ರೈಗಳು ಗಡಿನಾಡಿನ ಧ್ವನಿ-ಹಕೀಂ ಕುನ್ನಿಲ್
ಕುಂಬಳೆ: ಮಾಜಿ ಸಂಸದ ದಿ.ಐ.ರಾಮ ರೈಗಳು ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ಸಲ್ಲಿಸಿದ್ದ ಸೇವೆ ಎಲ್ಲರಿಗೂ ಮಾದರಿ. ಸಜ್ಜನ ರಾಜಕಾರಣಿಯಾಗಿ ಸಮಗ್ರ ಸಾಮಾಜಿಕ ಬದಲಾವಣೆಗಳಿಗೆ ನಿಷ್ಟರಾಗಿದ್ದ ರೈಗಳ ಜೀವನ ಮಾರ್ಗದಶರ್ಿ ಎಂದು ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಕುನ್ನಿಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಂಬಳೆ ಬ್ಲಾಕ್ ಕಾಂಗ್ರೆಸ್ಸ್ ಸಮಿತಿಯ ನೇತೃತ್ವದಲ್ಲಿ ಶನಿವಾರ ಕುಂಬಳೆ ಬ್ಲಾಕ್ ಕಾಂಗ್ರೆಸ್ಸ್ ಕಾಯರ್ಾಲಯದಲ್ಲಿ ನಡೆದ ಮಾಜಿ ಸಂಸದ ದಿ. ಐ.ರಾಮ ರೈಗಳ 7ನೇ ವರ್ಷದ ಸಂಸ್ಮರಣಾ ಸಭೆಯನ್ನು ಪುಷ್ಪನಮನ ಸಲ್ಲಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರದ ಜನಮಾನಸಗಳಲ್ಲಿ ಹಾಸುಹೊಕ್ಕಾಗಿರುವ ಕಾಂಗ್ರೆಸ್ಸ್ ಪಕ್ಷ ಇಲ್ಲಿಯ ಮಣ್ಣಿನ ಸತ್ವದಿಂದ ಬೆಳೆದುಬಂದು ಸುಧೀರ್ಘ ಅವಧಿಯ ಆಳ್ವಿಕೆಯಲ್ಲಿ ಜಗತ್ತಿನ ಸುದೃಢ ರಾಷ್ಟ್ರಗಳ ಪೈಕಿ ಮುಂಚೂಣಿಗೆ ತಂದುನಿಲ್ಲಿಸಿರುವುದು ಪಕ್ಷದ ಹೆಗ್ಗಳಿಕೆಯಾಗಿದ್ದರೂ, ಅದನ್ನು ತಿರುಚುವ ಯತ್ನಗಳು ನಡೆಯುತ್ತಿದೆ ಎಂದು ಅವರು ತಿಳಿಸಿದರು. ಈ ನಿಟ್ಟಿನಲ್ಲಿ ಹಿರಿಯ ಮುಖಂಡರ ಸಾಧನೆಗಳನ್ನು ನೆನಪಿಸುವುದು, ಜನರೆಡೆಗಳಿಗೆ ಅವರ ಕೊಡುಗೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಪಕ್ಷ ವ್ಯಾಪಕ ಚಟುವಟಿಕೆಗಳನ್ನು ಜಾರಿಗೆತರುವುದಿದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಸಾಮಾನ್ಯ ಕಾರ್ಯಕರ್ತರಿಂದ ಉನ್ನತ ಮುಖಂಡರವರೆಗೂ ಪ್ರಭಾವಿಯಾಗಿದ್ದ ರೈಗಳು ಗಡಿನಾಡಿನ ಧ್ವನಿಯಾಗಿ ಪ್ರಭಾವ ಬೀರಿದವರು ಎಂದು ಹಕೀಂ ನೆನಪಿಸಿದರು.
ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಕೆ.ಸಾಮಿಕುಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ಸ್ ಕಾರ್ಯದಶರ್ಿ ಸೋಮಶೇಖರ ಜೆ.ಎಸ್, ಶಿವರಾಮ ಆಳ್ವ, ಗಣೇಶ್ ಭಂಡಾರಿ ಕುತ್ತಿಕಾರ್, ಹನೀಫ ಚೇವಾರು, ಬಿ.ಎಸ್.ಗಾಂಭೀರ್, ನಾಸರ್ ಮೊಗ್ರಾಲ್, ಆಮು ಅಡ್ಕಸ್ಥಳ, ಲೋಕನಾಥ ಶೆಟ್ಟಿ, ಬಿ.ತಿಮ್ಮಪ್ಪ. ರಮೇಶ್ ಎಣ್ಮಕಜೆ, ಯೂಸುಫ್ ಕೋಟ, ರಮೇಶ್ ಗಾಂಧೀನಗರ, ಎಂ.ದಾಸನ್ ಮೊದಲಾದವರು ಮಾತನಾಡಿದರು. ಲಕ್ಷ್ಮಣ ಪ್ರಭು ಕುಂಬಳೆ ಸ್ವಾಗತಿಸಿ, ರವಿ ಪೂಜಾರಿ ವಂದಿಸಿದರು.