ಜ.26 ರಂದು ಪ್ರತಿಭಟನಾ ಸಮಾವೇಶ
ಬದಿಯಡ್ಕ: ಕನ್ನಡ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜ.26 ಗಣರಾಜ್ಯೋತ್ಸವದಂದು ಬದಿಯಡ್ಕದಲ್ಲಿ ಪ್ರತಿಭಟನಾ ಸಮಾವೇಶವು ನಡೆಯಲಿರುವುದು.
ಅಂದು ಸಂಜೆ 4 ಘಂಟೆಗೆ ಕ್ಯಾಂಪ್ಕೋ ಪರಿಸರದಲ್ಲಿ ಜರಗಲಿರುವ ಈ ಪ್ರತಿಭಟನೆಯಲ್ಲಿ ಕನ್ನಡದ ವಿವಿಧ ಸಂಘ ಸಂಸ್ಥೆಗಳ ಜಿಲ್ಲಾ ಮಟ್ಟದ ನೇತಾರರು ಭಾಗವಹಿಸಲಿದ್ದಾರೆ. ಆದುದರಿಂದ ಕನ್ನಡ ಸಂಸ್ಕೃತಿ ಪ್ರಿಯರೆಲ್ಲ ಭಾಗವಹಿಸಿ, ಕಾಸರಗೋಡಿನ ಬಹುಭಾಷಾ ಸಂಸ್ಕೃತಿಯ ವಿರುದ್ಧವಾದ ಸರಕಾರದ ದಮನಕಾರೀ ಧೋರಣೆಯನ್ನು ಪ್ರತಿಭಟಿಸುತ್ತಾ ತಮ್ಮ ಧ್ವನಿ ಎತ್ತಬೇಕಾಗಿ ಸಂಚಾಲಕರಾಗಿರುವ ಕರಿಂಬಿಲ ಲಕ್ಷ್ಮಣ ಪ್ರಭು ಹಾಗೂ ಸುಂದರ ಬಾರಡ್ಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.