HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಐಎಡಿಯಲ್ಲಿ ಎಂಟನೇ ರಾಷ್ಟ್ರೀಯ ವಿಚಾರ ಸಂಕಿರಣ

   ಮಧೂರು: `ಸಂಯೋಜಿತ ಚಿಕಿತ್ಸೆ'ಯ ಮೂಲಕ ಆಯುವರ್ೇದ, ಅಲೋಪತಿ, ಯೋಗಾಸನಗಳ ಗುಣಾಂಶಗಳನ್ನು ಸಂಯೋಜಿಸಿ ಲಿಂಫೇಟಿಕ್ ಫೈಲೇರಿಯಾಸಿಸ್ (ಆನೆಕಾಲು) ರೋಗದ ಚಿಕಿತ್ಸೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಇನ್ಸ್ಟಿಟ್ಯೂಟ್ ಓಫ್ ಅಪ್ಲೈಡ್ ಡರ್ಮಟೋಲಜಿ (ಐಎಡಿ) ಯು ಕಾಸರಗೋಡಿಗೆ ಸನಿಹದ ಉಳಿಯತ್ತಡ್ಕದ ಕೇಂದ್ರದಲ್ಲಿ 2018, ಜನವರಿ  22ರಿಂದ ಆರಂಭಿಸಿರುವ ಎಂಟನೇ ರಾಷ್ಟ್ರೀಯ ವಿಚಾರ ಸಂಕಿರಣವು ವೈದ್ಯಕೀಯ ಕ್ಷೇತ್ರದಲ್ಲಿ ಮತ್ತಷ್ಟು ಪ್ರಭಾವ ಬೀರಬಲ್ಲ ಚಿಂತನೆಗಳಿಗೆ ವೇದಿಕೆಯಾಗುತ್ತಿದೆ. ಈ ಮೂಲಕ ಔಷಧಿ ಇಲ್ಲದ ಖಾಯಿಲೆ ಎಂದು ಪರಿಗಣಿಸಲ್ಪಡುತ್ತಿದ್ದ ಚರ್ಮರೋಗಗಳಿಗೆ ಕಂಡುಹಿಡಿದಿರುವ ಚಿಕಿತ್ಸಾಪದ್ಧತಿಯ ಕಡೆಗೆ ಮತ್ತಷ್ಟು ತಜ್ಞ ವೈದ್ಯರನ್ನು ಸೆಳೆಯುತ್ತಿದೆ. ಲಿಂಫೇಟಿಕ್ ಫೈಲೇರಿಯಾಸಿಸ್ ಮತ್ತು ದೃಢೀಕೃತ ಚರ್ಮರೋಗಗಳಿಗೆ ಪುರಾವೆ ಸಹಿತ ಸಂಯೋಜಿತ ಚಿಕಿತ್ಸೆಯನ್ನು ರೂಪಿಸಿರುವ ಐಎಡಿಯು ಈ ವಿಚಾರ ಸಂಕಿರಣದಲ್ಲಿ ರೋಗಿಯ ಆರೈಕೆಗಾಗಿ ಪರಿಣಾಮಕಾರಿಯಾದ ಸಂಯೋಜಿತ ಔಷಧಿ, ಸಂವಹನ ವ್ಯವಸ್ಥೆ, ಯೋಗಾಸನದ ಮಹತ್ವಗಳನ್ನು ಇನ್ನಷ್ಟು ಅಳವಡಿಸಿಕೊಂಡು ತನ್ನ ಚಿಕಿತ್ಸಾ ಪದ್ಧತಿಯನ್ನು ಸರಳಗೊಳಿಸುವ ಕುರಿತು ಮುಖ್ಯವಾದ ಚಿಂತನೆಗಳು ಈ ಸಂದರ್ಭದಲ್ಲಿ ನಡೆಯುತ್ತಿದೆ.
  ಆಧುನಿಕ ಜಗತ್ತಿನಲ್ಲಿ ಅಪಾರವಾಗಿ ಬಳಕೆಯಾಗುತ್ತಿರುವ ಅಲೋಪತಿಯ ಜೊತೆಗೆ ಭಾರತೀಯ ಚಿಕಿತ್ಸಾ ಪದ್ಧತಿಗಳಾದ ಆಯುವರ್ೇದಗಳ ಗುಣಾಂಶಗಳನ್ನು ಸಂಯೋಜಿಸಿ ವಿಶಾಲವಾದ ಅವಕಾಶಗಳನ್ನು ಒಳಗೊಂಡ ಸಂಯೋಜಿತ ಚಿಕಿತ್ಸಾ ಪದ್ಧತಿಯನ್ನು ಡಾ| ಎಸ್.ಆರ್. ನರಹರಿಯವರ ನೇತೃತ್ವದಲ್ಲಿ ಕಾಸರಗೋಡಿನ ಇನ್ಸ್ಟಿಟ್ಯೂಟ್ ಓಫ್ ಅಪ್ಲೈಡ್ ಡರ್ಮಟೋಲಜಿಯು ಈಗಾಗಲೇ ರೂಪಿಸಿದ್ದು ಭಾರತೀಯ ಚಿಕಿತ್ಸಾ ಪದ್ಧತಿಗಳು ಅನಾರೋಗ್ಯವನ್ನು ಗುಣಪಡಿಸುವುದರ ಜೊತೆಗೆ ವ್ಯಕ್ತಿಯ ಜೀವನ ಕ್ರಮದ ಬದಲಾವಣೆಯ ಕಡೆಗೂ ಗಮನ ಹರಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತಿದೆ ಎಂಬ ಅಭಿಪ್ರಾಯವನ್ನು ರಷ್ಯಾ ಸೇರಿದಂತೆ ದೇಶ, ವಿದೇಶಗಳಿಂದ ವಿಚಾರ ಸಂಕಿರಣಕ್ಕೆ ಆಗಮಿಸಿದ ರೋಗಿಗಳು ವ್ಯಕ್ತಪಡಿಸುತ್ತಿದ್ದಾರೆ.
  ಇಲ್ಲಿನ ವೈದ್ಯರು ಜೀವನ್ಮುಖಿಗಳಾಗಿರುವುದು ರೋಗಿಗಳಿಗೆ ಜೀವಚೈತನ್ಯವನ್ನು ತುಂಬುತ್ತದೆ. ಕೇವಲ ಅಲೋಪತಿಯಲ್ಲಿ ಗುಣಮುಖವಾಗದ ಖಾಯಿಲೆಗೆ ಅವರು ಇಲ್ಲಿ ಸಂಯೋಜಿತ ಚಿಕಿತ್ಸೆಯ ಮೂಲಕ ಪರಿಹಾರದ ಹಾದಿಯನ್ನು ಕಂಡುಕೊಂಡಿದ್ದಾರೆ. ಭಾರತೀಯ ಚಿಕಿತ್ಸಾ ಪದ್ಧತಿಗೆ ಅದರಲ್ಲೂ ಮುಖ್ಯವಾಗಿ ಆಯುವರ್ೇದ ಪದ್ಧತಿಗೆ ಆಧುನಿಕ ಮಾಧ್ಯಮಗಳಲ್ಲಿ ದೊರೆಯುವ ಪ್ರಧಾನ ತೊಡಕು ಈ ಚಿಕಿತ್ಸಾ ವಿಧಾನದಿಂದ ಗುಣಮುಖರಾದ ಕುರಿತಾದ ದಾಖಲೆಗಳ ಕೊರತೆ. ಆದರೆ ಉಳಿಯತ್ತಡ್ಕದಂತಹ ಗ್ರಾಮೀಣ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳ ಮತ್ತು ಜನರ ಗಮನವನ್ನು ಸೆಳೆದಿರುವ ಮತ್ತು ದಾಖಲೆಗಳ ಸಹಿತ ಚರ್ಮರೋಗದ ಚಿಕಿತ್ಸೆಯಲ್ಲಿ ಸಂಯೋಜಿತ ಚಿಕಿತ್ಸೆಯೇ ಏಕೈಕ ಪರಿಹಾರ ಎಂಬುದನ್ನು ಕಂಡುಕೊಂಡಿರುವ ಐಎಡಿಯು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿ ವೈದ್ಯಕೀಯ ಕ್ಷೇತ್ರದಲ್ಲಿ ತನ್ನ ಸ್ಪಷ್ಟವಾದ ಛಾಪು ಮೂಡಿಸುತ್ತಿದೆ.
  ಸಮಾಜ ಮತ್ತು ಕುಟುಂಬದಿಂದ ಒಳಗಾಗುತ್ತಿರುವ ತಿರಸ್ಕಾರ ಮನೋಭಾವದಿಂದಾಗಿ ನಾವು ಅನಾಥ ಭಾವನೆಗೆ ಒಳಗಾಗುತ್ತಿದ್ದೇವೆ. ಮಾರಕವಾದ ಸಾಂಕ್ರಾಮಿಕ ರೋಗಿಗಳೂ ಅನುಭವಿಸಿದ ಕಷ್ಟವನ್ನು ನಾವು ಎದುರಿಸುತ್ತಿದ್ದೇವೆ. ಈ ಖಾಯಿಲೆಯು ನಮ್ಮನ್ನು ಸಮಾಜದೊಂದಿಗೆ ಬೆರೆಯದಂತೆ ಬೇರ್ಪಡಿಸುತ್ತಿದೆ, ಏಡ್ಸ್ ರೋಗ ಬಾಧಿತರನ್ನೂ ಕೂಡಾ ಗುರುತಿಸಲು ಸಾಧ್ಯವಾಗದ ಸಮಾಜ ನಮ್ಮನ್ನು ತಿರಸ್ಕರಿಸುತ್ತಿದೆ ಎಂದು ಸಾಮಾನ್ಯವಾಗಿ ಆನೆಕಾಲು ರೋಗಿಗಳು ಅಲವತ್ತುಕೊಳ್ಳುತ್ತಾರೆ. ಆದರೆ ಐಎಡಿಯ ಸಂಪರ್ಕಕ್ಕೆ ಬಂದಿರುವ, ಸಂಯೋಜಿತ ಚಿಕಿತ್ಸಾ ವಿಧಾನವನ್ನು ಮೈಗೂಡಿಸಿಕೊಂಡಿರುವ ರೋಗಿಗಳು ಮ್ಲಾನತೆಯಿಂದಿದ್ದ ತಮ್ಮನ್ನು ಹುರಿದುಂಬಿಸಿದ ಐಎಡಿಯ ಶ್ರಮವು ತುಂಬಾ ಶ್ಲಾಘನೀಯ ಎಂಬ ಮಾತನ್ನು ವಿಚಾರ ಸಂಕಿರಣದಲ್ಲಿ ಪರಸ್ಪರ ಹಂಚಿಕೊಳ್ಳುತ್ತಿದ್ದಾರೆ.
ಜಗತ್ತಿನಾದ್ಯಂತ ಸಾಂಕ್ರಾಮಿಕ ರೋಗಗಳ ಪಿಡುಗು ಹೆಚ್ಚುತ್ತಿದೆ. ಜಗತ್ತು ಜಾಗತೀಕರಣದ ಕಡೆಗೆ ಮುಖಮಾಡಿರುವುದರಿಂದ ಖಾಯಿಲೆಗಳೂ ಸರ್ವವ್ಯಾಪಿಯಾಗಿವೆ. ಆಧುನಿಕ ಜಗತ್ತಿನಲ್ಲಿ ಖಾಯಿಲೆಗಳ ವೈವಿಧ್ಯ ಮತ್ತು ಖಾಯಿಲೆ ಪೀಡಿತರ ಸಾಂದ್ರತೆ ಅಧಿಕವಾಗುತ್ತಿದೆ. ಅನೇಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗಿದ್ದರೂ ಆನೆಕಾಲು ರೋಗದ ನಿಮರ್ೂಲನೆ ಪೂತರ್ಿಯಾಗಿ ಇನ್ನೂ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಚಿಕಿತ್ಸಾ ಪದ್ಧತಿಯನ್ನು ರೂಪಿಸಿದ ಐಎಡಿಯು ಈಗಾಗಲೇ ಐದು ಸಾವಿರಕ್ಕೂ ಮಿಕ್ಕಿ ರೋಗಿಗಳ ದೈನಂದಿನ ಜೀವನಕ್ಕೂ ಅಡ್ಡಿಯಾಗುತ್ತಿದ್ದ ಪ್ರಧಾನ ಸಮಸ್ಯೆಯನ್ನು ಪರಿಹರಿಸಿದೆ. ಆನೆಕಾಲು ರೋಗದ ಹೊರತಾಗಿ ಮೈ ಮೇಲೆಲ್ಲ ಹರಡಿ ಅಸಹ್ಯವಾಗಿ ಕಾಣುತ್ತಿದ್ದ ಬಿಳಿತೊನ್ನು( ಪಾಂಡು ಅಥವಾ ವಿಟಿಲಿಗೋ) ರೋಗ, ಕುಷ್ಟರೋಗದಿಂದ ಉಂಟಾದ ಅಂಗವೈಕಲ್ಯ, ಏಡ್ಸ್/ಎಚ್.ಐ.ವಿ ಮತ್ತು ವಿವಿಧ ಚರ್ಮ ರೋಗಗಳಿಗೆ ಯಶಸ್ವಿ ಚಿಕಿತ್ಸೆಯನ್ನೂ ಐಎಡಿಯು ರೂಪಿಸುತ್ತಿದೆ.
  ಪರಂಪರಾಗತ ಭಾರತೀಯ ಯೋಗ, ಆಯುವರ್ೆದಗಳನ್ನು ಅಲೋಪತಿಯ ಜೊತೆ ಸಂಯೋಜಿಸಿದ ಚಿಕಿತ್ಸಾ ಪದ್ಧತಿಯನ್ನು ಐಎಡಿಯು ರೂಪಿಸಿದ್ದು ಚಿಕಿತ್ಸೆಯ ಸಂದರ್ಭದಲ್ಲಿ ಭಾರತೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ `ಗೃಹೋಪಚಾರ' ಪದ್ಧತಿಗೆ ಒತ್ತು ನೀಡುವುದರಿಂದ ಮತ್ತು ಆಸ್ಪತ್ರೆಯಿಂದ ಹಿಂತಿರುಗಿದ ನಂತರ ಕುಟುಂಬದ ಸದಸ್ಯರ ಸಹಯೋಗದೊಂದಿಗೆ ಮನೆಯಲ್ಲೇ ಚಿಕಿತ್ಸೆಯನ್ನು ಮುಂದುವರಿಸಲು ಸಾಧ್ಯವಾಗುವಂತೆ ಸ್ವಸಹಾಯ ಚಿಕಿತ್ಸೆಯನ್ನು ಉತ್ತೇಜಿಸುತ್ತಿರುವುದರಿಂದ ರೋಗಿಗಳಿಗೆ ಮಾನಸಿಕ ನೆಮ್ಮದಿ ಮತ್ತು ದೈಹಿಕ ಸುಸ್ಥಿತಿ ಲಭ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಆಧುನಿಕ ಜೀವ ವೈದ್ಯಕೀಯ ರೋಗ ನಿರ್ಣಯ ವಿಧಾನ ಮತ್ತು ಔಷಧಿಗಳಿಗೆ ಪಯರ್ಾಯವಾಗಿ ಸ್ವ ಸಹಾಯಕರ ಯೋಗ ಮತ್ತು ಆಯುವರ್ೆದ ಔಷಧಿಗಳನ್ನು ಐಎಡಿ ಅಭಿವೃದ್ಧಿಪಡಿಸಿದೆ. ಈ ಕುರಿತಾದ ದಾಖಲೆಗಳನ್ನು ಮತ್ತಷ್ಟು ಸಂಗ್ರಹಿಸಿ, ಚಿಕಿತ್ಸಾ ಪದ್ಧತಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿಚಾರ ಸಂಕಿರಣದಲ್ಲಿ ಪ್ರತ್ಯೇಕ ಸೆಮಿನಾರ್ ನಡೆಯುತ್ತಿದೆ.
ಇಂಗ್ಲೆಂಡಿನ ಆಕ್ಸ್ಫಡರ್್ ವಿಶ್ವವಿದ್ಯಾನಿಲಯದ ಡರ್ಮಟೋಲಜಿ ವಿಭಾಗದ ಗೌರವ ಪ್ರಾಚಾರ್ಯ ಡಾ. ಟೆರೆನ್ಸ್ ಜೆ. ರಯಾನ್, ಹರಿದ್ವಾರದ ಪತಂಜಲಿ ರಿಸಚರ್್ ಫೌಂಡೇಶನಿನ ನಿದರ್ೇಶಕಿ ಡಾ|ಶಿಲರ್ೆ ಟೆಲೆಸ್ ಮತ್ತಿತರರು ವಿಚಾರ ಸಂಕಿರಣಕ್ಕೆ ನೇತೃತ್ವ ನೀಡುತ್ತಿದ್ದಾರೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries