ಬಾಯಾರು: ದೈವದ ಸವಾರಿ ಬಂಡಿ,ಧ್ವಜಸ್ತಂಭ ವೃಕ್ಷಚ್ಛೇದ ಇಂದು
ಉಪ್ಪಳ: ಬಾಯಾರು ಶ್ರೀ ಪಂಚಲಿಂಗೇಶ್ವರ ದೇವರು ಮತ್ತು ಮಲರಾಯ ದೈವಗಳ ಭಂಡಾರದ ಜೀಣರ್ೋದ್ಧಾರ ಸಮಿತಿ ಆಶ್ರಯದಲ್ಲಿ ನೂತನ ಧ್ವಜಸ್ತಂಭ ಶೋಭಾಯಾತ್ರೆ ಡಿ.7ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಗುರುವಾರ ಮಧ್ಯಾಹ್ನ 3.30ರಿಂದ ಬಾಯಾರು ಕೊಜಪ್ಪೆಯಿಂದ ಬದಿಯಾರಿನ ಶ್ರೀ ಮಲರಾಯ ದೈವದ ಸನ್ನಿಧಿಯವರೆಗೆ ಶೋಭಾಯಾತ್ರೆ ನಡೆಯಲಿದೆ. ಈ ಸಂದರ್ಭ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿರುವರು.
ಗುರುವಾರ ಬೆಳಗ್ಗೆ 10.30ರಿಂದ ಶ್ರೀ ಮಲರಾಯ ಮತ್ತು ಪಿಲಿಚಾಮುಂಡಿ ದೈವಗಳ ಸವಾರಿ ಬಂಡಿಯ ನಿಮರ್ಾಣಕ್ಕಾಗಿ ವೃಕ್ಷಚ್ಛೇದನ ಕಾರ್ಯಕ್ರಮ ನಡೆಯಲಿರುವುದು. ಬಂಡಿ ನಿಮರ್ಾಣಕ್ಕಾಗಿ ಮರವನ್ನು ಸರವು ನಾರಾಯಣ ಭಟ್ರವರ ತೋಟದಿಂದಲೂ, ಧ್ವಜಸ್ತಂಭಕ್ಕಾಗಿ ಮರವನ್ನು ಕೊಜಪ್ಪೆ ಶಿವರಾಮ ಶೆಟ್ಟರ ತೋಟದಿಂದಲೂ ಧಾಮರ್ಿಕ ವಿಧಿವಿಧಾನಗಳ ಮೂಲಕ ಕಡಿದು ತರಲಾಗುವುದು. ಕಾರ್ಯಕ್ರಮದಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ಷೇತ್ರದ ಪ್ರಕಟಣೆಯಲ್ಲಿ ಸಂಬಂಧಪಟ್ಟವರು ತಿಳಿಸಿದ್ದಾರೆ.