HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ವೇದ ನಾದ ತರಂಗಿಣಿ
   ಬದಿಯಡ್ಕ: ಕುಂಬ್ಡಾಜೆ ಸಮೀಪದ ಬಳ್ಳಪದವು ನಾರಾಯಣೀಯಂ ವೀಣಾವಾದಿನಿ ಸಂಗೀತ ವಿದ್ಯಾಪೀಠದಲ್ಲಿ ವೇದ ನಾದ ತರಂಗಿಣಿ ವಿಶೇಷ ಸಂಗೀತೋಪಾಸನಾ ಕಾರ್ಯಕ್ರಮ ಫೆ. 16 ರಿಂದ 18ರ ವರೆಗೆ ನಡೆಯಲಿದೆ.
   ಕಾರ್ಯಕ್ರಮದ ಅಂಗವಾಗಿ ಫೆ.16 ರಂದು ಬೆಳಿಗ್ಗೆ 8.30ಕ್ಕೆ ವೇದ ನಾದ ತರಂಗಿಣಿಕ್ಕೆ ತಿರುವನಂತಪುರದ ಸಂಗೀತ ಕಲಾಚಾರ್ಯ ಪ್ರೊ. ಕೆ.ವೆಂಕಟರಮಣನ್, ಡಾ. ಯು.ಬಿ.ಕುಣಿಕುಳ್ಳಾಯ ಕಾಂಞಿಂಗಾಡ್, ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣ ನಂಬೂದಿರಿ, ಬ್ರಹ್ಮಶ್ರೀ ಕೃಷ್ಣ ಕನ್ಯಾಕುಮಾರಿ ಉಪಸ್ಥಿತಿಯಲ್ಲಿ ಭದ್ರದೀಪ ಜ್ವಲನೆ ನಡೆಯಲಿದೆ. 9 ರಿಂದ ಪ್ರೊ. ಕೆ.ವೆಂಕಟರಮಣನ್ ಹಾಗೂ ವೀಣಾವಾಧಿನಿ ಸಂಗೀತ ಶಾಲಾ ತಂಡದವರಿಂದ ನವಗ್ರಹ ಕೀರ್ತನೆ ನಡೆಯುವುದು. ಅಪರಾಹ್ನ 1.30ಕ್ಕೆ ಮಹಾ ಶ್ರೀಚಕ್ರ ನವಾವರಣ ಪೂಜೆಯನ್ನು ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣ ನಂಬೂದಿರಿಯವರ ನೇತೃತ್ವದಲ್ಲಿ ನಡೆಯಲಿದೆ. ಬಳಿಕ ನವಾವರಣ ಕೃತಿಗಳ ಆಲಾಪನೆ, 7.30ಕ್ಕೆ ಮಹಾ ಮಂಗಳಾರತಿ ನಡೆಯಲಿದೆ. ಫೆ.17 ರಂದು ಬೆಳಿಗ್ಗೆ 9ಕ್ಕೆ ವೀಣಾವಾಧಿನಿ ತಂಡದವರಿಂದ 12 ಮೇಳಕರ್ತ ಕೃತಿಗಳನನಾಧರಿಸಿದ ಮುರಳೀರವಮ್ ಪ್ರಸ್ತುತಿ ನಡೆಯಲಿದ್ದು, ಸಂಜೆ 6ಕ್ಕೆ ಮುರಳೀರವನ್ ಕೃತಿಯಾಧಾರದ ವಿನೂತನ ಜಾನಪದ ನೃತ್ಯ ಪ್ರದರ್ಶನ ಏರ್ಪಡಲಿದೆ.ಈ ಸಂದರ್ಭ ಖ್ಯಾತ ಚಿತ್ರಕಲಾವಿದ ಲೀಜಾ ದಿನೂಪ್ ಪಯ್ಯನ್ನೂರುರವರು ಕಲಾಕೃತಿ ರಚನೆ ಗೈಯ್ಯುವರು. ಬಳಿಕ ಡಾ.ಎಂ.ಬಾಲಮುರಳೀಕೃಷ್ಣರ ಸಂಸ್ಮರಣೆ ನಡೆಯಲಿದೆ.
  ಫೆ.18 ರಂದು ಬೆಳಿಗ್ಗೆ 8.30ಕ್ಕೆ ಪಂಚರತ್ನ ಕೀರ್ತನಾ ಕಾರ್ಯಕ್ರಮ, 10ಕ್ಕೆ ವೀಣಾವಾಧಿನಿ ವಿದ್ಯಾಥರ್ಿಗಳಿಂದ ನಾದೋಪಾಸನೆ ಹಾಗೂ ಸಂಜೆ 4.30ಕ್ಕೆ ವೀಣಾವಾಧಿನಿ ಪುರಸ್ಕಾರ-ಅಭಿನಂದನಾ ಸಮಾರಂಭ ನಡೆಯಲಿದ್ದು, ಡಾ.ಶಂಕರರಾಜ್ ಅಳಂಬೋಡಿಯವರಿಗೆ ಗೌರವಾಭಿನಂದನೆ ಸಲ್ಲಿಸಲಾಗುವುದು. ಡಾ.ರವಿಚಂದ್ರ ಮಂಗಳೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವಿದುಷಿಃ ಸ್ವರ್ಣಗೌರೀ ಪೆರ್ಲ, ಪ್ರೊ.ವೆಂಕಟಕೃಷ್ಣನ್, ರಾಧಾಕೃಷ್ಣ ಭಟ್ ಬಳ್ಳಪದವು ಉಪಸ್ಥಿತರಿದ್ದು ಮಾತನಾಡುವರು. ಬಳಿಕ ವಿಷ್ಣುದೇವ್ ನಂಬೂದಿರಿ ಚೆನ್ನೈರವರ ಕನರ್ಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯುವುದರೊಂದಿಗೆ ಸಮಾರಂಭ ಸಂಪನ್ನಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries