HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಮಾದಕ ವಸ್ತು ಸಾಗಾಟಗಾರರು, ಕೊಲೆಗಡುಕರ ರಾಜಾರೋಷ-ಬಿಜೆಪಿ ಆರೋಪ
    ಮುಳ್ಳೇರಿಯ: ಕೇರಳದಲ್ಲಿ ಸಿಪಿಎಂ ನೇತೃತ್ವದ ಪಿಣರಾಯಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಮಾದಕ ವಸ್ತು ಸಾಗಾಟಗಾರರು ಮತ್ತು ಕೊಲೆಗಡುಕರು ರಾಜಾರೋಷವಾಗಿ ತನ್ನ ಪ್ರವೃತ್ತಿಯನ್ನು ಇನ್ನಷ್ಟು ವಿಸ್ತರಿಸಿ ದರ್ಪ ಮೆರೆಯುತ್ತಿದ್ದಾರೆ  ಎಂದು ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಎಂ.ಸುಧಾಮ ಗೋಸಾಡ ಆರೋಪಿಸಿದ್ದಾರೆ.
    ಅವರು ಇತ್ತೀಚೆಗೆ ಮವ್ವಾರಿನ ಬಿಜೆಪಿ ಕಾಯರ್ಾಲಯದಲ್ಲಿ ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಮಟ್ಟದ ಬೂತು ಜವಾಬ್ಧಾರರ  ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
   ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಕೂಡಾ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿರುವುದು ಸಿಪಿಎಂನ ಬೆಂಬಲಿಗರಾಗಿದ್ದಾರೆ. ಇಂತಹಾ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದರೆ ಅವರ ಪರವಾಗಿ ಸಿಪಿಎಂ ನೇತಾರರು ಪೊಲೀಸ್ ಠಾಣೆಗೆ ತೆರಳಿ ಅಧಿಕಾರವನ್ನು ಉಪಯೋಗಿಸಿ ಹಿಂಸಾಚಾರವನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಸಿಪಿಎಂನ ಜಿಲ್ಲಾ ಸಮ್ಮೇಳನದ ಸಂದರ್ಭದಲ್ಲಿ ಕಾಸರಗೋಡಿನ ಕರಂದಕ್ಕಾಡಿನಲ್ಲಿ ಮುಖಕ್ಕೆ ಧ್ವಜವನ್ನು ಕಟ್ಟಿ ಅಲ್ಲಿ ಕೆಂಪು ಧ್ವಜವನ್ನು ಸ್ಥಾಪಿಸಿ ಹಿಂಸಾಚಾರಕ್ಕೆ ಇಳಿದ ಎಲ್ಲರೂ ಗಾಂಜಾ ಸಹಿತ ವಿವಿಧ ಮಾದಕ ವಸ್ತುಗಳನ್ನು ಸರಬರಾಜು ಮಾಡುವವರಾಗಿದ್ದಾರೆ. ಈ ವಿಚಾರ ಪೊಲೀಸರಿಗೆ ತಿಳಿದಿದ್ದರೂ ಅಧಿಕಾರದಲ್ಲಿರುವ ಪಕ್ಷದ ಕಾರ್ಯಕರ್ತರನ್ನು ಬಂಧಿಸಿ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಿದ್ದಾರೆ. ಸಿಪಿಎಂನ ಜಿಲ್ಲಾ ಸಮ್ಮೇಳನದ ಎಲ್ಲಾ ವ್ಯವಸ್ಥೆಗೆ ಸಿಪಿಎಂನ ಈ ಮಾದಕವಸ್ತು ಸರಬರಾಜು ಮಾಡುವ ತಂಡವನ್ನೇ ನೇಮಕಗೊಳಿಸಿದ್ದರು. ಸಂಘ ಪರಿವಾರ ಕಾರ್ಯಕರ್ತರೊಂದಿಗೆ ಹಿಂಸಾಚಾರಕ್ಕಿಳಿದು ಕಾಸರಗೋಡಿನಲ್ಲಿ ಸಂಘರ್ಷವನ್ನು ಸೃಷ್ಟಿಸಲಿರುವ ಎಲ್ಲಾ ವ್ಯವಸ್ಥೆಯನ್ನು ರೂಪಿಸಿದ್ದರು. ಆದರೆ ಬಿಜೆಪಿಯ ಜಿಲ್ಲಾ ನೇತೃತ್ವದ ಸ್ಪಷ್ಟ ನಿದರ್ೇಶನದಿಂದಾಗಿ ಬಿಜೆಪಿಯ ಕಾರ್ಯಕರ್ತರು ಶಿಸ್ತು ಪಾಲಿಸಿ ಶಾಂತಿ ನೆಲೆಸುವಂತೆ ಮಾಡಿದೆ. ಸಿಪಿಎಂ ನೇತೃತ್ವ ಇನ್ನಾದರೂ ಈ ರೀತಿಯ ಸಮಾಜಘಾತುಕರನ್ನು ಹದ್ದುಬಸ್ತಿನಲ್ಲಿರಿಸದಿದ್ದಲ್ಲಿ ಮುಂದೆ ಬಹುದೊಡ್ಡ ಬೆಲೆಯನ್ನು ತೆರಬೇಕಾದೀತು ಎಂದು ಅವರು ಮುನ್ನೆಚ್ಚರಿಕೆ ನೀಡಿದರು.
    ಬಿಜೆಪಿ ಪಂಚಾಯಿತಿ ಸಮಿತಿ ಅಧ್ಯಕ್ಷ ಬಿ.ರಾಜೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ ರೈ ಗೋಸಾಡ, ಹರೀಶ್ ಕುಣಿಕುಳ್ಳಾಯ, ಸುಂದರ ಮವ್ವಾರು ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries