ರಂಗ ಚಿನ್ನಾರಿ ವತಿಯಿಂದ ಭಾಗವತ ನಾರಾಯಣ ಮಾಟೆಯವರಿಗೆ ಸನ್ಮಾನ
ಮುಳ್ಳೇರಿಯ: ಕಾಸರಗೋಡಿನ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯಾದ ರಂಗ ಚಿನ್ನಾರಿ ಸಂಸ್ಥೆಯ ದಶಮಾನೋತ್ಸವದ ಸಂದರ್ಭದಲ್ಲಿ ಕೇರಳ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದ ಭಾಗವತ ನಾರಾಯಣ ಮಾಟೆಯವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು.
ಕಾಸರಗೋಡಿನ ನಗರಸಭಾ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಾರಾಯಣ ಮಾಟೆಯವರನ್ನು ಸ್ವಾಮೀಜಿಯವರು ಸನ್ಮಾನಿಸಿದರು. ಸತೀಶ್ಚಂದ್ರ ಭಂಡಾರಿ ಕೋಳಾರು ಮಾಟೆಯವರ ಪರಿಚಯ ಮಾಡಿದರು. ಬ್ರಹ್ಮಶ್ರೀ ವಿಷ್ಣು ಅಸ್ರ, ಸತೀಶ ಅಡಪ ಸಂಕಬೈಲು, ಭಾಗವತ ದಿನೇಶ ಅಮ್ಮಣ್ಣಾಯ ಉಪಸ್ಥಿತರಿದ್ದರು.
ನಾರಾಯಣ ಮಾಟೆಯವರು ಮಾತನಾಡಿ ಸ್ವಾಮೀಜಿಯವರ ಕೈಯಿಂದ ದೊರೆತ ಗೌರವ ದೈವಾನುಗ್ರಹ. ಕಾರ್ಯಕ್ರಮದ ವೀಕ್ಷಕನಾಗಿ ಬಂದ ನನಗೆ ಅನಿರೀಕ್ಷಿತವಾಗಿ ಹೀಗೊಂದು ಸನ್ಮಾನವನ್ನು ನೀಡಲು ಕಾರಣವಾಗಿರುವ ರಂಗಚಿನ್ನಾರಿ ಸಂಸ್ಥೆಯ ಕಾಸರಗೋಡು ಚಿನ್ನಾ, ಸತ್ಯನಾರಾಯಣ.ಕೆ, ಕೆ.ಸತೀಶ್ಚಂದ್ರ ಭಂಡಾರಿ, ಮನೋಹರ ಶೆಟ್ಟಿ, ಸಂಕಬೈಲು ಸತೀಶ ಅಡಪ ರಿಗೆ ನಾನು ಕೃತಜ್ಞ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ತೆಂಕುತಿಟ್ಟಿನ ಹಿರಿಯ ಕಲಾವಿದರಿಂದ ವೀರಮಣಿ ಕಾಳಗ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.