ಶ್ರೀ ಅನಂತಪುರದ ಭಾಗವತ ಸಪ್ತಾಹ ಸಮಾಪ್ತಿ
ಕುಂಬಳೆ: ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮೀ ಕ್ಷೇತ್ರದಲ್ಲಿ ನಡೆದ ಶ್ರೀಮದ್ಭಾಗವತ ಸಪ್ತಾಹ ಯಜ್ಞ ನಿರೀಕ್ಷೆಗೂ ಮೀರಿದ ಭಕ್ತಜನ ಪಾರಮ್ಯದ ಶ್ರದ್ಧಾ -ಭಕ್ತಿಯ ಶ್ರವಣ ಕೀರ್ತನಗಳೊಂದಿಗೆ ಮಂಗಳಕರವಾಗಿ ಗುರುವಾರ ಸಂಪನ್ನಗೊಂಡಿತು.
ನ.30ರಂದು ಗುರುವಾರ ಆರಂಭಗೊಂಡ ಸಪ್ತಾಹ ಯಜ್ಞವು ಡಿ.7 ಗುರುವಾರದಂದು ಮಧ್ಯಾಹ್ನ ಭಾಗವತ ಕಥೆಯಂತೆ ಭಗವಂತನ ಸ್ವಧಾಮಾಗಮನ, ಬ್ರಹ್ಮೋಪದೇಶ, ಪರೀಕ್ಷಿತನ ಮುಕ್ತಿ, ಮಾಕರ್ಾಂಡೇಯ ಚರಿತ್ರೆಯ ಪಾರಾಯಣ- ಪ್ರವಚನ ಸಹಿತ ಭಾಗವತ ಸಮರ್ಪಣೆಯೊಂದಿಗೆ ಸಮಾಪ್ತಿಯಾಯಿತು. ಪ್ರತಿದಿನ ಬೆಳಿಗ್ಗೆ 6ಕ್ಕೆ ಸಾಮೂಹಿಕ ಪ್ರಾರ್ಥನೆ, ಅರ್ಚನೆ, ನಾಮ ಪ್ರದಕ್ಷಿಣೆಯೊಂದಿಗೆ ಆರಂಭಗೊಂಡ ವಾಚನ-ಪ್ರವಚನಗಳು ರಾತ್ರಿಯ ತನಕ ಮುಂದುವರಿದಿದ್ದು, ಪ್ರತಿದಿನವೂ ನೂರಾರು ಸಂಖ್ಯೆಯಲ್ಲಿ ಶ್ರದ್ಧಾವಂತ ಭಕ್ತರು ಆಸಕ್ತಿಯಿಂದ ಪಾಲ್ಗೊಂಡಿದ್ದರು. ಜೀವನೋದ್ದರಣದ ಭಗವದ್ಗಾತೆಗಳನ್ನು ಶ್ರವಣ ಮಾಡಿ ಜೀವನಸ್ಪೂತರ್ಿ ಪಡೆದರು.
ಪ್ರಸಿದ್ಧ ಭಾಗವತಾಚಾರ್ಯ ಬ್ರಹ್ಮಶ್ರೀ ಪೆರಿಗಮನ ಶ್ರೀಧರನ್ ನಂಬೂದಿರಿ ಮಲಯಾಳಂ ಭಾಷೆಯಲ್ಲಿ ಶ್ಲೋಕ ಸಹಿತ ವ್ಯಾಖ್ಯಾನಗಳನ್ನಿತ್ತರೆ, ಕನ್ನಡದಲ್ಲಿ ಬ್ರಹ್ಮಶ್ರೀ ವೇ.ಮೂ ಕೇಶವ ಭಟ್ ಕೇಕಣಾಜೆ ಪಾರಾಯಣ ಮತ್ತು ವಿಶ್ಲೇಷಣೆಗಳನ್ನಿತ್ತರು. ಹಿಂದೂಧರ್ಮದ ಅತ್ಯಂತ ಪ್ರಧಾನ ಶಾಸ್ತ್ರಗ್ರಂಥವಾದ ಶ್ರೀಮದ್ ಭಾಗವತ ಜ್ಞಾನಮಾರ್ಗ ನಿರೂಪಣೆಯ ಮಾರ್ಗದಶರ್ಿಯಾಗಿದೆ. ಶರಣಾಗತ ಭಕ್ತಿಯಿಂದ ಭಗವಂತನೊಲುಮೆ ಮತ್ತು ಕ್ರಿಯಾಶಕ್ತಿಯ ದುಡಿಮೆಯಿಂದ ಜೀವನ ಯಶಸ್ಸು ಪಡೆಯಲು ಸಾಧ್ಯವೆಂಬ ಜೀವನಸ್ಪೂತರ್ಿ ನೀಡುತ್ತಿದೆ. ಕಲಿಯುಗದ ಪ್ರತ್ಯಕ್ಷ ದೇವರೆಂದು ಭಾಗವತವನ್ನು ಆರಾಧಿಸುವ ಸಂಪ್ರದಾಯ ಶ್ರೀಕೃಷ್ಣನೇ ನೆಲೆಸಿದ್ದ ಗುರುವಾಯೂರಿನಿಂದ ಆರಂಭಗೊಂಡು ಕೇರಳ ವ್ಯಾಪಕ ಜ್ಞಾನಸತ್ರ ರೂಪದಲ್ಲಿ ನಡೆಯುತ್ತಿದ್ದು, ಸರೋವರ ಕ್ಷೇತ್ರವಾದ ಶ್ರೀ ಅನಂತಪುರದಲ್ಲಿ ಇದೇ ಮೊದಲಬಾರಿಗೆ ಯಜ್ಞಸ್ವರೂಪದಲ್ಲಿ ನಡೆದಿದೆ.
ದೈನಂದಿನ 14-15 ತಾಸುಗಳ ಪಾರಾಯಣ-ಪ್ರವಚನ ಸಹಿತವಾದ ವ್ಯಾಖ್ಯಾನಗಳಲ್ಲಿ ಗ್ರಾಮೀಣ ಪ್ರದೇಶದ ಭಕ್ತ ಜನರು ಅತ್ಯುತ್ಸಾಹದ ತನ್ಮಯತೆಯಿಂದ ಪಾಲ್ಗೊಂಡದ್ದು ವಿಶೇಷವಾಗಿತ್ತು. ಮುಂಜಾನೆ ಆರು ಗಂಟೆಗೆ ಮೊದಲೇ ನೂರಾರು ಜನ ಅನಂತಪುರ ಕ್ಷೇತ್ರ ತಲುಪಿ ಸಾಮೂಹಿಕ ಪ್ರಾರ್ಥನೆ, ಅರ್ಚನೆ ಮತ್ತು ಸಪ್ತಾಹ ಯಜ್ಞದಂಗವಾದ ವಿವಿಧ ಧಾಮರ್ಿಕ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಗ್ರಾಮೀಣ ಪರಿಸರದ ಜನರಲ್ಲಿ ಭಾಗವತ ಕಥಾ, ವ್ಯಾಖ್ಯಾನಗಳು ಭಕ್ತಿಯ ಹೊಸ ಅರಿವನ್ನು ತುಂಬಿದ್ದು, ಮುಂದೆ ಸಪ್ತಾಹ ಯಾವಾಗ ಎನ್ನುವಂತಹಾ ವಾತಾವರಣವನ್ನಿದು ನಿಮರ್ಿಸಿದೆ.
ಶ್ರೀ ಅನಂತಪುರ ಕ್ಷೇತ್ರದ ಭಾಗವತ ಸಪ್ತಾಹ ಸಮಿತಿ ನೇತೃತ್ವದಲ್ಲಿ ಕ್ಷೇತ್ರ ಸಮಿತಿಯ ಸಹಕಾರದೊಂದಿಗೆ ಸಪ್ತಾಹ ಆಯೋಜಿಸಲಾಗಿತ್ತು.