ಗೌರವರ ರಕ್ಷೆ ನೀಡದೆ ಕೇಂದ್ರ ಸಚಿವರಿಗೆ ಅವಮಾನ-ಬಿಜೆಪಿ ಜಿಲ್ಲಾಧ್ಯಕ್ಷರ ಟೀಕೆ
ಕಾಸರಗೋಡು: ಸಿಪಿಸಿಆರ್ಐ ಸೋಮವಾರ ಹಮ್ಮಿಕೊಂಡಿದ್ದ ಕೃಷಿ ಮೇಳ ಉದ್ಘಾಟಿಸಲು ಆಗಮಿಸಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರಿಗೆ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಅಗೌರವ ತೊರಿಸಿ ರಾಜಕೀಯ ನಡೆಸಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಆರೋಪಿಸಿದ್ದಾರೆ. ಜೊತೆಗೆ ಈ ಬಗ್ಗೆ ರಾಜ್ಯ ಪ್ರಧಾನ ಆಡಳಿತ ಕಾರ್ಯದಶರ್ಿಗಳಿಗೆ ದೂರು ನಿಡಿದ್ದಾರೆ.
ಕೇಂದ್ರ ಸಚಿವರು ಜಿಲ್ಲೆಗೆ ಆಗಮಿಸುವಾಗ ಸರಕಾರಿ ಕ್ರಮಗಳಂತೆ ರಾಜ್ಯ ಸರಕಾರವಾಗಲಿ, ಜಿಲ್ಲಾಧಿಕಾರಿಗಳಾಗಲಿ, ಸಹಾಯಕ ದಂಡಾಧಿಕಾರಿಗಳಾಗಲಿ ಆಗಮಿಸದೆ ಅಗೌರವ ತೋರಿಸಿದ್ದಾರೆ.
ಕೇಂದ್ರ ಸಚಿವರಿಗೆ ಒದಗಿಸಬೇಕಾದ ಗರಿಷ್ಠ ಭದ್ರತೆಗಳನ್ನು ನೀಡುವಲ್ಲೂ ಪೋಲೀಸ್ ಇಲಾಖೆ ಅವಗಣನೆ ತೋರಿದೆ. ಕೇಂದ್ರ ಸಚಿವರು ಜಿಲ್ಲೆಗಾಗಮಿಸುವ ಸಂದರ್ಭ ನೀಡಲೇ ಬೇಕಾಗಿದ್ದ ಗಾಡರ್್ ಓಫ್ ಹೋನರ್(ವಿಶೇಷ ಗೌರವ ರಕ್ಷೆ) ನೀಡಲು ಪೋಲೀಸ್ ಇಲಾಖೆ ಯಾವುದೇ ಪೂರ್ವಯೋಜಿತ ಕ್ರಮಗಳನ್ನು ಕೈಗೊಂಡಿರಲಿಲ್ಲ. ಚಂದ್ರಗಿರಿ ಅತಿಥಿಗೃಹದಲ್ಲಿ ಸಚಿವರಿಗೆ ನೀಡಬೇಕಿದ್ದ ಗೌರವ ರಕ್ಷೆ ಬಳಿಕ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ ಉದ್ಘಾಟಿಸಿ ಸಚಿವರು ಕೃಷಿ ಮೇಳದತ್ತ ತೆರಳುವಾಗ ರಸ್ತೆಯ ಮಧ್ಯೆ ನಿಲ್ಲಿಸಿ ತೋರಿಕೆಯ ಗೌರವ ರಕ್ಷೆ ನೀಡಿರುವುದು ಖಂಡನೀಯ ಎಂದು ಜಿಲ್ಲಾಧ್ಯಕ್ಷರು ಆರೋಪಿಸಿರುವರು. ಸಚಿವರ ಗೌರವಾದಾರಗಳನ್ನು ನೀಡುವಲ್ಲಿ ರಾಜ್ಯ ಸರಕಾರ ಲೋಪವೆಸಗಿದ್ದು ಈ ಬಗ್ಗೆ ರಾಜ್ಯ ಆಡಳಿತ ಕಾರ್ಯದಶರ್ಿಗಳ ಸಹಿತ ಮುಖ್ಯಸ್ಥರಿಗೆ ದೂರು ನೀಡಲಾಗಿದೆ ಎಂದು ನ್ಯಾಯವಾದಿ ಶ್ರೀಕಾಂತ್ ತಿಳಿಸಿರುವರು