HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಮಂಜೇಶ್ವರ: ಶ್ರೀ ಶನೈಶ್ವೇರ ಮಂದಿರ ವಷರ್ಾವಧಿ ಬಲಿ ಉತ್ಸವ ಸಂಪನ್ನ
   ಮಂಜೇಶ್ವರ: ಅತ್ಯಂತ ಕಾರಣಿಕ ಕ್ಷೇತ್ರವೆಂದು ಪ್ರಚಲಿತದಲ್ಲಿರುವ ನಿತ್ಯವೂ ನೂರಾರು ಭಕ್ತರನ್ನು ಆಕಷರ್ಿಸುವ ಧಾಮರ್ಿಕ ಕೇಂದ್ರವಾದ ಮಂಜೇಶ್ವರ ಬೀಚ್ ರಸ್ತೆಯಲ್ಲಿರುವ ಶ್ರೀ ಶನೈಶ್ವೇರ ಮಂದಿರವು ಕಳೆದ ಹತ್ತು ವರ್ಷಗಳ ಹಿಂದೆ ನಿಮಾಣಗೊಂಡು ಪ್ರತಿಷ್ಟಾಪಣೆಯಾಗಿ ಲೋಕಾರ್ಪಣೆಗೊಂಡಿತ್ತು. ಶ್ರೀ ಕ್ಷೇತ್ರದಲ್ಲಿ ಧರ್ಮದಶರ್ಿ ಕೃಷ್ಣ ಭಟ್ ಹಾಗೂ ಮೊಕ್ತೇಸರ ಚಂದ್ರಹಾಸ ರೈ ಬೋಲ್ನಾಡುಗುತ್ತು ಇವರ ಮುಂದಾಳತ್ವದಲ್ಲಿ ನಿರಂತರವಾಗಿ ದೇವತಾಕಾರ್ಯಗಳು ನಡೆದುಕೊಂಡು ಬರುತಿದ್ದು, ತತ್ಪಲವಾಗಿ ಶ್ರೀ ಕ್ಷೇತ್ರದ ಸಾನಿಧ್ಯಾಭಿವೃದ್ದಿಯೂ ಹೊಂದಿ ಶ್ರೀ ಕ್ಷೇತ್ರವನ್ನು ಸಂದಶರ್ಿಸುವ ಸಕಲರಿಗೂ ಭಗವಂತನ ಅನುಗ್ರಹ ದೊರಕುವಂತಾಗಿದೆ.
  ಈ ಕ್ಷೇತ್ರದಲ್ಲಿ ಎರಡು ದಿನಗಳಲ್ಲಾಗಿ ನಡೆದ  ವಷರ್ಾವಧಿ ಬಲಿ ಉತ್ಸವ ಬ್ರಹ್ಮ ಬಡಾಜೆ ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಜ. 21 ಹಾಗೂ 22ರಂದು ವಿವಿಧ ವೈದಿಕ, ಧಾಮರ್ಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. 21 ರಂದು ಭಾನುವಾರ ರಾತ್ರಿ ಓ.ಏ. ರಾಜ್ ಶಂಕರ್ ಬೆಂಗಳೂರು ಮತ್ತು ಝಾನ್ಸಿ ಫ್ರೆಂಡ್ಸ್ ಮಂಜೇಶ್ವರ ಇವರ ಸೇವಾರ್ಥವಾಗಿ ಶ್ರೀ ದೇವರಿಗೆ ಸಹಸ್ರ ದೀಪೋತ್ಸವ, ಬಳಿಕ ಶ್ರೀ ದೇವರಿಗೆ ಮಹಾಪೂಜೆ, ಅನ್ನದಾನ ನಡೆಯಿತು..
 22 ರಂದು ಸೋಮವಾರ ಬೆಳಿಗ್ಗೆ ಪಾತ್ರ ಪೂಜೆ, ನವಕ ಪ್ರಧಾನ, ನವಕ ಕಲಶ ಪ್ರತಿಷ್ಠೆ, ನವಕಾಭಿಷೇಕ, ಶ್ರೀ ದೇವರಿಗೆ ಮಹಾಪೂಜೆ, ಅನ್ನ ಸಂತರ್ಪನೆ, ಸಂಜೆ ಶ್ರೀ ದೇವರಿಗೆ ರಂಗಪೂಜೆ,  ಶ್ರೀ ದೇವರ ಬಲಿ ಬಳಿಕ  ಶ್ರೀ ದೇವರ ರಥಾರೋಹಣ, ರಥೋತ್ಸವ ಮಂಜೇಶ್ವರ ಶ್ರೀ ಶಾಸ್ತರೇಶ್ವರ ದೇವಸ್ಥಾನಕ್ಕೆ ತೆರಳಿ ಕಟ್ಟೆಪೂಜೆ, ಬಳಿಕ ಶ್ರೀ ಕ್ಷೇತ್ರಕ್ಕೆ ಹಿಂದಿರುಗಿ ವಸಂತ ಕಟ್ಟೆಪೂಜೆ, ಝಾನ್ಸಿ ಫ್ರೆಂಡ್ಸ್ ಸರ್ಕಲ್ನವರಿಂದ ಸುಡು ಮದ್ದು ಸೇವೆ, ದರ್ಶನ ಬಲಿ, ಪ್ರಸನ್ನ ಪೂಜೆ ಹಾಗೂ  ಪ್ರಸಾದ ವಿತರಣೆ ನಡೆಯಿತು. ಸಾಂಸ್ಕ್ರತಿಕ ಕಾರ್ಯಕ್ರಮ ದಂಗವಾಗಿ ಭಾಸ್ಕರ ಕಲಾವಿದರು ಮಂಗಳೂರು ಇವರಿಂದ ದೇವದಾಸ್ ಕಾಪಿಕಾಡ್ ನಿಮರ್ಾಣ ಹಾಗೂ ನಿದರ್ೇಶನದಲ್ಲಿ "ಕೊಡೆಬುಡ್ಪಾಲೆ" ಎಂಬ ತುಳು ಹಾಸ್ಯಮಯ ನಾಟಕ ಕೂಡಾ ಪ್ರದರ್ಶನ ಗೊಂಡಿತು.
  ಈ ಕಾರ್ಯಕ್ರಮವನ್ನು ವೀಕ್ಷಿಸಲು ಮಂದಿರಕ್ಕೆ ಜನ ಸಾಗರವೇ ಹರಿದು ಬಂದಿತ್ತು
ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ಭಕ್ತರ ಅಪೇಕ್ಷೆಯಂತೆ ಬೆಳ್ಳಿಯ ಗೃಥೃರಥವೊಂದನು ನಿಮರ್ಾಣ ಮಾಡುವ ಕಾರ್ಯ ಭರದಿಂದ ಸಾಗುತಿದ್ದು, ಶೀಘ್ರದಲ್ಲೇ ಅದು ಶ್ರೀ ಕ್ಷೇತ್ರಕ್ಕೆ ಸಮರ್ಪಣೆಯಾಗಲಿದೆ.
ಶ್ರೀ ಕ್ಷೇತ್ರದ ಪ್ರಸಿದ್ದಿ ಈಗಾಗಲೇ ದೂರದ ಊರಿಗೂ ಪ್ರಸರಿಸಿದ್ದು, ಇತ್ತೀಚಿನ ದಿನಗಳಲ್ಲಿ ಬಹು ದೂರದಿಂದ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ದೂರದಿಂದ ಬರುವವರಿಗೆ ಉಳಕೊಳ್ಳಲು ಅತಿಥಿಗೃಹವೂ ಶ್ರೀ ಕ್ಷೇತ್ರದಲ್ಲಿ ಇದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries