ಮುಳಿಯಾರು : ಬಾಳೆಕುದ್ರು ಸ್ವಾಮಿ ಭೇಟಿ
ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶ್ರೀ ಮಠ ಬಾಳೆಕುದ್ರು ಶ್ರೀ ನೃಸಿಂಹಾಶ್ರಮ ಸ್ವಾಮಿಗಳು ಇತ್ತೀಚೆಗೆ ಭೇಟಿ ನೀಡಿದರು. ಶ್ರೀಗಳಿಗೆ ಪೂರ್ಣಕುಂಭ ಮತ್ತು ಮಂತ್ರಘೋಷಗಳೊಂದಿಗೆ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ಬಳಿಕ ಭಿಕ್ಷಾಂಗ ಪಾದಪೂಜೆ ಶ್ರೀ ಗುರುಭಿಕ್ಷಾ ಕಾರ್ಯಕ್ರಮ ನಡೆಯಿತು. ಮಹಾಪೂಜೆ ಪ್ರಸಾದ ಭೋಜನಾ ನಂತರ ಶ್ರೀಗಳವರಿಂದ ಆಶೀರ್ವಚನ ಅನುಗ್ರಹ ಭಾಷಣ ಜರಗಿತು. ಬಳಿಕ ಭಕ್ತಜನರಿಗೆ ಶ್ರೀಗಳು ಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು.
ಕ್ಷೇತ್ರ ಪಾರಂಪರ್ಯ ಆಡಳಿತ ಮೊಕ್ತೇಸರರಾಗಿರುವ ಎನ್.ಸುಬ್ರಾಯ ಬಳ್ಳುಳ್ಳಾಯ ನೇತೃತ್ವ ವಹಿಸಿದರು. ಸೀತಾರಾಮ ಬಳ್ಳುಳ್ಳಾಯ ಸಮಾರಂಭ ಸಂಯೋಜನೆ ಮಾಡಿ ನಿರ್ವಹಿಸಿದರು. ಅನಂತ ಪದ್ಮನಾಭ ಮಯ್ಯ ಅವರು ಸಹಕರಿಸಿದರು.