಭಾಮಿನಿ ಷಟ್ಪದಿಯಲ್ಲಿ ಪದಸಂಪತ್ತು, ಲಯಬದ್ದತೆ ಮತ್ತು ಆಶಯದ ನಿರ್ವಹಣೆ ಬಹುಮುಖ್ಯ. ಈ ಮೂರನ್ನೂ ಮಾಡಬಲ್ಲ ಶ್ರೀಕೃಷ್ಣ ಪ್ರಸಾದ್ ಖಂಡೇರಿ ಕಾವ್ಯರಚನೆಯಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ ಎಂದು ಕಣ್ಣೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಪಿ. ಶ್ರೀಕೃಷ್ಣ ಭಟ್ ಅಭಿಪ್ರಾಯಪಟ್ಟರು.
ಅವರು ಪಾಣಾಜೆ ವಿದ್ಯಾವರ್ಧಕ ಸಂಘ, ಹಿರಿಯ ವಿದ್ಯಾಥರ್ಿ ಸಂಘ, ಸುಬೋಧ ಪ್ರೌಢಶಾಲೆ ಪಾಣಾಜೆ ಇವುಗಳ ಆಶ್ರಯದಲ್ಲಿ ನಡೆದ ಶ್ರೀಕೃಷ್ಣ ಪ್ರಸಾದ ಖಂಡೇರಿ ವಿರಚಿತ `ಸುಬೋಧ ಕುಸುಮಾಂಜಲಿ 3' ಶ್ರೀ ಭಗವದ್ಗೀತಾ ಕನ್ನಡ ಕಾವ್ಯರೂಪ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದರು.
   ಮಧುರೈ ಕಾಮರಾಜ ವಿಶ್ವವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಹರಿಕೃಷ್ಣ ಭರಣ್ಯ ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಿ.ಬಿ.ಅತರ್ಿಕಜೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ವಿಶ್ರಾಂತ ಮುಖ್ಯೋಪಾಧ್ಯಾಯ ಎಸ್. ವಾಸುದೇವ ಭಟ್ ಕೃತಿಯ ಆಯ್ದ ಪದ್ಯಗಳ ಗಾಯನ `ಕಾವ್ಯಲಹರಿ' ನಡೆಸಿಕೊಟ್ಟರು. ಸುಬೋಧ ಪ್ರೌಢಶಾಲೆಯ ವಿಶ್ರಾಂತ ಮುಖ್ಯ ಗುರು ಪಿ.ಕೃಷ್ಣ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್, ಅಧ್ಯಕ್ಷ ಕಡಂದೇಲು ಈಶ್ವರ ಭಟ್ ಉಪಸ್ಥಿತರಿದ್ದರು. ಕೃತಿಕತರ್ೃ ಶ್ರೀಕೃಷ್ಣ ಪ್ರಸಾದ್ ಸ್ವಾಗತಿಸಿ, ಶಾಲಾ ಮುಖ್ಯ ಗುರು ಎಸ್.ಕೆ.ನಾರಾಯಣ ವಂದಿಸಿದರು. ಉಪನ್ಯಾಸಕ ಬಾಲಕೃಷ್ಣ ಬೇರಿಕೆ ನಿರೂಪಣೆಗೈದರು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries