ಕಣಿಪುರ ವಾಷರ್ಿಕ ಜಾತ್ರೋತ್ಸವಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ
ಕುಂಬಳೆ: ಕುಂಬಳೆ ಸೀಮೆಯ ಪ್ರಧಾನ ದೇವಾಲಯಗಳಲ್ಲಿ ಒಂದಾಗಿರುವ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದ ವಾಷರ್ಿಕ ಜಾತ್ರೋತ್ಸವಕ್ಕೆ ಭಾನುವಾರ ಧ್ವಜಾರೋಹಣಗೈಯ್ಯುವುದರೊಂದಿಗೆ ಅಧಿಕೃತ ಚಾಲನೆ ನೀಡಲಾಯಿತು.
ಭಾನುವಾರ ಬೆಳಿಗ್ಗೆ 8ಕ್ಕೆ ಕೆ.ವಿ.ರಾಜನ್ ಮಾರಾರ್ ಪಯ್ಯನ್ನೂರುರವರಿಂದ ಸೋಪಾನ ಸಂಗೀತ ನೆರವೇರಿತು. ಬಳಿಕ 9.30ಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆ ವಿವಿಧೆಡೆಗಳಿಂದ ಶ್ರೀಕ್ಷೇತ್ರಕ್ಕೆ ಆಗಮಿಸಿತು. ಬಳಿಕ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ತಾಂತ್ರಿಕ ವಿಧಿವಿಧಾನಗಳೊಂದಿಗೆ ಧ್ವಜಾರೋಹಣ ನಡೆಯಿತು. ಸಾವಿರಾರು ಭಕ್ತರು ಈ ಸಂದರ್ಭ ಪಾಲ್ಗೊಂಡು ಧನ್ಯರಾದರು. ಬಳಿಕ ತುಲಾಭಾರ ಸೇವೆ, ಮಹಾಪೂಜೆ, ಶ್ರೀಬಲಿ, ಅನ್ನಸಂತರ್ಪಣೆ ನಡೆಯಿತು.ಸಂಜೆ 6ಕ್ಕೆ ನಡೆತೆರೆದು 6.30ಕ್ಕೆ ದೀಪಾರಾಧನೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ 8.30 ರಿಂದ ವಿದ್ವಾನ್. ಯು.ಜಿ.ನಾರಾಯಣ ಶಮರ್ಾ ಉಂಡೆಮನೆಯವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಬಳಿಕ ಉತ್ಸವ ಬಲಿ, ರಂಗಪೂಜೆ ನಡೆಯಿತು.
ಇಂದಿನ ಕಾರ್ಯಕ್ರಮ:
ಕಟೀಲು ಮೇಳದವರಿಂದ ಬಯಲಾಟ ಇಂದು:
ಜ.15 ರಂದು ಸೋಮವಾರ ಬೆಳಿಗ್ಗೆ 6ಕ್ಕೆ ಉತ್ಸವ ಶ್ರೀಭೂತಬಲಿ, 8.30 ರಿಂದ ಭಜನೆ, 10.30 ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಶ್ರೀಬಲಿ, ಅನ್ನದಾನ, ಸಂಜೆ 4.30 ಕ್ಕೆ ನಡೆತೆರೆಯುವುದು, 6.30ಕ್ಕೆ ದೀಪಾರಾಧನೆ, 6.30 ರಿಂದ ಕಯ್ಯಾರು ಪೊನ್ನತ್ತೋಡಿನ ಮಹಿಳಾ ಯಕ್ಷಗಾನ ತಂಡದವರಿಂದ ತಾಳಮದ್ದಳೆ, 8.30 ರಿಂದ ಸಣ್ಣ ದೀಪೋತ್ಸವ, ಪ್ರದಕ್ಷಿಣೆ ಬಲಿ, ಪೂಜೆ ನಡೆದು ಬಳಿಕ 11.30 ರಿಂದ ಕಟೀಲು ಶ್ರೀದುಗರ್ಾಪರಮೇಶ್ವರಿ ಮೇಳದರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.