HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಅರುವರ ಕಲಾ ಜೀವನ ಅನುಸರಣೀಯ-ಮಧೂರು ರಾಧಾಕೃಷ್ಣ ನಾವಡ     
   ಕುಂಬಳೆ: ಅತ್ಯಂತ ಶ್ರೇಷ್ಠ ಕಲೆಯಾದ ಯಕ್ಷಗಾನವನ್ನು ಬೆಳೆಸಿ ಪ್ರೋತ್ಸಾಹಿಸುವಲ್ಲಿ ಸಹೃದಯ ಪ್ರೇಕ್ಷಕರ ಪಾತ್ರ ಮಹತ್ತರವಾದುದು ಎಂದು ಹಿರಿಯ ಕಲಾವಿದ ಮಧೂರು ರಾಧಾಕೃಷ್ಣ ನಾವಡ ಅಭಿಪ್ರಾಯ ವ್ಯಕ್ತಪಡಿಸಿದರು.
   ಯಕ್ಷಮಿತ್ರರು ಕುಂಬಳೆ ವಲಯ ಸಮಿತಿ ನೇತೃತ್ವದಲ್ಲಿ ಕಳತ್ತೂರು ಹಿರಿಯ ಬುನಾದಿ ಶಾಲೆಯಲ್ಲಿ ಶನಿವಾರ ರಾತ್ರಿ ನಡೆದ ಯಕ್ಷಗಾನ ಪ್ರದರ್ಶನದ ಭಾಗವಾಗಿ ನಡೆದ ಹಿರಿಯ ಕಲಾವಿದರ ಸನ್ದಮಾನ ಸಮರಂಭದಲ್ಲಿ ಅವರು ಮಾತನಾಡಿದರು.
   ದೇಶ-ವಿದೇಶಗಳಲ್ಲಿ ಇಂದು ಪ್ರಸಿದ್ದಿಗೆ ಬಂದು ಪ್ರದರ್ಶನಗೊಳ್ಳುತ್ತಿರುವ ಯಕ್ಷಗಾನ ಕಲಾ ಪ್ರಕಾರ ಅದರ ಹಿರಿಮೆಯ ದ್ಯೋತಕ. ಯಾವುದೇ ದುಶ್ಚಟಗಳಿಲ್ಲದೆ ತನ್ನ ಕಲಾಕ್ಷೇತ್ರದಲ್ಲಿ 78 ರ ಹರೆಯದಲ್ಲೂ ಸತ್ವವನ್ನು ಕಾಪಿಟ್ಟಿರುವ ಅರುವ ಕೊರಗಪ್ಪ ಶೆಟ್ಟರು ಕಲಾವಿದನೋರ್ವ ಹೇಗಿರಬೇಕೆಂಬುದಕ್ಕೆ ಶ್ರೇಷ್ಠ ಮಾರ್ಗದಶರ್ಿ ವ್ಯೆಕ್ತಿತ್ವದವರೆಂದು ಅವರು ತಿಳಿಸಿದರು.
   ಸಮಾರಂಭದಲ್ಲಿ ಕಲಾವಿದ ಅರುವ ಕೊರಗಪ್ಪ ಶೆಟ್ಟಿ, ರಾಧಾಕೃಷ್ಣ ನಾವಡ ಮಧೂರು, ರಾಮ ಪ್ರಸಾದ ನಾರಾಯಣಮಂಗಲ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ನರಹರಿ ಮಾಸ್ತರ್ ಮತ್ತು ರಾಜ್ಯಮಟ್ಟದ ವಿಜ್ಞಾನ ಮೇಳದಲ್ಲಿ ಸ್ಟಿಲ್ ಮಾಡೆಲಿಂಗ್ ವಿಭಾಗದಲ್ಲಿ ಚತುರ್ಥ ಸ್ಥಾನ ಪಡೆದ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯ ವಿದ್ಯಾಥರ್ಿಗಳಾದ ಪ್ರಥಮ್ ಮತ್ತು ಐಶ್ವಯರ್ಾರನ್ನು ಈ ಸಂದರ್ಭ ಗೌರವಿಸಲಾಯಿತು.
   ಯಕ್ಷಮಿತ್ರರು ಕುಂಬಳೆ ಸಮಿತಿಯ ಪದಾಧಿಕಾರಿಗಳು ಹಾಗೂ ಅಪಾರ ಪ್ರೇಕ್ಷಕರು ಭಾಗವಹಿಸಿದ್ದ ಸಮಾರಂಭವನ್ನು ಭಾಸ್ಕರ ಕೆ. ನಿರೂಪಿಸಿದರು. ಬಳಿಕ ಬಪ್ಪನಾಡು ಮೇಳದವರಿಂದ ಬಾಲೆ ಭಗವಂತನ ಆಖ್ಯಾನ ಪ್ರದರ್ಶನಗೊಂಡಿತು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries