ಜೈವ ಗೊಬ್ಬರ ಬಳಸಿ ಕೃಷಿ ಉತ್ಪನ್ನ ದುಪ್ಪಟ್ಟು : ಸಚಿವ ಸದಾನಂದ ಗೌಡ
ಕಾಸರಗೋಡು: ಹಲವು ಕಾರಣದಿಂದ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ನಾಶನಷ್ಟ ಸಂಭವಿಸುತ್ತಿದ್ದು, ಈ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಜೈವ ಗೊಬ್ಬರ ಬಳಸಿ ಕೃಷಿ ಉತ್ಪನ್ನಗಳನ್ನು ದುಪ್ಪಟ್ಟುಗೊಳಿಸುವ ಮೂಲಕ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಕೇಂದ್ರ ಸಂಖ್ಯಾ ಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ ಅವರು ಹೇಳಿದರು.
ಕಾಸರಗೋಡಿನ ಐ.ಸಿ.ಎ.ಆರ್.-ಸಿ.ಪಿ.ಸಿ.ಆರ್.ಐ.ಯಲ್ಲಿ ಆರು ದಿನಗಳ ಎಗ್ರಿಎಕ್ಸ್ಪೋ - 2018 ರ ಅಂಗವಾಗಿ ಆಯೋಜಿಸಿದ ಬೃಹತ್ ಕೃಷಿ ಮೇಳವನ್ನು ಸೋಮವಾರ ದೀಪ ಬೆಳಗಿಸಿ ಉದ್ಘಾಟಿಸಿ ಸಚಿವರು ಮಾತನಾಡಿದರು. ಕಾರ್ಯಕ್ರಮಕ್ಕೆ ಮುನ್ನ ಸಚಿವರು ಕೇಂದ್ರೀಯ ವಿದ್ಯಾಲಯ, ಸಿ.ಪಿ.ಸಿ.ಆರ್.ಐ.ಯ ನೂತನ ಕಟ್ಟಡವನ್ನೂ ಲೋಕಾರ್ಪಣೆ ಗೈದರು.
ಕೇರಳ ದೇವರ ನಾಡು ಹಾಗೇ ತೆಂಗಿನ ನಾಡು ಕೂಡಾ ಹೌದು. ಕೇರಳದಲ್ಲಿ ದಕ್ಷಿಣದಿಂದ ಉತ್ತರದ ವರೆಗೆ ಕೃಷಿ ವೈವಿಧ್ಯತೆ ಬೆಳೆಯುತ್ತಿದ್ದು, ರಾಜ್ಯದ ಪ್ರಮುಖ ಆಥರ್ಿಕ ಸಂಪನ್ಮೂಲವೂ ಆಗಿದೆ. ಆದರೆ ಕೃಷಿಕರು ಹಲವು ಸಮಸ್ಯೆಗಳನ್ನು ಇಂದು ಎದುರಿಸುತ್ತಿದ್ದಾರೆ. ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇನ್ನೂ ಹಲವು ಯೋಜನೆಗಳು ಜಾರಿಯಾಗಲಿವೆ. ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಎಂಬ ನೆಲೆಯಲ್ಲಿ ಕೇಂದ್ರ ಸರಕಾರ `ಪರಂಪರಾಗತ ಕೃಷಿ ವಿಕಾಸ್ ಯೋಜನಾ(ಪಿಕೆವಿವೈ), ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನಾ(ಪಿಎಂಕೆಎಸ್ವೈ), ರಾಷ್ಟ್ರೀಯ ಆಹಾರ ಭದ್ರತಾ ಮಿಶನ್(ಎನ್ಎಫ್ಎಸ್ಎಂ) ಮೊದಲಾದ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಮೂಲಕ ಕೃಷಿಕರಿಗೆ ನ್ಯಾಯ ಬೆಲೆ ಒದಗಿಸುವ ಜೊತೆಗೆ ಸೂಕ್ತ ಮಾರುಕಟ್ಟೆಯನ್ನು ಕಲ್ಪಿಸುವ ಪ್ರಯತ್ನವನ್ನು ಮಾಡುತ್ತಿದೆ. ಬೆಳೆ ವಿಮೆ ನೀಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಇದರಿಂದ ಕೃಷಿಕರಿಗೆ ಗರಿಷ್ಠ ಲಾಭ ಲಭಿಸುವುದು ಎಂದರು. ಕೃಷಿಕರಿಗಾಗಿ ಸೋಯಿಲ್ ಹೆಲ್ತ್ ಕಾಡರ್್ ಯೋಜನೆಯನ್ನು ಜಾರಿಗೊಳಿಸಿದ್ದು, ಮಣ್ಣಿನ ಗುಣಗಳನ್ನು ಕಂಡುಕೊಂಡು ಅದಕ್ಕೆ ಸೂಕ್ತವಾದ ಕೃಷಿ ಬೆಳೆಯುವ ಉದ್ದೇಶವನ್ನು ಇರಿಸಿಕೊಂಡಿದೆ. ಇವುಗಳ ಮೂಲಕ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಜೊತೆಗೆ ಕೃಷಿಕರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕೃಷಿಕರು ಲಾಭದಾಯಕ ಕೃಷಿಯನ್ನು ಬೆಳೆಯುವಂತೆ ಇನ್ನೂ ಹಲವು ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೊಳಿಸಲಿದೆ ಎಂದರು.
ಕೃಷಿ ಸಂಶೋಧನೆ ಕೇಂದ್ರಗಳಲ್ಲಿ ಅಭಿವೃದ್ಧಿ ಪಡಿಸಿದ ಸಂಶೋಧನೆಗಳನ್ನು ಕೃಷಿಕರಿಗೆ ಲಭಿಸುವಂತಾಗಲು ಹಲವು ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ. ಈ ನಿಟ್ಟನಲ್ಲಿ ಕೇರಳದಲ್ಲಿ ಕೇಂದ್ರ ಸರಕಾರದ ಐದು ಸಂಸ್ಥೆಗಳು ಕಾಯರ್ಾಚರಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಸರಗೋಡಿನ ಸಂಸದ ಪಿ.ಕರುಣಾಕರನ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡಿನ ಶಾಸಕ ಎನ್.ಎ.ನೆಲ್ಲಿಕ್ಕುನ್ನು, ಕಾಸರಗೋಡು ಜಿಲ್ಲಾ ಪಂಚಾಯತು ಅಧ್ಯಕ್ಷ ಎ.ಜಿ.ಸಿ.ಬಶೀರ್, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತು ಅಧ್ಯಕ್ಷ ಎ.ಎ. ಜಲೀಲ್ ಶುಭಹಾರೈಸಿದರು. ಕಾಸರಗೋಡು ಆತ್ಮ ಯೋಜನಾ ನಿದರ್ೇಶಕಿ ಕೆ.ಟಿ.ಲೀನಾ ಉಪಸ್ಥಿತರಿದ್ದರು. ನವದೆಹಲಿಯ ಐ.ಸಿ.ಎ.ಆರ್. ಉಪನಿದರ್ೇಶಕ ಡಾ.ಎ.ಕೆ. ಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಶತಮಾನೋತ್ಸವದ ಸವಿನೆನಪಿಗೆ ಅಂಚೆ ಚೀಟಿಯನ್ನು ಉತ್ತರ ವಲಯದ ಅಂಚೆ ವಿಭಾಗದ ಜನರಲ್ ಎಸ್.ಎಫ್.ಹೆಚ್. ರಿಜ್ವಿ ಬಿಡುಗಡೆಗೊಳಿಸಿದರು. 25 ವರ್ಷದ ಕೃಷಿಕರೊಂದಿಗಿನ ಪಯಣ, ಉದ್ಯಮಶೀಲ ಹಾಗೂ ಕೃಷಿಕ ಸ್ನೇಹಿ ತಂತ್ರಜ್ಞಾನಗಳು, ಮಲಯಾಳಂ ಹಾಗೂ ಕನ್ನಡದಲ್ಲಿ ತೆಂಗು ಎಂಬ ಶೀಷರ್ಿಕೆಯ ಪುಸ್ತಕಗಳ ಬಿಡುಗಡೆ, ಕಲ್ಪ ವಧರ್ಿನಿ ಹಾಗೂ ಕಲ್ಪ ಪೋಷಕ ಎಂಬ ಎರಡು ತೆಂಗಿಗಾಗಿ ಇರುವ ಲಘು ಪೋಷಕಾಂಶ ತಯಾರಿಕೆಗಳ ಬಿಡುಗಡೆ, ಸ್ಪಿಕ್ (ಎಸ್.ಪಿ.ಐ.ಸಿ.) ತಮಿಳುನಾಡು ಇವರಿಗೆ ಅಡಿಕೆಯ ಹಳದಿ ಎಲೆ ರೋಗ ಸಹಿಷ್ಣು ಮತ್ತು ಗಿಡ್ಡ ತಳಿಗಳ ಉತ್ಪಾದನೆಗಾಗಿ ಅಂಗಾಂಶ ಕಸಿ ತಂತ್ರಜ್ಞಾನದ ಹಸ್ತಾಂತರ ಕೂಡಾ ಈ ಸಂದರ್ಭದಲ್ಲಿ ನಡೆಯಿತು.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಅತ್ಯುತ್ತಮ ತೆಂಗು ಕೃಷಿಕ ಪ್ರಶಸ್ತಿಯನ್ನು ಸಿಬಿ ಜೋಸೆಫ್ ಬಳಾಲ್, ಅತ್ಯುತ್ತಮ ಅಡಿಕೆ ಕೃಷಿಕ ಪ್ರಶಸ್ತಿಯನ್ನು ರಾಮಕೃಷ್ಣ ಬಂಟ್ವಾಳ, ಅತ್ಯುತ್ತಮ ಕೋಕ್ಕೋ ಕೃಷಿಕ ಪ್ರಶಸ್ತಿಯನ್ನು ವಿಶ್ವನಾಥ ರಾವ್ ಅಜ್ಜಾವರ ಅವರಿಗೆ ನೀಡಿ ಗೌರವಿಸಿದರು. ಸಿ.ಪಿ.ಸಿ.ಆರ್.ಐ. ಯ ನಿದರ್ೇಶಕರಾದ ಡಾ.ಪಿ.ಚೌಡಪ್ಪ ಸ್ವಾಗತಿಸಿದರು. ಪ್ರಿನ್ಸಿಪಲ್ ಸೈಂಟಿಸ್ಟ್ ಡಾ.ಸಿ.ತಂಬಾನ್ ವಂದಿಸಿದರು.
ರಿ 5 ರಿಂದ ಆರಂಭಗೊಂಡ ಕೃಷಿಕರ ಸಮಾವೇಶ ಜ.10 ರ ತನಕ ನಡೆಯಲಿದ್ದು, ಕೃಷಿ ಪ್ರದರ್ಶನದಲ್ಲಿ ಬೆಳೆಗಳು, ಕೃಷಿ ರೀತಿ, ಪರಿಸರ, ಪಶುಸಂಗೋಪನೆ, ಉದ್ಯಾನ ಸಸ್ಯಗಳು, ಸ್ವಸಹಾಯ ಗುಂಪುಗಳ ತಯಾರಿಕೆ, ವಿತ್ತೀಯ ಸೌಲಭ್ಯ, ಇನ್ನಿತರ ವಿಷಯಗಳು, ಈ ಹಿಂದಿಗಿಂತ ಹೆಚ್ಚಿನ ಮಟ್ಟದ 150 ಕ್ಕೂ ಮಿಕ್ಕಿ ಪ್ರದರ್ಶನಾ ಮಳಿಗೆಗಳು ಬೆಳಗ್ಗೆ 10 ಗಂಟೆಯಿಂದ ಸಂಜೆ 7 ರ ತನಕ ತೆರೆದಿರುತ್ತವೆ.
ಸಿಪಿಸಿಆರ್ಐಯನ್ನು ಜನಪರಗೊಳಿಸಿದ ಡಾ|ಪಿ.ಚೌಡಪ್ಪ : ಸಿಪಿಸಿಆರ್ಐಯನ್ನು ಜನಪರಗೊಳಿಸಿದ ಖ್ಯಾತಿ ಇಂದಿನ ನಿದರ್ೇಶಕ ಡಾ|ಪಿ.ಚೌಡಪ್ಪ ಅವರಿಗೆ ಸೇರಬೇಕು ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಹೇಳಿದರು.
ಹಿಂದೆ ಸಿಪಿಸಿಆರ್ಐ ಯಲ್ಲಿ ಸಾಕಷ್ಟು ಸಂಶೋಧನೆಗಳು, ಅಭಿವೃದ್ಧಿಗಳು ನಡೆದಿದ್ದರು ಬಹುತೇಕ ಜನರಿಗೆ ಈ ಸಂಸ್ಥೆಯ ಬಗ್ಗೆ ಅರಿವು ಇರಲಿಲ್ಲ. ಆದರೆ ಡಾ|ಪಿ.ಚೌಡಪ್ಪ ಅವರು ಇಲ್ಲಿನ ನಿದರ್ೇಶಕರಾಗಿ ಅಕಾರ ಸ್ವೀಕರಿಸಿದ ಬಳಿಕ ಸಿಪಿಸಿಆರ್ಐ ಕೃಷಿಕರ ಪ್ರೀತಿಗೆ ಪಾತ್ರವಾಯಿತು. ಕೃಷಿ ಅಭಿವೃದ್ಧಿ ಕೃಷಿಕರಿಗೆ ತಲುಪುವ ಮೂಲಕ ಜನಪರಗೊಳಿಸಿ ಜನಪ್ರಿಯವಾಯಿತು ಎಂದರು.
ರೈಲು ವಿಸ್ತರಣೆಗೆ ಸಚಿವರಿಗೆ ಮನವಿ:
ಕಣ್ಣೂರು ತನಕ ಸಂಚರಿಸುವ ರಾಜಧಾನಿ ಎಕ್ಸ್ಪ್ರೆಸ್ ರೈಲುಗಾಡಿಯನ್ನು ಕಾಸರಗೋಡಿಗೂ ವಿಸ್ತ್ತರಿಸಬೇಕೆಂದು ಅವರು ಸಚಿವರಿಗೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಇದೇ ಅಭಿಪ್ರಾಯಗಳನ್ನು ಕಾಸರಗೋಡು ಜಿಲ್ಲಾ ಪಂಚಾಯತು ಅಧ್ಯಕ್ಷ ಎಜಿಸಿ ಬಶೀರ್ ಮತ್ತು ಮೊಗ್ರಾಲ್ ಪುತ್ತೂರು ಪಂಚಾಯತು ಅಧ್ಯಕ್ಷ ಎ.ಎ.ಜಲೀಲ್ ಮುಂದಿಟ್ಟರು.