ಕುಬಣೂರು, ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಾಳೆ
ಉಪ್ಪಳ: ಕುಬಣೂರು ಶ್ರೀ ಕೋಮರಾಯ ಚಾಮುಂಡಿ ದೈವಸ್ಥಾನದಲ್ಲಿ ಶ್ರೀ ದೈವಗಳ ಮುಖವಾಡ, ಪಣಿಪತ್ರ ಹಾಗೂ ಆಯುಧಗಳಿಗೆ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಡಿ.7ರಂದು ನಡೆಯಲಿದೆ. ಕಾರ್ಯಕ್ರಮದಂಗವಾಗಿ ಬುಧವಾರ ಸಂಜೆ ತಂತ್ರಿವರ್ಯರ ಆಗಮನ, ಸಾಮೂಹಿಕ ಪ್ರಾರ್ಥನೆ, ಸ್ಥಳ ಶುದ್ಧಿ, ರಾಕ್ಷೋಘ್ನ ಹೋಮ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ಗುರುವಾರ ಬೆಳಗ್ಗೆ 8 ಕ್ಕೆ ಗಣಪತಿ ಹೋಮ, 10.04ರಿಂದ ಶ್ರೀ ದೈವಗಳ ಮುಖವಾಡ ಪ್ರತಿಷ್ಠೆ, ಬ್ರಹ್ಮಕಲಾಭಿಷೇಕ, ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ. 11.30ರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಲಿರುವುದು.