HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                      ದೈವಾರಾಧನೆ ಸಾಮಾಜಿಕ ಏಕತೆ, ನಂಬಿಕೆಗಳ ಸಂಕೇತ-ಶಂಕರನಾರಾಯಣ ಭಟ್ ನಡಿಬೈಲು
     ಮಂಜೇಶ್ವರ: ಲೌಕಿಕದ ಆಶೆ-ಆಕಾಂಕ್ಷೆಗಳಿಗೆ ಬಲಿಬಿದ್ದು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸ್ವಾರ್ಥ ರಹಿತ ಮನೋಭಾವದಿಂದ ಭಗವಂತನನ್ನು ಪೂಜಿಸಿದಾಗ ಭಗವದನುಗ್ರಹ ಖಂಡಿತಾ ಲಭಿಸುತ್ತದೆ. ಪ್ರಕೃತಿ ಮತ್ತು ದೈವತ್ವ ಒಂದಕ್ಕೊಂದು ಪೂರಕವಾದದ್ದು, ಅದರಿಂದ ದೈವಾರಾಧನೆ ಬೆಳೆದುಬಂತು ಎಂದು ಹಿರಿಯ ವೈದಿಕ ವಿದ್ವಾಂಸ ವೇದಮೂತರ್ಿ ಶಂಕರನಾರಾಯಣ ಭಟ್ ನಡಿಬೈಲು ಅಭಿಪ್ರಾಯ ವ್ಯಕ್ತಪಡಿಸಿದರು.
   ಕೊಡ್ಲಮೊಗರು ಪಜ್ಜದ ಶ್ರೀಮಲರಾಯಿ ಮತ್ತು ಪರಿವಾರ ದೈವಗಳ 25ನೇ ವಷರ್ಾವಧಿ ನೇಮೋತ್ಸವದ ಅಂಗವಾಗಿ ಮಂಗಳವಾರ ನಡೆದ ಧಾಮರ್ಿಕ ಸಭೆಯಲ್ಲಿ ಧಾಮರ್ಿಕ ಉಪನ್ಯಾಸಗೈದು ಅವರು ಮಾತನಾಡಿದರು.
   ತುಳುನಾಡಿನಾದ್ಯಂತ ಬೆಳೆದುಬಂದಿರುವ ದೈವಾರಾಧನೆ ಸಾಮಾಜಿಕ ಏಕತೆ, ನಂಬಿಕೆಗಳ ಮೂಲಕ ಸೌಖ್ಯ ಸಮಾಧಾನಕರ ಕುಟುಂಬ ವ್ಯವಸ್ಥೆಗಳಿಗೆ ಕಾರಣವಾಗಿದೆ. ಜಾತಿ, ಪಂಗಡಗಳಾಚೆ ಎಲ್ಲರನ್ನೂ ಒಗ್ಗಟ್ಟಾಗಿ ಬೆಳೆಸುವ ದೈವಶಕ್ತಿ ವರ್ತಮಾನವನ್ನು ಸಂತುಷ್ಠಗೊಳಿಸುವ ಲಕ್ಷ್ಯವನ್ನಷ್ಟೆ  ಹೊಂದಿದೆ ಎಂದು ಅವರು ತಿಳಿಸಿದರು.
   ತಂತ್ರಿವರ್ಯ ವಕರ್ಾಡಿ ಹೊಸಮನೆ ರಾಜೇಶ್ ತಾಳಿತ್ತಾಯ ದೀಪ ಬೆಳಗಿಸಿ ಉದ್ಘಾಟಿಸಿದ ಸಮಾರಂಭದ ಅಧ್ಯಕ್ಷತೆಯನ್ನು ನೇಮೋತ್ಸವ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ ನಡಿಮೊಗರು ವಹಿಸಿದ್ದರು.
    ಸಭೆಯಲ್ಲಿ ಪವಿತ್ರಪಾಣಿ ಕುಶಲಕುಮಾರ ಪಾತೂರಾಯ ಕೊಡ್ಲಮೊಗರು, ದೈವದ ಗಡಿಪ್ರಧಾನ ರಾಮಯ್ಯ ನಾಯ್ಗ ತುಪ್ಪೆ, ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಪಜ್ಜ, ಸತ್ಯನಾರಾಯಣ ಭಟ್, ಶ್ರೀಧೃ ಶೆಟ್ಟಿ ಮೇಗಿನಗುತ್ತು, ಕೇರಳ ತುಳು ಅಕಡೆಮಿ ಸದಸ್ಯ ವಿಶ್ವನಾಥ ಕುದುರು, ಸೋಮಪ್ಪ ಸಸಿಗೋಳಿ ಉಪಸ್ಥಿತರಿದ್ದು ಮಾತನಾಡಿದರು.
  ದೈವದ ಪಾತ್ರಿ ಶೇಖರ ಶೆಟ್ಟಿ, ವಸಂತ, ದೈವನರ್ತಕ ಲಕ್ಷ್ಮಣ ಯಾನೆ ಕಾಂತರನ್ನು ಸಭೆಯಲ್ಲಿ ಗೌರವಿಸಲಾಯಿತು. ನೇಮೋತ್ಸವ ಸಮಿತಿ ಕಾರ್ಯದಶರ್ಿ ಗೋಪಾಲಕೃಷ್ಣ ಪಜ್ಜ ಸ್ವಾಗತಿಸಿ, ಬಿ.ಮೋಹನ ಮಾಸ್ತರ್ ವಂದಿಸಿದರು. ದೇವೀಪ್ರಸಾದ್ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅನ್ನಸಂತರ್ಪಣೆ, ದೇಂತಡ್ಕ ಮೇಳದವರಿಂದ ಅಮರ ಶಿಲ್ಪಿ ವೀರ ಶಂಭು ಕಲ್ಕುಡ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries