HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                       ಹೆದ್ದಾರಿ ಭೂಸ್ವಾಧೀನ : ಸಿಪಿಸಿಆರ್ಐಗೆ ಅತಿ ಹೆಚ್ಚು  ನಷ್ಟ
   ಕುಂಬಳೆ: ಜಿಲ್ಲೆಯಲ್ಲಿ  ರಾಷ್ಟ್ರೀಯ ಹೆದ್ದಾರಿಯನ್ನು  ಚತುಷ್ಪಥವಾಗಿ ಅಭಿವೃದ್ಧಿಗೊಳಿಸುವ  ನಿಟ್ಟಿನಲ್ಲಿ ಅತ್ಯಧಿಕ ಸ್ಥಳ ಸ್ವಾಧೀನಪಡಿಸಲು ಇರುವುದು ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್ಐ)ಯದ್ದಾಗಿದೆ.
    ಸಿಪಿಸಿಆರ್ಐ ಐದು ಎಕರೆಯಷ್ಟು  ಸ್ಥಳ ನೀಡಬೇಕಿದೆ. ಹೆದ್ದಾರಿಗೆ ಅಗತ್ಯವಿರುವಷ್ಟು  ಜಾಗವನ್ನು  ಶೀಘ್ರವೇ ಹಸ್ತಾಂತರಿಸಬೇಕು ಎಂದು ಜಿಲ್ಲಾಧಿಕಾರಿಯವರು ಸಿಪಿಸಿಆರ್ಐ ನಿದರ್ೇಶಕರಿಗೆ ಸುತ್ತೋಲೆ ಕಳುಹಿಸಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಸಮಿತಿಯ ಅನುಮತಿ ದೊರಕಿದ ಬಳಿಕವಷ್ಟೇ ಈ ಭೂಮಿಯನ್ನು  ಹಸ್ತಾಂತರಿಸಲು ಸಾಧ್ಯವಿದೆ.
ಇಷ್ಟೊಂದು ಸ್ಥಳವನ್ನು ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡುವಾಗ ಸಿಪಿಸಿಆರ್ಐನ ಪ್ರಧಾನ ಗೇಟ್ ಆವರಣ ಗೋಡೆ ಇತ್ಯಾದಿ ತೆರವುಗೊಳಿಸಬೇಕಾಗಿ ಬರಲಿದೆ. ಬದಲಿ ಆವರಣ ಗೋಡೆ ನಿಮರ್ಿಸಲಿರುವ ವೆಚ್ಚವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒದಗಿಸಲಿದೆ. ಹೆದ್ದಾರಿ ಅಭಿವೃದ್ಧಿ  ಆರಂಭಿಸಲು ಸ್ಥಳ ಸ್ವಾಧೀನಪಡಿಸುವಿಕೆಗೆ ಸಂಬಂಧಿಸಿ ಜಿಲ್ಲೆಯಲ್ಲಿ  ಪ್ರಸ್ತುತ ಮೂರು ಭಾಗಗಳಲ್ಲಿರುವ ಅಡಚಣೆಗಳನ್ನು  ಪರಿಹರಿಸಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
    ಪುಲ್ಲೂರು ಗ್ರಾಮ ಪಂಚಾಯತಿಯ ಚಳಿಯಂಗೋಡಿನ 11 ಮಂದಿ, ಅಜಾನೂರು ಗ್ರಾಮ ಪಂಚಾಯತಿಯ ಮೂಲಕಂಡದ 7 ಮಂದಿ, ನೀಲೇಶ್ವರ ಪಳ್ಳಿಕೆರೆ ರೈಲ್ವೇ ಗೇಟ್ ಸಮೀಪ ಓರ್ವ ವ್ಯಕ್ತಿಯ ಜಾಗವನ್ನು  ಸ್ವಾಧೀನಪಡಿಸಲಿರುವ ಅಡಚಣೆಗಳನ್ನು  ಪರಿಹರಿಸಲಾಗಲಿಲ್ಲ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಸ್ವಾಧೀನಪಡಿಸಿದ ಎಲ್ಲಾ  ಸ್ಥಳ ಹಾಗೂ ಅದರಲ್ಲಿರುವ ಕಟ್ಟಡಗಳು ಮೊದಲಾದವುಗಳ ಬೆಲೆ ನಿರ್ಣಯಿಸಿ ಫೆಬ್ರವರಿಯಲ್ಲೇ ಹಸ್ತಾಂತರ ಪ್ರಕ್ರಿಯೆಗಳನ್ನು  ಪೂತರ್ಿಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
   ಸ್ಥಳ, ಕಟ್ಟಡ ಮಾಲಕರಿಗೆ ನೀಡಬೇಕಾದ ಬೆಲೆ, ಪರಿಹಾರ ಧನ ಮಂಜೂರುಗೊಳಿಸಲಾಗಿದೆ. ಸ್ಥಳ ಸ್ವಾಧೀನಪಡಿಸುವ ವಿಭಾಗಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈಗಾಗಲೇ 6 ಕೋಟಿ ರೂ. ಲಭಿಸಿದೆ. ಬೆಲೆ ನಿರ್ಣಯ ಪರಿಗಣಿಸಿ ವರದಿ ಕಳುಹಿಸಿದೊಡನೆ ಸ್ಥಳ - ಕಟ್ಟಡ ಮಾಲಕರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹಣ ಮಂಜೂರುಗೊಳಿಸಲಿದೆ. ಈ ಹಣವನ್ನು  ಶೀಘ್ರವೇ ವಿತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಶೇಕಡಾ 80ರಷ್ಟು  ಸ್ಥಳದ ಹಸ್ತಾಂತರ ಪೂತರ್ಿಯಾದರೆ ನಿಮರ್ಾಣ ಕಾರ್ಯ ಆರಂಭಿಸಬಹುದು ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಿಲುವಾಗಿದೆ. ಈ ಹಿಂದೆ ಶೇಕಡಾ 60 ಸ್ಥಳ ಸ್ವಾಧೀನಪಡಿಸಿದ ಬಳಿಕ ಕಾಮಗಾರಿ ಆರಂಭಿಸುವುದಾಗಿ ಹೇಳಲಾಗಿತ್ತು. ಇದೇ ವೇಳೆ ಮೇ ತಿಂಗಳಲ್ಲಿ  ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಿಮರ್ಾಣ ಕಾಮಗಾರಿ ಆರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.
    ಪುನರ್ವಸತಿ ಪ್ಯಾಕೇಜ್ ಘೋಷಣೆ : ಕಾಸರಗೋಡು ಜಿಲ್ಲೆಯಲ್ಲಿ  ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಸ್ಥಳ ಮತ್ತು  ಕಟ್ಟಡಗಳನ್ನು  ಬಿಟ್ಟುಕೊಡುವಾಗ ಬಾಡಿಗೆ ನಿವಾಸಿಗಳು, ತಳ್ಳುಗಾಡಿ ಮೊದಲಾದವುಗಳನ್ನು  ಇಟ್ಟುಕೊಂಡು ಸಂಪಾದನೆ ನಡೆಸುತ್ತಿರುವವರು, ವ್ಯಾಪಾರ ಸಂಸ್ಥೆಗಳು ಮೊದಲಾದೆಡೆ ನೌಕರಿ ನಿರ್ವಹಿಸುವವರು, ಇತರ ವ್ಯಾಪಾರಿಗಳು ಮೊದಲಾದವರಿಗೆ ಸರಕಾರ ಪುನರ್ವಸತಿ ಪ್ಯಾಕೇಜ್ ಘೋಷಿಸಿದೆ. ಆದರೆ ಈ ಪ್ಯಾಕೇಜ್ ಲಭ್ಯಗೊಳಿಸಲಿರುವ ಕ್ರಮ ಇದುವರೆಗೆ ಆರಂಭಗೊಂಡಿಲ್ಲ. ಇದಕ್ಕೆ ಪ್ರತ್ಯೇಕ ಅಧಿಕಾರಿಗಳ ಮತ್ತು  ನೌಕರರ ತಂಡವನ್ನು  ನಿಯೋಜಿಸಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries