HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಎಚ್-1ಬಿ ವೀಸಾ ಭೀತಿ ಇನ್ನಿಲ್ಲ
   ವಾಷಿಂಗ್ಟನ್: ಭಾರತೀಯರು ಅಮೆರಿಕದಲ್ಲಿ ನೆಲೆಸಲು ಆಸರೆಯಾಗಿರುವ ಎಚ್-1ಬಿ ವೀಸಾ ನೀತಿಯನ್ನು ಇನ್ನಷ್ಟು ಕಠಿಣಗೊಳಿಸುವ ನಿಧರ್ಾರವನ್ನು ಡೊನಾಲ್ಡ್ ಟ್ರಂಪ್ ಆಡಳಿತ ಕೈಬಿಟ್ಟಿದೆ. ಅಮೆರಿಕದಲ್ಲಿ ಐಟಿ ಸಹಿತ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 5.25 ಲಕ್ಷ ಭಾರತೀಯರ ಆತಂಕ ದೂರವಾಗಿದೆ. ಆರು ವರ್ಷಕ್ಕಿಂತ ಹೆಚ್ಚು ಅಮೆರಿಕದಲ್ಲಿ ನೆಲೆಸಿರುವ ವಿದೇಶಿಗರ ಎಚ್-1ಬಿ ವೀಸಾ ಅವಧಿ ವಿಸ್ತರಣೆಗೆ ಯಾವುದೇ ನಿರ್ಬಂಧ ಹೇರುವ ಪ್ರಸ್ತಾವನೆ ಸಕರ್ಾರದ ಮುಂದಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ಅಮೆರಿಕದ ಕಾಯಂ ಪೌರತ್ವ(ಗ್ರೀನ್ ಕಾಡರ್್)ಕ್ಕೆ ಎದುರು ನೋಡುತ್ತಿರುವವರಿಗೆ ನಿರ್ಬಂಧ ಹೇರುವ ಚಿಂತನೆ ನಡೆದಿಲ್ಲ. ಎಚ್-1ಬಿ ವೀಸಾ ಹೊಂದಿರುವವರನ್ನು ಅಮೆರಿಕದಿಂದ ಹೊರದೂಡುವ ಪ್ರಶ್ನೆಯೇ ಇಲ್ಲ ಎಂದು ನಾಗರಿಕ ಪೌರತ್ವ ಇಲಾಖೆ ವಕ್ತಾರರು ತಿಳಿಸಿದ್ದಾರೆ.
    ಆತಂಕ ಸೃಷ್ಟಿಯಾಗಿದ್ದು ಹೇಗೆ ?
  ವೀಸಾ ನೀಡುವ ಉಸ್ತುವಾರಿ ಹೊತ್ತಿರುವ ಅಮೆರಿಕ ಹೋಮ್ ಲ್ಯಾಂಡ್ ಸೆಕ್ಯೂರಿಟಿ (ಅಮೆರಿಕ ಗೃಹ ಸಚಿವಾಲಯ) ಇಲಾಖೆಯ ಜ್ಞಾಪನಪತ್ರವೊಂದು ಇತ್ತೀಚೆಗೆ ಭಾರಿ ಸುದ್ದಿ ಮಾಡಿತ್ತು. ಗ್ರೀನ್ ಕಾಡರ್್?ಗಾಗಿ ಸ್ವೀಕೃತವಾದ ಅಜರ್ಿಗಳಿಗೆ ಎಚ್-1ಬಿ ವೀಸಾ ಅವಧಿ ವಿಸ್ತರಣೆಗೆ ಅವಕಾಶವಿಲ್ಲ ಎಂದು ಪತ್ರದ ಸಾರಾಂಶವಾಗಿತ್ತು. ಭಯೋತ್ಪಾದಕ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್, ವಲಸಿಗರ ನಿಯಂತ್ರಣಕ್ಕೆ ವೀಸಾ ನಿರ್ಬಂಧಿಸಲಿದ್ದಾರೆ ಎಂದು ಆತಂಕ ಸೃಷ್ಟಿಯಾಗಿತ್ತು.
   ಒತ್ತಡಕ್ಕೆ ಮಣಿದ ಟ್ರಂಪ್?
  ಎಚ್-1ಬಿ ವೀಸಾಗೆ ನೀತಿ ಬಿಗಿಗೊಳಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಭಾರತೀಯ ಐಟಿ ಕಂಪನಿಗಳು ಅಮೆರಿಕದಲ್ಲಿರುವ ತಮ್ಮ ಉದ್ಯೋಗಿಗಳ ರಕ್ಷಣೆಗೆ ಅಮೆರಿಕ ಚೇಂಬರ್ ಆಫ್ ಕಾಮಸರ್್ ಮೇಲೆ ಒತ್ತಡ ಹೇರಿದ್ದವು. ಅಮೆರಿಕ ಮೂಲದ ಐಟಿ ದಿಗ್ಗಜರಾದ ಮೈಕ್ರೋಸಾಫ್ಟ್, ಗೂಗಲ್, ಫೇಸ್?ಬುಕ್ ಕೂಡ ಹೊಸ ನೀತಿ ವಿರುದ್ಧ ಕಿಡಿಕಾರಿದ್ದವು. ಚೇಂಬರ್ ಆಫ್ ಕಾಮಸರ್್ ಕೂಡ ಖಂಡಿಸಿತ್ತು. ಅಮೆರಿಕ ಸಂಸದರೂ ಈ ನೀತಿಯನ್ನು ಬಹಿರಂಗವಾಗಿ ಟೀಕಿಸಿದ್ದರು. ಒತ್ತಡಕ್ಕೆ ಮಣಿದ ಸಕರ್ಾರ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries