HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಸಿಪಿಎಂ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ
         ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಕೈಜೋಡಿಸಲು ಕೊಡಿಯೇರಿ ಕರೆ
    ಕಾಸರಗೋಡು: ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ನಡೆಯುತ್ತಿರುವ ಹೋರಾಟದೊಂದಿಗೆ ಎಲ್ಲಾ ಸಾಮ್ರಾಜ್ಯಶಾಹಿ ವಿರೋಧಿ ಶಕ್ತಿಗಳು ಕೈಜೋಡಿಸಿ ಮುಂದೆ ಸಾಗಬೇಕೆಂದು ಸಿಪಿಎಂ ಕೇರಳ ರಾಜ್ಯ ಕಾರ್ಯದಶರ್ಿ ಕೊಡಿಯೇರಿ ಬಾಲಕೃಷ್ಣನ್ ಕರೆ ನೀಡಿದರು.
    ಅವರು ಸೋಮವಾರ ಬೆಳಗ್ಗೆ 25 ವರ್ಷಗಳ ಬಳಿಕ ಕಾಸರಗೋಡಿನ ಪಿಲಿಕುಂಜೆಯಲಲಿ ಆಯೋಜಿಸಲಾಗಿರುವ ಸಿಪಿಎಂ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
   ನಗರದ ಪಿಲಿಕುಂಜೆಯಲ್ಲಿರುವ ಕಾಸರಗೋಡು ನಗರಸಭಾ ಟೌನ್ ಹಾಲ್ನ ವಿ.ವಿ.ದಕ್ಷಿಣಾಮೂತರ್ಿ ನಗರದಲ್ಲಿ ಬೆಳಗ್ಗೆ ಪ್ರತಿನಿಧಿ ಸಮ್ಮೇಳನ ಆರಂಭಗೊಂಡಿತು.
   ಜಿಲ್ಲೆಯಿಂದ ಪಕ್ಷದ 23,301 ಸದಸ್ಯರನ್ನು ಪ್ರತಿನಿಕರಿಸಿ 290 ಜನಪ್ರತಿನಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಜಿಲ್ಲಾ ಕಾರ್ಯದಶರ್ಿ ಕೆ.ಪಿ.ಸತೀಶ್ಚಂದ್ರನ್ ಕಾರ್ಯನಿರ್ವಹಣಾ ವರದಿ ಮಂಡಿಸಿದರು. ಪಕ್ಷದ ಹಿರಿಯ ನೇತಾರರಾದ ಸಂಸದ ಪಿ.ಕರುಣಾಕರನ್, ಎ.ವಿಜಯರಾಘವನ್, ಪಿ.ಕೆ.ಶ್ರೀಮತಿ ಟೀಚರ್, ಇ.ಪಿ.ಜಯರಾಜನ್, ಸದಸ್ಯರಾದ ಕೆ.ಕೆ.ಶೈಲಜಾ, ಎ.ಕೆ.ಬಾಲನ್, ಟಿ.ಪಿ.ರಾಮಕೃಷ್ಣನ್, ಎಳಮರಂ ಕರೀಂ, ಎಂ.ವಿ.ಗೋವಿಂದನ್ ಮೊದಲಾದವರು ಭಾಗವಹಿಸುತ್ತಿದ್ದಾರೆ. ಸೋಮವಾರ ಮತ್ತು ಮಂಗಳವಾರ ಗ್ರೂಪ್ ಚಚರ್ೆ, ಸಾರ್ವಜನಿಕ ಚಚರ್ೆ ಮತ್ತು ಅವುಗಳಿಗೆ ಉತ್ತರ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ.
   ಜ.10 ರಂದು ಪಕ್ಷದ ಜಿಲ್ಲಾ ಸಮಿತಿ ಮತ್ತು ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳ ಆಯ್ಕೆ ನಡೆಯಲಿದೆ. ಅಂದು ಅಪರಾಹ್ನ 3 ಗಂಟೆಗೆ 5000 ಮಂದಿ ವಲಂಟಿಯರ್ ಪರೇಡ್ ನಡೆಯಲಿದೆ. ಜೊತೆಗೆ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಆಗಮಿಸುವ ಕಾರ್ಯಕರ್ತರು ಮೆರವಣಿಗೆಗಳ ಮೂಲಕ ಬಹಿರಂಗ ಅಧಿವೇಶನ ನಡೆಯುವ ಚೆರ್ಕಳ ರಾಮಣ್ಣ ರೈ ನಗರಕ್ಕೆ ಸಾಗುವರು. ಬಹಿರಂಗ ಅಧಿವೇಶನವನ್ನು ಕೊಡಿಯೇರಿ ಬಾಲಕೃಷ್ಣನ್ ಉದ್ಘಾಟಿಸುವರು. ಜಿಲ್ಲಾ ಸಮ್ಮೇಳನದಂಗವಾಗಿ ಚೆರ್ಕಳದಲ್ಲಿ ರಾಮಣ್ಣ ರೈ ನಗರದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಸಿ.ಎಚ್.ಕುಂಞಂಬು ಡಿ.7 ರಂದು ಧ್ವಜಾರೋಹಣ ಮಾಡಿದ್ದರು.
  ಧ್ವಜ ಮತ್ತು ಧ್ವಜಸ್ತಂಭಗಳು ಜಿಲ್ಲೆಯ ವಿವಿಧೆಡೆಗಳಿಂದ 7 ಆದಿತ್ಯವಾರ ನಗರದ ಕರಂದಕ್ಕಾಡಿನಲ್ಲಿ ಸಂಗಮಿಸಿ ಅಲ್ಲಿಂದ ರೆಡ್ ವಲಂಟಿಯರ್ಗಳ ಬೈಕ್ ರ್ಯಾಲಿಗಳ ಜತೆಗೆ ಬಹಿರಂಗ ಅಧಿವೇಶನ ನಡೆಸುವ ಚೆರ್ಕಳ ರಾಮಣ್ಣ ರೈ ನಗರಕ್ಕೆ ಸಾಗಿತು. ಬಳಿಕ ಧ್ವಜಾರೋಹಣಗೈಯ್ಯಲಾಯಿತು.
   ಸೋಮವಾರ ಬೆಳಗ್ಗೆ ನಗರದ ನಗರಸಭಾ ಸಭಾಂಗಣದ ಮುಂದೆ ಪಕ್ಷದ ಹಿರಿಯ ನೇತಾರ ಎ.ಕೆ.ನಾರಾಯಣನ್ ಧ್ವಜಾರೋಹಣಗೈದರು. ಪಕ್ಷದ ಜಿಲ್ಲಾ ಕಾರ್ಯದಶರ್ಿ ಕೆ.ಪಿ.ಸತೀಶ್ಚಂದ್ರನ್ ಅವರ ಹಾಲಿ ಅವಧಿ ಸಮ್ಮೇಳನದೊಂದಿಗೆ ಮುಕ್ತಾಯಗೊಳ್ಳಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries