ಭಾಷಾ ಬೆಳವಣಿಗೆಗಳಿಗೆ ಕನ್ನಡ ಸ್ವರ ಪರಿಣಾಮಕಾರಿ-ಇಬ್ರಾಹಿಂ ಮಾಸ್ತರ್
ಮಂಜೇಶ್ವರ: ಗಡಿನಾಡು ಕಾಸರಗೊಡಿನ ಕನ್ನಡ ಚಟುವಟಿಕೆಗಳಿಂದ ಕನ್ನಡ ಭಾಷೆ ಸಂಸ್ಕೃತಿಯ ಬೆಳವಣಿಗೆಯ ಮೇಲೆ ಅಗಾಧ ಪರಿಣಾಮ ಬೀರಿದೆ. ಯುವ ಮನಸ್ಸುಗಳಿಗೆ ಈ ನಿಟ್ಟಿನ ಅರಿವು, ಪ್ರೇಮ ಮೂಡಿಸುವಲ್ಲಿ ಕನ್ನಡ ಸ್ವರ ಪರಿಣಾಮಕಾರಿಯಾಗಿ ಮೂಡಿಬರುತ್ತಿರುತ್ತಿದ್ದು, ಪ್ರತಿಯೊಬ್ಬರೂ ಅಂತರಾಳದಿಂದ ಹಾರೈಸಿ, ಪ್ರೋತ್ಸಾಹ ನಿಡಬೇಕಾಗಿದೆ ಎಂದು ಮೂಡಂಬೈಲು ಸರಕಾರಿ ಹೈಸ್ಕೂಲಿನ ಮುಖ್ಯೋಪಾಧ್ಯಾಯ ಇಬ್ರಾಹಿಂ ಮಾಸ್ತರ್ ಕರೆನಿಡಿದರು.
ಮೂಡಂಬೈಲು ಸರಕಾರಿ ಹೈಸ್ಕೂಲಿನಲ್ಲಿ ಇತ್ತೀಚೆಗೆ ಕಾಸರಗೊಡಿನ ಸಾಂಸ್ಕೃತಿಕ, ಸಾಹಿತ್ತಿಕ ಸಂಘಟನೆಯಾದ ರಂಗಚಿನ್ನಾರಿಯು ಬೆಂಗಳೂರಿನ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸಹಯೋಗದೊಂದಿಗೆ ಆಯೋಜಿಸಿದ್ದ ಕಾಸರಗೋಡಿನ ಇಪ್ಪತ್ತು ಕನ್ನಡ ಶಾಲೆಗಳ ಎರಡು ಸಾವಿರ ವಿದ್ಯಾಥರ್ಿಗಳಿಗೆ ನಾಡಗೀತೆ ಹಾಗೂ ಭಾಗಗೀತೆಗಳನ್ನು ಕಲಿಸುವ ಕನ್ನಡ ಸ್ವರ ಕಾಯರ್ಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಹುಟ್ಟೂರಲ್ಲಿ ಕನ್ನಡ ಮನಸ್ಸುಗಳನ್ನು ಮತ್ತೆ ಒಂದಾಗಿ ಕಟ್ಟುವ ಯತ್ನಗಳಾಗಬೇಕು. ಇಲ್ಲಿಯ ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ಬಹುಭಾಷೆಯ ಜನಾಂಗದ ಇಲ್ಲಿಯ ಜನರು ಬೆಂಬಲ ನೀಡುವಲ್ಲಿ ಇನ್ನಷ್ಟು ಜಾಗೃತಿ ಕನ್ನಡ ಸ್ವರದ ಮೂಲಕ ಸಕ್ರಿಯಗೊಳ್ಳಲಿ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ ಮೂಡಂಬೈಲು ಮಾತನಾಡಿ, ಸುಮಧುರ ಕನ್ನಡ ನಾಡಗೀತೆಗಳ ಬಗೆಗೆ ಆಸಕ್ತಿ ಮುಡುವಲ್ಲಿ ಹೊಸ ತಲೆಮಾರಿನ ವಿದ್ಯಾಥರ್ಿಗಳಿಗೆ ಇಂತಹ ಕಾರ್ಯಕ್ರಮಗಳು ಬಲನೀಡುತ್ತದೆ. ಸಾಹಿತ್ಯ-ಓದಿನ ಬಗೆಗೆ ಒಲವು ಮೂಡಲು ವಿದ್ಯಾಥರ್ಿಗಳು ಇಂತಹ ಚಟುವಟಿಕೆಗಳಲ್ಲಿ ನಿರಂತರ ಭಾಗವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಶಾಲಾ ಮಾತೃಸಂಘದ ಅಧ್ಯಕ್ಷೆ ಜಂಯತಿ ಉಪಸ್ಥಿತರಿದ್ದು ಶುಭಹಾರೈಸಿದರು. ರಂಗಚಿನ್ನಾರಿಯ ಸಂಚಾಲಕ ಸತ್ಯನಾರಾಯಣ ಕೆ.ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುರೇಶ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಬಳಿಕ ಗಾಯಕರಾದ ಕಿಶೋರ್ ಪೆರ್ಲ ಗೋವಿಂದ ಪೈಗಳ ತಾಯೆಬಾರ ಮೊಗವ ತೋರ, ಕುಪೆಂಪುರವರ ಜೈ ಭಾರತ ಜನನಿಯ ತನುಜಾತೆ ಸಹಿತ ಇತರ ಭಾವಗೀತೆಗಳ ಬಗ್ಗೆ ಮಾಹಿತಿ ನೀಡಿ ಪ್ರಾತ್ಯಕ್ಷಿಕೆ ಸಹಿತ ತರಬೇತಿ ನೀಡಿದರು.