ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 07, 2017
ಕನಿಲ ಭಂಡಾರ ನಿಲಯದಲ್ಲಿ ವಿಶೇಷ ದೀಪಾರಾಧನೆ
ಮಂಜೇಶ್ವರ: ಕನಿಲ ಶ್ರೀ ಭಗವತೀ ಕ್ಷೇತ್ರ ಭಂಡಾರ ನಿಲಯ ಪುನರ್ ನಿಮರ್ಾಣ ಸಮಿತಿಯ ಆಶ್ರಯದಲ್ಲಿ ಶ್ರೀ ಕ್ಷೇತ್ರದ ಭಂಡಾರ ನಿಲಯದಲ್ಲಿ ವಿಶೇಷ ದೀಪಾರಾಧನೆ ಕಾರ್ಯಕ್ರಮವು ಡಿ.12ರಂದು ಜರಗಲಿದೆ.
ಬೆಳಿಗ್ಗೆ 8.30ಕ್ಕೆ ಮಂಜಪ್ಪ ಕಾರ್ನವರ್ ದೀಪ ಬೆಳಗಿಸುವರು. ಬಳಿಕ ಭಜನೆ, 10.45ಕ್ಕೆ ಜನಾರ್ದನ್ ಪಿ.ಮಲ್ಪೆ ಅವರಿಂದ ಸ್ವಾಗತ ಗೋಪುರ ಉದ್ಘಾಟನೆ, 11ಗಂಟೆಗೆ ಧಾಮರ್ಿಕ ಸಭೆ ನಡೆಯಲಿದೆ. ಪುನರ್ ನಿಮರ್ಾಣ ಸಮಿತಿಯ ಅಧ್ಯಕ್ಷ ಪದ್ಮನಾಭ ಕಡಪ್ಪರ ಅಧ್ಯಕ್ಷತೆ ವಹಿಸುವರು. ರೋಹಿದಾಸ್ ಎಸ್.ಬಂಗೇರ ದೀಪ ಬೆಳಗಿಸುವರು.
ಕನಿಲ ಶ್ರೀ ಭಗವತೀ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಟಿ.ಲಕ್ಷ್ಮಣ ಸಾಲಿಯಾನ್, ಮಹಿಳಾ ಸಂಘದ ಅಧ್ಯಕ್ಷೆ ವಿಮಲಾ ನಾರಾಯಣ ಹೊಸಬೆಟ್ಟು ಉಪಸ್ಥಿತರಿರುವರು. ಚಂದ್ರಶೇಖರ ಬೆಳ್ಚಾಡ, ರವಿ ಎಸ್. ಮಂಜೇಶ್ವರ, ಗಣೇಶ್ ಬಜಾಲ್, ಭಾಸ್ಕರ ಪಿ., ಯಶೋದಾ ಬಿ.ಎಸ್., ಗಂಗಾಧರ, ಲತಾ ಸುರೇಶ್ ಅಮೀನ್ ಭಾಗವಹಿಸುವರು.
ಮಧ್ಯಾಹ್ನ 12ಗಂಟೆಗೆ ವಿಶೇಷ ದೀಪಾರಾಧನೆ, 1.30ಕ್ಕೆ ಅನ್ನ ಸಂತರ್ಪಣೆ ಜರಗಲಿದೆ. ಸಂಜೆ 4ರಿಂದ ನೃತ್ಯ ವೈವಿಧ್ಯ ಪ್ರದರ್ಶನಗೊಳ್ಳಲಿದೆ. 6 ಗಂಟೆಗೆ ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ `ಪುಣ್ಣಮೆದ ಪೊಣ್ಣು' ಯಕ್ಷಗಾನ ಬಯಲಾಟ ನಡೆಯಲಿದೆ.




