ನೂತನ ಧ್ವಜಸ್ಥಂಬದ ಶೋಭಾಯಾತ್ರೆ
ಉಪ್ಪಳ: ಬಾಯಾರು ಮಲರಾಯ ದೈವಂಗಳ ಸವಾರಿ ಬಂಡಿ ವರಾಹ ಹಾಗೂ ವ್ಯಾಘ್ರ ಮತ್ತು ಜಾತ್ರೋತ್ಸವದ ಧ್ವಜಸ್ಥಂಬ ನಿಮರ್ಾಣಕ್ಕಾಗಿ ವೃಕ್ಷ ಛೇಧನ ಕಾರ್ಯಕ್ರಮ ನಡೆದು, ನೂತನ ಧ್ವಜಸ್ಥಂಬದ ಶೋಭಾಯಾತ್ರೆ ಗುರುವಾರದಂದು ಬಾಯಾರು ಸಮೀಪದ ಕೊಜಪ್ಪೆಯಿಂದ ಬದಿಯಾರಿಗೆ ನಡೆಯಿತು.
ವೃಕ್ಷ ಛೇಧನ ಕಾರ್ಯಕ್ರಮವು ಧಾಮರ್ಿಕ ವಿಧಿವಿಧಾನಗಳ ಮೂಲಕ ಮುನ್ನಡೆದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಜಿ ಹಾಗೂ ಮಾಣಿಲ ಶ್ರೀಧಾಮದ ಪರಮಹಂಸ ಶ್ರೀ ಮೋಹನದಾಸ ಸ್ವಾಮಿಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶೋಭಾಯಾತ್ರೆಗೆ ಚಾಲನೆ ದೊರಕಿತು. ನೂತನ ಧ್ವಜಸ್ಥಂಬವನ್ನು ನೂರಾರು ಭಕ್ತರು ಹೆಗಲ ಮೇಲೇರಿಸಿ ಮಲರಾಯ ಸನ್ನಿಧಿಗೆ ಸಮೀಪಿಸಿದರು. ಸ್ಥಳದೈವವಾದ ಶ್ರೀ ಮಲರಾಯ ಹಾಗೂ ಪಿಲಿಚಾಮುಂಡಿ ದೈವಗಳ ಸವಾರಿ ಬಂಡಿ ವರಾಹ ಮತ್ತು ವ್ಯಾಘ್ರ ನಿಮರ್ಾಣಕ್ಕಾಗಿ ಸರವು ನಾರಾಯಣ ಭಟ್ಟರು ಮರವನ್ನು ನೀಡಿದ್ದು, ಧ್ವಜಸ್ಥಂಭದ ನಿಮರ್ಾಣಕ್ಕಾಗಿ ಕೊಜಪ್ಪೆ ಶಿವರಾಮ ಶೆಟ್ಟರು ಮರವನ್ನು ನೀಡಿದ್ದಾರೆ. ನಿಮರ್ಾಣಕ್ಕಾಗಿ ನಿಗದಿಪಡಿಸಿದ ಮರಗಳನ್ನು ಧಾಮರ್ಿಕ ವಿಧಿವಿಧಾನಗಳ ಮೂಲಕ ಶ್ರೀ ಕ್ಷೇತ್ರದ ತಂತ್ರಿಗಳ ಮಾರ್ಗದರ್ಶನದಲ್ಲಿ ವೃಕ್ಷ ಛೇಧನ ನಡೆಸಲಾಯಿತು. ಸಾಯಂಕಾಲ ನಡೆದ ಭವ್ಯ ಶೋಭಾಯಾತ್ರೆಯಲ್ಲಿ ಮಹಿಳೆಯರು, ಮಕ್ಕಳು ಸಹಿತ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಶೋಭಾಯಾತ್ರೆಯ ದಾರಿಯುದ್ದಕ್ಕೂ ವಿವಿದೆಡೆಗಳಲ್ಲಿ ಪಾನೀಯವನ್ನು ವಿತರಿಸಲಾಯಿತು. ವಾದ್ಯಘೋಷಗಳ ಮೂಲಕ ಬದಿಯಾರಿನ ಮಲರಾಯ ಸನ್ನಿಧಿಗೆ ತಲುಪಿದ ಧ್ವಜಸ್ಥಂಭದ ಮರವನ್ನು ಕ್ಷೇತ್ರ ಪರಿಸರದಲ್ಲಿರಿಸಲಾಯಿತು.