ಮಾರ್ಪನಡ್ಕ ಗುಳಿಗ ಬನದ ಪ್ರತಿಷ್ಠಾ ವಾಷರ್ಿಕೋತ್ಸವ
ಬದಿಯಡ್ಕ: ಮಾರ್ಪನಡ್ಕ ಗುಳಿಗ ಬನದ ಪ್ರತಿಷ್ಠಾ ವಾಷರ್ಿಕೋತ್ಸವದ ಸಂದರ್ಭದಲ್ಲಿ ತಂತ್ರಿವರ್ಯ ವೇದಮೂತರ್ಿ ಬಳ್ಳಪದವು ಡಾ.ಮಾಧವ ಉಪಾಧ್ಯಾಯರನ್ನು ಸಮ್ಮಾನಿಸಲಾಯಿತು.
ನಾರಂಪಾಡಿ ಉಮಾಮಹೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮ್ಮಾನವನ್ನು ಸ್ವೀಕರಿಸಿ ವೇದಮೂತರ್ಿ ಮಾಧವ ಉಪಾಧ್ಯಾಯರು ಮಾತನಾಡುತ್ತಾ ಭಕ್ತಿಗೆ ಸರಳ ಮಾರ್ಗವಾಗಿದೆ ಭಜನೆ. ನಿತ್ಯ ದೇವರ ನಾಮ ಸ್ಮರಣೆಯನ್ನು ಮಾಡುತ್ತಿರುವಲ್ಲಿ ಅಷ್ಟಲಕ್ಷ್ಮ್ಮಿಯರು ನೆಲೆಸುತ್ತಾರೆ. ನಿರ್ಮಲ ಭಕ್ತಿಯಿಂದ ಮಾಡುವ ಭಜನೆಗೆ ದೇವತಾ ಶಕ್ತಿಗಳು ಬೇಗನೆ ಒಲಿಯುತ್ತವೆ. ಮನೆ ಮನೆಯಲ್ಲೂ ಭಜಕರಿದ್ದಲ್ಲಿ ಶಾಂತಿ ನೆಮ್ಮದಿಯನ್ನು ಪಡೆಯಬಹುದು. ಶ್ರದ್ಧೆಯಿಂದ ಮಾಡುವ ಭಜನೆ ಸನಾತನ ಸಂಸ್ಕೃತಿಯನ್ನು ಉಳಿಸಲು ಸಹಾಕಾರಿಯಾಗಬಲ್ಲದು ಎಂದರು.
ಅಗಲ್ಪಾಡಿ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಭಟ್ ಉಪ್ಪಂಗಳ ಅವರ ಗೌರವ ಉಪಸ್ಥಿತಿಯಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಕೋಡೋತ್ ಧಾಮರ್ಿಕ ಉಪನ್ಯಾಸವನ್ನು ನೀಡಿ ಮಾತನಾಡಿ, ಭಾರತೀಯ ಸಂಸ್ಕೃತಿಯ ಘನತೆಯನ್ನು ಉಳಿಸಿಕೊಂಡರೆ ಮಾತ್ರ ನಮ್ಮ ಘನತೆ ಉಳಿಯಬಲ್ಲದು. ಪಾಶ್ಚಾತ್ಯರನ್ನು ಅನುಸರಿಸಿ ನಮ್ಮ ಸಂಸ್ಕೃತಿಯ ಅವನತಿಗೆ ನಾವು ಕಾರಣೀಭೂತರಾಗುತ್ತಿರುವುದು ಖೇದಕರ. ನಿಯಮಿತವಾದ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗುವ ಅಭ್ಯಾಸವಿಟ್ಟುಕೊಳ್ಳಬೇಕು. ಧಾಮರ್ಿಕ ಚಿಂತನೆಗಳತ್ತ ನಮ್ಮನ್ನು ನಾವು ಕೊಂಡೊಯ್ಯಬೇಕಿದೆ. ತನ್ಮೂಲಕ ಹಿಂದೂ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು ಎಂದು ಅಭಿಪ್ರಾಯಪಟ್ಟರು.
ಸಂಚಾಲಕ, ನಿವೃತ್ತ ಅಧ್ಯಾಪಕ ರಾಮಚಂದ್ರ ಭಟ್ ಉಪ್ಪಂಗಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟಕೃಷ್ಣ ಭಟ್ ಕೊಟ್ಟಂಗುಳಿ ಶುಭಾಶಂಸನೆಗೈದರು. ಸೇವಾ ಸಮಿತಿ ಅಧ್ಯಕ್ಷ ರಾಮ ನಾಯ್ಕ ಮಾರ್ಪನಡ್ಕ ಉಪಸ್ಥಿತರಿದ್ದರು.
ಉತ್ಸವ ಸಮಿತಿಯ ಅಧ್ಯಕ್ಷ ಬಾಬು ಮಾಸ್ಟರ್ ಅಗಲ್ಪಾಡಿ ಸ್ವಾಗತಿಸಿ, ಶ್ರೀಧರ ಪದ್ಮಾರು ವಂದಿಸಿದರು. ರಾಜೇಶ್ ಮಾಸ್ಟರ್ ಅಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ದ್ವಿತೀಯ ವಾಷರ್ಿಕ ಪ್ರತಿಷ್ಠಾ ಮಹೋತ್ಸವದಂಗವಾಗಿ ಬೆಳಗ್ಗೆ ಮಹಾಗಣಪತಿ ಹೋಮ, ಶುದ್ಧಿ ಕಲಶ, ತಂಬಿಲ ಹಾಗೂ ಅಪರಾಹ್ನ ಶ್ರೀ ಗುಳಿಗ ದೈವದ ಕೋಲ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.