HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಸೃಷ್ಟಿಯ ಮೂಲಾಧಾರವಾದ ನಾದೋಪಾಸನೆ ಸುಲಭ ಆರಾಧನೆ-ಬಾಳೆಕುದ್ರು ಶ್ರೀಗಳು
               ರಂಗಚಿನ್ನಾರಿಯ ಕೃಷ್ಣಹರೇ ಉದ್ಘಾಟನೆ-ಎಡನೀರು ಶ್ರೀಗಳ ಭಕ್ತಿ ಭಾವ ಗಾಯನ
    ಕುಂಬಳೆ: ಮನಸ್ಸಿನ ಋಣಾತ್ಮಕತೆಯನ್ನು ನಾಶಗೊಳಿಸಿ ಧನಾತ್ಮಕತೆ, ಪ್ರಫುಲ್ಲತೆಗೆ ಸಂಗೀತ, ಗಾಯನ ಕಾರ್ಯಕ್ರಮಗಳು ಬಲ ನೀಡುತ್ತದೆ. ಧನಾತ್ಮಕ ತರಂಗಗಳನ್ನು ಸೃಷ್ಟಿಸಿ ಮಧುರತೆಯನ್ನು ಉತ್ಕಶರ್ಿಸುವ ಗುಣವಿಶೇಷದಿಂದ ನಮ್ಮ ಸಂಸ್ಕೃತಿಯಲ್ಲಿ ಸಾಮಗಾನವೆಂಬ ಮಹತ್ವದ ಸ್ಥಾನ ನೀಡಿರುವುದು ಸಂಗೀತ ಮಹತ್ವಕ್ಕಿರುವ ಮಾನ ಎಂದು ಬಾಳೆಕುದ್ರು ಮಠದ ಶ್ರೀನೃಸಿಂಹಾಶ್ರಮ ಶ್ರೀಗಳು ಆಶೀವರ್ಾದ ಪೂರ್ವಕ ಆಶೀರ್ವಚನ ನೀಡಿ  ಹರಿಸಿದರು.
   ಬೆಂಗಳೂರಿನ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದೊಮದಿಗೆ ಕಾಸರಗೋಡಿನ ಸಾಂಸ್ಕೃತಿಕ-ಸಾಮಾಜಿಕ ಸಂಸ್ಥೆಯಾದ ರಂಗಚಿನ್ನಾರಿ ಭಾನುವಾರ ಸಂಜೆ ಕಾಸರಗೊಡು ನಗರಸಭಾ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀಮದ್ ಎಡನೀರು ಮಠಾಧೀಶರ ಭಕ್ತಿ-ಭಾಗಗೀತೆಗಳ ಗಾಯನ " ಕೃಷ್ಣ ಹರೇ" ವಿಶೇಷ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಕಲೆ, ಸಂಸ್ಕೃತಿಗಳ ಸಂವರ್ಧನೆಗೆ ಎಡನೀರು ಮಠಾಧಿಪತಿಗಳು ನೀಡುತ್ತಿರುವ ಪ್ರೋತ್ಸಾಹಗಳು ಸ್ತುತ್ಯರ್ಹ. ಭಗವಂತನ ಆರಾಧನೆಯ ಮಾರ್ಗಗಳಲ್ಲಿ ಒಂದಾಗಿರುವ ಭಕ್ತಿ ಸಂಗೀತ ಏಕತೆ, ಸಮೃದ್ದತೆಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು. ಸೃಷ್ಟಿಯ ಮೂಲಧಾತುವಾದ ನಾದದ ಮೂಲಕ ಭಗವಂತನನ್ನು ಆರಾಧಿಸುವ ನಾದೋಪಾಸನೆ ಅತ್ಯಂತ ಸರಳ ಮತ್ತು ಎಲ್ಲರಿಗೂ ಸುಲಭದಲ್ಲಿ ಲಭ್ಯವಾಗುವ ವಿಶಾಲತೆ ಹೊಂದಿ ವ್ಯಾಪಕತೆ ಹೊಂದಿದೆ ಎಂದ ಅವರು ಗಡಿನಾಡಿನ ಮಣ್ಣಿನ ಸಾಂಸ್ಕೃತಿಕತೆಯ ಪ್ರತೀಕವಾಗಿ ಹೊಸ ತಲೆಮಾರಿಗೆ ಪರಿಚಯಿಸುವಲ್ಲಿ ರಂಗಚಿನ್ನಾರಿಯ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸಿದರು.
   ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ ಉಪಸ್ಥಿತಿಯಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಸರಗೋಡು ಬಾರ್ ಕೌನ್ಸಿಲ್ ಅಧ್ಯಕ್ಷ, ನ್ಯಾಯವಾದಿ ಎ.ಎನ್.ಅಶೋಕ್ ಕುಮಾರ್ ಮಾತನಾಡಿ, ಗಡಿನಾಡು ಕಾಸರಗೋಡಿನ ಕನ್ನಡ ಸಂಸ್ಕೃತಿ ಸಂವರ್ಧನೆಯಲ್ಲಿ ರಂಗಚಿನ್ನಾರಿಯ ನಿರಂತರ ಚಟುವಟಿಕೆ ಪ್ರೇರಣದಾಯಿ ಎಂದು ತಿಳಿಸಿದರು. ಕಾಸರಗೋಡಿನ ಕನ್ನಡ ಸಂಸ್ಕೃತಿಯ ಉಳಿವಿಗೆ ಹಿರಿಯ ಹೋರಾಟಗಾರ ದಿ. ಕಳ್ಳಿಗೆ ಮಹಾಬಲ ಭಂಡಾರಿಯವರ ಕೊಡುಗೆಗಳನ್ನು ನೆನಪಿಸುವಲ್ಲಿ ರಂಗಚಿನ್ನಾರಿ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳು ಅತ್ಯಂತ ಪ್ರಸ್ತುತ ಎಂದು ತಿಳಿಸಿದ ಅವರು, ಗಡಿನಾಡಿನ ಕನ್ನಡ ಉಳಿಸಿ ಬೆಳೆಸುವಲ್ಲಿ ಪರಿಣಾಮಕಾರಿಯಾಗಿ ಮೂಡಿಬರುತ್ತದೆ ಎಂದು ತಿಳಿಸಿದರು. ಹೊಸ ತಲೆಮಾರಿಗೆ ಭಂಡಾರಿಯವರನ್ನು ಪರಿಚಯಿಸುವ, ಅವರ ಆಶಯಗಳನ್ನು ನನಸಾಗಿಸುವ ಇನ್ನಷ್ಟು ನಿರಂತರ ಚಟುವಟಿಕೆಗಳು ನಡೆಯುವ ಅಗತ್ಯವೂ ಇದೆ ಎಂದು ಅವರು ಈ ಸಂದರ್ಭ ತಿಳಿಸಿದರು.
   ಉದ್ಯಮಿ ರಾಮ್ ಪ್ರಸಾದ್ ಕಾಸರಗೋಡು, ಪುರಸಭೆ ಸದಸ್ಯ ಸುಜಿತ್ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ರಂಗಚಿನ್ನಾರಿಯ ನಿದರ್ೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೈ.ಸತ್ಯನಾರಾಯಣ ವಂದಿಸಿದರು. ಮನೋಹರ ಶೆಟ್ಟಿ, ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು.
  ಬಳಿಕ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳಿಂದ ಭಕ್ತಿ-ಭಾವಗಾಯನ ಪ್ರಸ್ತುತಗೊಂಡಿತು. ನೂರಾರು ಕಲಾಪ್ರೇಮಿಗಳ ಸಮಕ್ಷಮ ಎರಡೂವರೆ ಗಂಟೆಗಳಿಗಿಂತಲೂ ಹೆಚ್ಚು ಕಾಲ ಪ್ರಸ್ತುತಗೊಂಡ ಶ್ರೀಗಳ ಗಾಯನ ನಾದ ಪ್ರಪಂಚದ ಮಧುರ ಅಲೆಗಳ ಸೃಷ್ಟಿಗೆ ಕಾರಣವಾಯಿತು. ಗಾಯನದ ಪಕ್ಕವಾದ್ಯದಲ್ಲಿ ಲೋಕೇಶ್ ಮುಡಬಿದ್ರೆ, ಅಭಿಜಿತ್ ಶೆಣೈ, ರಾಜೇಶ್ ಮಂಗಳೂರು, ಪುರುಷೋತ್ತಮ ಕೊಪ್ಪಲ್, ದೇವರಾಜ್ ಆಚಾರ್ ಸಹಕರಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries