ಸಾರಿಗೆ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುವತ್ತ ಕೇರಳ ಸರಕಾರದ ನಿರ್ಣಯಗಳು
ಕುಂಬಳೆ: ಕೇರಳ ಸರಕಾರವು ಆಥರ್ಿಕ ಸಂಕಷ್ಟದಿಂದ ಬಳಲುತ್ತಿದ್ದು, ಮುಗ್ಗಟ್ಟಿನಿಂದ ಹೊರಬರಲು ಸರಕಾರ ಕೈಗೊಂಡಿರುವ ನಿರ್ಣಯಗಳು ಸಾರಿಗೆ ವ್ಯವಸ್ಥೆಯನ್ನೇ ಬುಡಮೇಲು ಗೊಳಿಸುವತ್ತ ಹೊರಟಿದೆ.
ಕೇರಳ ಸರಕಾರದ ಹೊಸಬಗೆಯ ಆಥರ್ಿಕ ನೀತಿಗೆ ಪ್ರಥಮ ಬಲಿಪಶು ಆಗಿರುವುದು ಟ್ರಾನ್ಸ್ಪೋಟರ್್ ಉದ್ಯಮವನ್ನು ಜೀವನ ಮಾರ್ಗವಾಗಿಸಿರುವ ಟ್ಯಾಕ್ಸೀ ಮಾಲಕರಾಗಿದ್ದಾರೆ.
ಶಾಸಕರು, ಮಂತ್ರಿಗಳು ಅವರ ಸರಕಾರಿ ಭೂಮಿಯನ್ನು ಕೈವಶ ಇರಿಸುವುದು, ಸ್ವಂತ ಜಮೀನಿಗೆ ತೆರಿಗೆ ಪಾವತಿಸದಿರುವಾಗ ಕ್ರಮ ಕೈಗೊಳ್ಳದ ಸರಕಾರ ತೆರಿಗೆ ಪಾವತಿಸದೆ ಸಾರಿಗೆ ಅಗತ್ಯಗಳಿಗೆ ತೆರಳುವ ಅನಧಿಕೃತ ಖಾಸಗೀ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕುವಲ್ಲಿ ನಿಷ್ಕ್ರೀಯವಾಗಿರುವ ಕೇರಳ ಸರಕಾರವು, ಬಾಡಿಗೆ ಇಲ್ಲದೇ ಆಥರ್ಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಸ್ವಉದ್ಯೋಗಕ್ಕಾಗಿ ವಿವಿಧ ಮೂಲಗಳಿಂದ ಸಾಲ ಮಾಡಿ ಟ್ಯಾಕ್ಸಿಯನ್ನು ಅವಲಂಬಿಸಿರುವ ಟ್ಯಾಕ್ಸೀ ಮಾಲಕರ ಜೀವನೋಪಾಯಕ್ಕೆ ಮಾರಕವಾಗುವ ನಿಯಮ ರೂಪಿಸಿ ಜಾರಿಯಾಗಿಸುವ ಮೂಲಕ ಸಂಕಷ್ಟಕ್ಕೆ ತಳ್ಳಿರುವುದು ವ್ಯಾಪಕ ಅಸಮಧಾನಕ್ಕೆ ಕಾರಣವಾಗುತ್ತಿದೆ.
ಪಾವತಿಸಿರುವ ತೆರಿಗೆಯ ಕಾಲಾವಧಿ ಪೂರ್ಣವಾಗುವ ಮುಂಚೆಯೇ ಅಂಚೆ ಮುಖಾಂತರವಾಗಿ ಒಂದು ನೋಟೀಸ್ ನೀಡುವ ಮೂಲಕ ಏಳು ದಿನಗಳೊಳಗೆ ಮುಂಗಡವಾಗಿ ಮುಂದಿನ ಹತ್ತು ವರ್ಷಗಳ ತೆರಿಗೆ ಒಮ್ಮೆಲೇ ಪಾವತಿಸಬೇಕೆಂದು ನಿದರ್ೇಶಿಸಿದ್ದು ತಪ್ಪಿದಲ್ಲಿ ರೆವೆನ್ಯೂ ರಿಕವರಿಯಂತಹ ಕ್ರಮಗೈಗೊಳ್ಳುವ ಬೆದರಿಕೆ ಹಾಕಿರುವುದು ಬಡ ಟ್ಯಾಕ್ಸೀ ಮಾಲಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರಿಂದ ಕಂಗೆಟ್ಟಿರುವ ವಿವಿಧ ಟ್ಯಾಕ್ಸೀ ಸಂಘಟನೆಗಳು ಸಾರಿಗೆ ಇಲಾಖೆಗೆ ಮುತ್ತಿಗೆ ಹಾಕಲು ತೀಮರ್ಾನಿಸಿದ್ದಾರೆ.
ಅಧಿಕಾರಿಗಳು ಏನಂತಾರೆ:
ಸರಕಾರದ ಆದೇಶಗಳನ್ನು ನಾವು ಜಾರಿಗೊಳಿಸುವುದು ಕರ್ತವ್ಯವಾಗಿದ್ದು, ಬೇರೇನೂ ಮಾಡುವಂತಿಲ್ಲ. ಸರಕಾರ 15 ವರ್ಷಗಳ ತೆರಿಗೆಯನ್ನು ಪಾವತಿಸಲು ಸೂಚಿಸಿದ್ದು, ಆದರೆ ಇದೀಗ ಮೊದಲ 5 ವರ್ಷಗಳ ತೆರಿಗೆಯನ್ನು ಮಾತ್ರ ಮುಂಚಿತವಾಗಿ ಪಾವತಿಸುವುದು ಕರ್ತವ್ಯವಾಗಿದೆ. ಇಲ್ಲದಿದ್ದಲ್ಲಿ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ. ಟ್ಯಾಕ್ಸಿ ಸಂಘಟನೆಗಳು ಕೋಟರ್್ ಮೆಟ್ಟಲೇರಿ ಪ್ರಶ್ನಿಸಬಹುದಾಗಿದೆ.
ಬಾಬು.
ಜಿಲ್ಲಾ ಆರ್.ಟಿ.ಓ ಅಧಿಕಾರಿ. ಕಾಸರಗೋಡು ಜಿಲ್ಲೆ.
ನೊಂದವರ ನುಡಿ:
ತಾನು ಮಧ್ಯಮ ವರ್ಗದ ಟ್ಯಾಕ್ಸಿ ಚಾಲಕನಾಗಿದ್ದು, 2014 ರಲ್ಲಿಯೇ ಹೊಸ ವಾಹನ ಖರೀಧಿಸಿ 10 ವರ್ಷಗಳ ತೆರಿಗೆ ಪಾವತಿಸಿರುವೆ. ಈ ಮಧ್ಯೆ ಮತ್ತೆಮತ್ತೆ ತೆರಿಗೆ ಪಾವತಿಸಲು ಅಸಾಧ್ಯವಾಗುವ ಸ್ಥಿತಿಯಿದೆ. ಇದೀಗ ಕಳೆದ ಒಂದು ವರ್ಷದಿಂದ ಬಾಡಿಗೆಯ ಗ್ರಾಹಕರ ಕೊರತೆಯಿಂದ ದೊಡ್ಡ ಪ್ರಮಾಣದ ಆದಾಯದ ಕೊರತೆ ಕಂಡುಬಂದಿದ್ದು, ಮತ್ತೆ ತೆರಿಗೆ ಪಾವತಿಸುವ ಸ್ಥಿತಿಯಲ್ಲಿಲ್ಲ. ಈ ಕಾರಣದಿಂದ ಅಧಿಕಾರಿಗಳು, ಜನನಾಯಕರ ಮೂಲಕ ಇದಕ್ಕೊಂದು ಪರಿಹಾರಕ್ಕೆ ಯತ್ನಿಸುತ್ತಿರುವೆ.ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ರವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪರಿಹಾರ ಕ್ರಮದ ಬಗ್ಗೆ ಭರವಸೆ ನೀಡಿರುವರು.
ಅಜಿತ್ ಸ್ವರ್ಗ
ಟ್ಯಾಕ್ಸಿ ಚಾಲಕ.