HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಭಜನಾ ಮಂದಿರಗಳು ಭಜನೆಗೆ ಪ್ರಾಧಾನ್ಯತೆ ನೀಡಬೇಕು-ಗೋಪಾಲಕೃಷ್ಣ ಕುಲಾಲ್
    ಬದಿಯಡ್ಕ : ದೇವಸ್ಥಾನ, ಮಂದಿರಗಳು ಹಿಂದೂ ಧರ್ಮದ ಆಚಾರ ವಿಚಾರಗಳನ್ನು ತಿಳಿಯಪಡಿಸುವ ಧಾಮರ್ಿಕ ಅಧ್ಯಯನ ಕೇಂದ್ರಗಳಾಗಬೇಕು. ಭಜನಾ ಮಂದಿರಗಳಲ್ಲಿ ಪೂಜೆಗಳಿಗಿಂತ ಹೆಚ್ಚಿನ ಪ್ರಾತಿನಿಧ್ಯವನ್ನು ಭಜನೆಗೆ ನೀಡಬೇಕು ಎಂದು ಧಾಮರ್ಿಕ ಮುಂದಾಳು ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ತಮ್ಮ ಧಾಮರ್ಿಕ ಭಾಷಣದಲ್ಲಿ ಹೇಳಿದರು.
ಅವರು ಶನಿವಾರ ಶ್ರೀ ಅಯ್ಯಪ್ಪ ಸೇವಾ ಸಮಿತಿ ಬದಿಯಡ್ಕ ಇದರ 34ನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪ ತಿರುವಿಳಕ್ಕ್ ಮಹೋತ್ಸವದ ಧಾಮರ್ಿಕ ಸಭೆಯಲ್ಲಿ ಮಾತನಾಡುತ್ತಿದ್ದರು.
   ಧ್ಯಾನ, ವ್ರತಗಳಿಂದ ನಮ್ಮಲ್ಲಿರುವ ಅಸುರೀ ಗುಣಗಳು ನಶಿಸಿ, ಸಾತ್ವಿಕ ಗುಣಗಳು ವೃದ್ಧಿಯಾಗುತ್ತವೆ. ಪಾಶ್ಚಾತ್ಯರು ನಮ್ಮ ಆಚಾರ ವಿಚಾರಧಾರೆಗಳತ್ತ ತಮ್ಮ ಚಿತ್ತವನ್ನು ಹರಿಯಬಿಟ್ಟರೆ ನಾವು ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿದ್ದೇವೆ ಎಂಬುದು ದುರದೃಷ್ಟಕರ. ಅನ್ಯಮತೀಯರು ಇಂದು ಹಿಂದೂ ಸಹೋದರ ಸಹೋದರಿಯರ ಚಿತ್ತವನ್ನಪಹರಿಸಿ ಮತಾಂತರ ಮಾಡುವ ಹುನ್ನಾರದಲ್ಲಿ ಸಕ್ರಿಯರಾಗಿದ್ದು ನಮ್ಮ ಸಂಸ್ಕೃತಿಗೆ ಕೊಡಲಿಯೇಟು ನೀಡುತ್ತಿದ್ದಾರೆ. ನಮ್ಮ ಮಕ್ಕಳ ಚಲನವಲನದಲ್ಲಿ ಗಮನವಿಡಬೇಕಾದುದು ಅತೀ ಅವಶ್ಯವಾಗಿದೆ ಎಂದರು.
ಹಿರಿಯರಾದ ಚಂದ್ರಹಾಸ ರೈ ಪೆರಡಾಲಗುತ್ತು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧಾಮರ್ಿಕ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಧಾಮರ್ಿಕ ಮುಂದಾಳು ವಸಂತ ಪೈ ಬದಿಯಡ್ಕ ಮಾತನಾಡುತ್ತಾ ಇಂದು ಧಾಮರ್ಿಕತೆ ಚಟುವಟಿಕೆಗಳು ಸಾಕಷ್ಟು ಸಂಘಟಿಸಲ್ಪಡುತ್ತಿದೆ. ಆದರೆ ಅಂತರಾಳದ ಭಕ್ತಿಗೆ ಕೊರತೆ ಇದೆ ಎಂದರು. ಧಾಮರ್ಿಕ ಚಟುವಟಿಕೆಗಳ ಹೆಸರಿನಲ್ಲಿ ದುಂದುವೆಚ್ಚ ಮಾಡಬಾರದು. ಭಕ್ತಿ, ಶ್ರದ್ಧೆ, ಪ್ರಾಮಾಣಿಕತೆಯು ಜೀವನದ ಎತ್ತರಕ್ಕೆ ಏರಲಿರುವ ಮೆಟ್ಟಿಲುಗಳಾಗಿವೆ ಎಂದವರು ತಿಳಿಸಿದರು.
   ಗೋಪಾಲ ಮಾಸ್ತರ್ ಬದಿಯಡ್ಕ, ತಿರುಪತಿ ಕುಮಾರ ಭಟ್ ಪೆಮರ್ುಖ ಶುಭಾಶಂಸನೆಗೈದರು. ಪ್ರ.ಕಾರ್ಯದಶರ್ಿ ಗೋಕುಲ ಬದಿಯಡ್ಕ ಸ್ವಾಗತಿಸಿ, ಜತೆಕಾರ್ಯದಶರ್ಿ ಚರಣ್ ಕುಮಾರ್ ಎಂ ವಂದಿಸಿದರು. ನಾರಾಯಣ ಮೂಲಡ್ಕ ಪ್ರಾರ್ಥನೆಗೈದು, ನಿರಂಜನ ರೈ ಪೆರಡಾಲ ನಿರೂಪಣೆಗೈದರು.
ಬೆಳಗ್ಗೆ ಗಣಪತಿ ಹೋಮ, ವಿವಿಧ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ ಶರಣಂ ವಿಳಿ, ಮಹಾಪೂಜೆ, ಅನ್ನದಾನ, ಅಪರಾಹ್ನ ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಇವರಿಂದ ಯಕ್ಷಗಾನ ತಾಳಮದ್ದಳೆ, ಸಾಯಂಕಾಲ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಿಂದ ಪಾಲೆಕೊಂಬು ಮೆರವಣಿಗೆ ನಡೆಯಿತು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries