HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ವಿದ್ಯಾಪೀಠದಲ್ಲಿ ಮಾತಾ-ಪಿತೃ ಪೂಜನ
    ಬದಿಯಡ್ಕ : ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ದೇವರು, ತನ್ನ ಭವಿಷ್ಯಕ್ಕಾಗಿ ಅವಿರತ ದುಡಿಮೆಗೈಯುತ್ತಿರುವ ತನ್ನ ಅಮ್ಮನನ್ನು ಪೂಜಿಸುವ ಸಂಸ್ಕಾರ ಭರಿತ ಕಾರ್ಯಕ್ರವೇ ಮಾತಾಪಿತೃ ಪೂಜನ ಎಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ನುಡಿದರು.
ಅವರು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶುಕ್ರವಾರ ನಡೆದ `ಮಾತಾ ಪಿತೃ ಪೂಜನ' ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
   ಮಾನವಾತೀತವಾದ ಎಲ್ಲವನ್ನೂ ನಿಯಂತ್ರಿಸುವ ಸರ್ವ ನಿಯಾಮಕ ದೇವರ ಅನುಗ್ರಹ, ಗುರುಹಿರಿಯರ ಶುಭಾಶೀವರ್ಾದ, ಜೊತೆಯಲ್ಲಿ ಸ್ವಪ್ರಯತ್ನ ಇದ್ದಾಗ ಮಾತ್ರ ಒಬ್ಬ ವ್ಯಕ್ತಿ ವಿಜಯಿಯಾಗಲು ಸಾಧ್ಯ. ತನ್ನ ತಂದೆ ತಾಯಿಯ ಪಾದ ಮುಟ್ಟಿ ನಮಸ್ಕರಿಸುವುದು ಶೋಕಿಗಾಗಿ ಅಲ್ಲ. ಬದಲಾಗಿ ತನ್ನ ಬದುಕನ್ನು ಹಸನುಗೊಳಿಸುವುದಕ್ಕೆ ಧೈರ್ಯವನ್ನು ನೀಡಬೇಕು ಎಂಬ ಮನೋನಿವೇದನೆಯಾಗಿದೆ. ಬಂದಿರುವ ಎಲ್ಲಾ ಪಾಲಕರೂ ನಿಮ್ಮ ವಂಶೋದ್ಧಾರಕರು ಸುಸಂಸ್ಕೃತರಾಗಿ ಬಾಳಿ ಬದುಕಲಿ ಎಂಬುದಾಗಿ ಆಶೀರ್ವದಿಸಿ ಎಂದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲೀಲಾವತಿ ಕನಕಪ್ಪಾಡಿ ಮಾತನಾಡುತ್ತಾ ವಿದ್ಯಾಭ್ಯಾಸದ ಜೊತೆಗೆ ಕೌಟುಂಬಿಕ ಸಾಮರಸ್ಯ, ಸಂಸ್ಕಾರಭರಿತ ಬದುಕು ಹಾಗೂ ಉತ್ತಮ ಮಾರ್ಗದರ್ಶನ ನಮ್ಮ ಮಕ್ಕಳಿಗೆ ಲಭಿಸುತ್ತಿರುವುದು ನಮ್ಮ ಪಾಲಿನ ಪುಣ್ಯ ಎಂದರು.
ಬೆಳಗ್ಗೆ ಗುರುವಂದನೆ, ಪ್ರಾರ್ಥನೆಯ ನಂತರ ಮಕ್ಕಳು ತಮ್ಮ ಪೋಷಕರ ಮುಂಭಾಗದಲ್ಲಿ ಕುಳಿತು ಪ್ರೀತಿ ಗೌರವಗಳಿಂದ ಅವರ ಪಾದಗಳಿಗೆ ನಮಸ್ಕರಿಸಿ ಆಶೀವರ್ಾದವನ್ನು ಪಡೆದುಕೊಂಡು ಪುಷ್ಪಾರ್ಚನೆಗೈದರು. ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಭಾಗವಹಿಸಿದ್ದು ವಿಶೇಷವಾಗಿತ್ತು. ಮಕ್ಕಳ ಸಂಭ್ರಮವನ್ನು ನೋಡಿ ಪೋಷಕರು ಇನ್ನು ಮುಂದೆಯೂ ಇಂತಹ ಕಾರ್ಯಕ್ರಮಗಳಿಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries