ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 04, 2017
ಕಲಾವಿದರನ್ನು ಗೌರವಾದಾರಗಳಿಂದ ಕಾಣುವ ಸಮಾಜ ಕ್ರಿಯಾತ್ಮಕತೆಯ ಸಂಕೇತ-ಎಂ.ಉಮೇಶ್ ಸಾಲ್ಯಾನ್.
ಮುಳ್ಳೇರಿಯ: ವಿವಿಧ ಕ್ಷೇತ್ರಗಳ ಕಲಾವಿದರು ಮತ್ತು ಆ ಸಂಬಂಧಿ ಕಾರ್ಯನಿರ್ವಹಿಸುವವರ ನ್ಯಾಯಬದ್ದ ಹಕ್ಕುಗಳ ಸಂರಕ್ಷಣೆಗೆ ಸಂಘಟನಾತ್ಮಕವಾಗಿ ಒಗ್ಗೂಡಿ ಶಕ್ತಿ ಪ್ರದಶರ್ಿಸುವ ಅಗತ್ಯ ಇದೆ. ಅಶಕ್ತ ಕಲಾವಿದರಿಗೆ ನೆರವು ಮತ್ತು ಸಾಂತ್ವನ ಹಾಗೂ ಒಕ್ಕೂಟವನ್ನು ಬಲಪಡಿಸುವ ನಿಟ್ಟಿನಲ್ಲಿ ಪರಸ್ಪರ ಅರಿತುಕೊಳ್ಳಲು ಜಿಲ್ಲಾ ಸಮಾವೇಶ-ಕುಟುಂಬ ಸಂಗಮ ವೇದಿಕೆಯಾಗಲಿದೆ ಎಂದು ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸರ್್ ಅಸೋಸಿಯೇಶನ್(ಸವಾಕ್)ನ ಜಿಲ್ಲಾ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು.
ಸವಾಕ್ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿವಿಧ ಬ್ಲಾಕ್ ಒಕ್ಕೂಟಗಳ ಸಹಯೋಗದೊಮದಿಗೆ ಮುಮದಿನ ಜನವರಿಯಲ್ಲಿ ಕಾಸರಗೊಡಿನಲ್ಲಿ ನಡೆಯಲಿರುವ ಸವಾಕ್ ಜಿಲ್ಲಾ ಸಾಂಸ್ಕೃತಿಕ ಸಂಗಮ, ಸಮಾವೇಶ ಮತ್ತು ಕುಟುಂಬ ಸಂಗಮದ ಪೂರ್ವಭಾವಿಯಾಗಿ ಭಾನುವಾರ ಸಂಜೆ ಮುಳ್ಳೇರಿಯ ವ್ಯಾಪಾರಿ ಭವನದಲ್ಲಿ ನಡೆದ ಕಾರಡ್ಕ ಬ್ಲಾಕ್ ಮಟ್ಟದ ಸಮಾಲೋಚನ ಸಭಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಹಂತಗಳಲ್ಲಿ ನಡೆದ ಶಾಲಾ ಕಲೋತ್ಸವ ಸಂದರ್ಭ ಈ ವರ್ಷ ಸವಾಕ್ನ ಬೇಡಿಕೆಯಂತೆ ಹಲವು ಸಾಂಸ್ಕೃತಿಕ ಸ್ಪಧರ್ೆಗಳಿಗೆ ನಿಣರ್ಾಯಕರಾಗಿ ಸವಾಕ್ನ ಸದಸ್ಯರನ್ನು ನೇಮಕಗೊಳಿಸಿ ನ್ಯಾಯೋಚಿತ ಮೌಲ್ಯ ನಿರ್ಣಯಗಳ ಮೂಲಕ ಸವಾಕ್ ಹೊಸ ದಾಖಲೆಯನ್ನು ಸೃಷ್ಟಿಸಿದೆ ಎಂದು ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ವಿಸ್ತರಿಸಲಿದೆ ಎಂದು ಹೇಳಿದರು. ಜಿಲ್ಲಾ ಸಮಾವೇಶವು ಅಭೂತಪೂರ್ವ ಯಶಸ್ವುಗೊಳ್ಳುವಲ್ಲಿ ಸಮಾಜದ ಎಲ್ಲಾ ವಿಭಾಗಗಳೂ ಈಗಾಗಲೇ ಭರವಸೆಯನ್ನು ನೀಡಿದ್ದು, ಕಲಾವಿದರಿಗೆ ಗೌರವಾದಾರಗಳನ್ನು ನೀಡುವ ಸಮಾಜ ಕ್ರಿಯಾತ್ಮಕತೆಯ ಸುದೃಢತೆಯೆಡೆಗೆ ಸಾಗುತ್ತಿರುವುದರ ಪ್ರತೀಕ ಎಂದು ಅವರು ಅಭಿಪ್ರಾಯಪಟ್ಟರು.
ಸವಾಕ್ ಜಿಲ್ಲಾ ಕಾರ್ಯನಿರತ ಕಾರ್ಯದಶರ್ಿ ತುಳಸೀಧರನ್ ಉಪಸ್ಥಿತರಿದ್ದು ಮಾತನಾಡಿ, ಧನಾತ್ಮಕ ಚಿಂತನೆಗಳೊಂದಿಗೆ ಮುನ್ನಡೆದಾಗ ಲಕ್ಷ್ಯ ಪ್ರಾಪ್ತಿಯ ಮಾರ್ಗಗಳು ಸುಲಲಿತಗೊಳ್ಳುತ್ತವೆ. ಸಮಸ್ಯೆ, ಸವಾಲುಗಳನ್ನು ಮೆಟ್ಟಿನಿಂತು ಒಗ್ಗಟ್ಟಿನ ಸಕಾರಾತ್ಮಕ ಪ್ರಕ್ರಿಯೆಗಳು ಬಲವಧರ್ಿಸಿ ವಿಕಾಸಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಸವಾಕ್ ಜಿಲ್ಲಾ ಕಾರ್ಯದಶರ್ಿ ಶ್ರೀಲತಾ, ಸುಜಾತ, ವಸಂತಿ, ಮನೋಹರ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು. ಸವಾಕ್ನ ಕಾರಡ್ಕ ಬ್ಲಾಕ್ ಅಧ್ಯಕ್ಷ ಮಧುಸೂಧನ ಬಲ್ಲಾಳ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದಶರ್ಿ ಸುಂದರ ಮವ್ವಾರು ವಂದಿಸಿದರು.





