HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಗೊಂದಲದ ಮನೋಸ್ಥಿತಿಯ ನಿಯಂತ್ರಣಕ್ಕೆ ಕಲೆ, ಸಾಂಸ್ಕ್ರತಿಕತೆಗಳಲ್ಲಿ ಆಸಕ್ತರಾಗುವುದು ಉತ್ತಮ-ಸಚಿವ ಎಚ್.ಎಂ.ರೇವಣ್ಣ
                  ಗಿಳಿವಿಂಡಿನಲ್ಲಿ ಜಾನಪದ ಸಮ್ಮಿಲನ ಉದ್ಘಾಟನೆ
   ಮಂಜೇಶ್ವರ: ಇಂದು ಸಮಾಜ, ಕುಟುಂಬ ವ್ಯವಸ್ಥೆಯಲ್ಲಿ ಸಂಬಂಧ, ಸೌಹಾರ್ಧತೆಗಳು ನಶಿಸುತ್ತಿರುವುದು ಗಂಭೀರ ವಿಷಯ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ತಳಹದಿಯ ಪುನಶ್ಚೇತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಪರಿಣಾಮಕಾರಿ ಎಂದು ಕನರ್ಾಟಕ ಸರಕಾರದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
   ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕವು ಕೇರಳ ರಾಜ್ಯ ಬ್ಯಾರಿ ಫೆಡರೇಶನ್ ಸಹಕಾರದೊಂದಿಗೆ ಗುರುವಾರ ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈ ನಿವಾಸ ಗಿಳಿವಿಂಡಿನಲ್ಲಿ ಆಯೋಜಿಸಿದ್ದ "ಕನ್ನಡ, ಬ್ಯಾರಿ, ತುಳು ಜಾನಪದ ಸಮ್ಮಿಲನ" ಸಮಾರಂಭವನ್ನು ತೌಳವ ಸಂಪ್ರದಾಯದ ಡೋಲು ಬಾರಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಇಂದಿನ ಮನೋಸ್ಥಿತಿಗಳು ತೀವ್ರ ಕಳವಳಕಾರಿಯಾಗಿ ಬದಲಾಗಿರುವುದು ಭೀತಿಗೊಳಪಡಿಸುತ್ತಿದೆ. ಪೂರ್ವಜರು ಒಂದಾಗಿ ಬಾಳಿದ ವ್ಯವಸ್ಥೆ, ಅದರ ಹಿನ್ನೆಲೆಯಲ್ಲಿ ಶಕ್ತಿಯಾಗಿ ನಿಂತ ಜಾನಪದ ಸಹಿತ ವಿವಿಧ ಕಲಾ ಪ್ರಕಾರಗಳ ಪ್ರಖರತೆಯ ವ್ಯವಸ್ಥೆಯನ್ನು ಮರಳಿ ಪರಿಚಯಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು. ವ್ಯಾವಹಾರಿಕ ಜಗತ್ತು ಯಾಂತ್ರಿಕಗೊಂಡು ಆಂತರಂಗಿಕ ಭಾವಗಳಿಗೆ ಸ್ಥಾನ ಇಲ್ಲವಾಗಿರುವುದು ವಿಷಮತೆಯ ಸೃಷ್ಟಿಗೆ ಕಾರಣವಾಗುವುದು. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಜನರನ್ನು ಹತ್ತಿರಕ್ಕೆಳೆದು ಪರಸ್ಪರ ಬೆಸೆಯುವಲ್ಲಿ ಪ್ರಧಾನ ಪತ್ರವಹಿಸುತ್ತದೆ ಎಂದ ಅವರು, ಗಡಿನಾಡು ಕಾಸರಗೋಡಿನ ವಿಭಿನ್ನ ಬಹುಭಾಷಾ ಸಂಸ್ಕೃತಿ, ಅಚ್ಚ ಕನ್ನಡದ ಸ್ಪುಟವಾದ ಭಾಷಾ ಫ್ರೌಢಿಮೆ ಕನರ್ಾಟಕದ ಇತರೆಡೆಗಳಿಗೆ ಮಾರ್ಗದಶರ್ಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
   ಕೇರಳ ರಾಜ್ಯ ಬ್ಯಾರಿ ಫೆಡರೇಶನ್ ಅಧ್ಯಕ್ಷ ಯು.ಕೆ.ಸೈಫುಲ್ಲಾ ತಂಙಳ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಸರಗೋಡಿನ ಸಾಂಸ್ಕೃತಿಕ, ಸಾಮಾಜಿಕ ಶ್ರೀಮಂತಿಕೆಯನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಯುವ ಸಮೂಹವನ್ನು ಪ್ರೇರೇಪಿಸುವ ಕಾರ್ಯಚಟುವಟಿಕೆಗಳು ನಡೆಯಬೇಕು ಎಂದು ತಿಳಿಸಿದರು.
  ಕನರ್ಾಟಕ ಅರಣ್ಯ, ವಸತಿ ಮತ್ತು ವಿಹಾರಧಾಮ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್, ಕನರ್ಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮೊಹಮ್ಮದ್, ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಸದಸ್ಯ ಕೆ.ಆರ್.ಜಯಾನಂದ, ಕೇರಳ ಪಾತರ್ಿಸುಬ್ಬ ಕಲಾಕ್ಷೇತ್ರದ ಕಾರ್ಯದಶರ್ಿ ಸಂಕಬೈಲು ಸತೀಶ ಅಡಪ, ಮಂಜೇಶ್ವರ ಮಸರ್ಿ ಚಚರ್್ ಉಪಾಧ್ಯಕ್ಷೆ ಜೀನ್ ಲವೀನಾ ಮೊಮತೇರೋ, ಗಿಳಿವಿಂಡು ಟ್ರಸ್ಟ್ ಸದಸ್ಯ ಎಂ.ಜೆ.ಕಿಣಿ ಉಪಸ್ಥಿತರಿದ್ದು ಮಾತನಾಡಿದರು.  ಕನರ್ಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದ್ಯರುಗಳಾದ ಕೆ.ಎಂ.ಶೆರೀಫ್, ಹುಸೈನ್ ಕಾಟಿಪಳ್ಳ, ಹಸನಬ್ಬ ಮೂಡಬಿದ್ರೆ, ಬಶೀರ್ ಬೈಕಂಪಾಡಿ, ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಕಾರ್ಯದಶರ್ಿ ಲಕ್ಷ್ಮಣ ಪ್ರಭು ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು.
  ಸಮಾರಂಭದಲ್ಲಿ ರಾಜ್ಯ ಕಲೋತ್ಸವದ ವಿವಿಧ ಸ್ಪಧರ್ೆಗಳಲ್ಲಿ ಭಾಗವಹಿಸಿ ಎ ಗ್ರೇಡ್ ನೊಂದಿಗೆ ವಿಜೇತರಾದ ರಕ್ಷಾ ಕಾಮತ್ ಚೇವರು(ಧರ್ಮತ್ತಡ್ಕ ಶಾಲಾ ವಿದ್ಯಾಥರ್ಿನಿ), ಬಾಲ ಯಕ್ಷಗಾನ ಕಲಾವಿದೆ ಉಪಾಸನಾ ಪಂಜರಿಕೆ, ಸ್ವಸ್ತಿಕ್ ಶಮರ್ಾ, ಚಿನ್ಮಯಕೃಷ್ಣ ಕಡಂದೇಲು, ಸಮನ್ವಿತಾ ಗಣೇಶ್ ಕಾಸರಗೊಡು, ಸರಿತಾ ಮಲ್ಲರನ್ನು ಅಭಿನಂದಿಸಲಾಯಿತು. 
   ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಕಾರ್ಯದಶರ್ಿ ಪುರುಷೋತ್ತಮ ಭಟ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೇರಳ ಬ್ಯಾರಿ ಫೆಡರೇಶನ್ ಸಂಘಟನಾ ಕಾರ್ಯದಶರ್ಿ ಝಡ್.ಎ.ಕಯ್ಯಾರು ವಂದಿಸಿದರು. ಜಾನಪದ ಪರಿಷತ್ತು ಕೇರಳ ಘಟಕದ ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.
  ಬಳಿಕ ಬಂಗ್ರಮಂಜೇಶ್ವರ ಮುಹಿದ್ದೀನ್ ಜುಮಾ ಮಸೀದಿಯ ರಿಫಾಯಿಯಾ ರಾತಿಬ್ ತಂಡದವರ ದಪ್ಮುಟ್ಟ್, ಅಲ್ ಮುಬಾರಕ್ ಕೋಲ್ಕಳಿ ಸಂಘ ಮಂಜೇಶ್ವರ ದವರಿಂದ ಕೋಲಾಟ, ಬೊಳಿಕೆ ಜಾನಪದ ಕಲಾತಂಡ ಕನ್ನೆಪ್ಪಾಡಿ ತಂಡದವರಿಂದ ಶಂಕರ್ ಹಾಗೂ ಯಶೋಧಾ ಸ್ವಾಮಿಕೃಪಾ ನಿದರ್ೇಶನದಲ್ಲಿ ವೈವಿಧ್ಯಮಯ ಜಾನಪದ ಹಾಡು-ಕುಣಿತಗಳ ಪ್ರದರ್ಶನ ಜರಗಿತು.
   ಮನವಿಗಳಿಗೆ ಸಚಿವರ ಸಕಾರಾತ್ಮಕ ಸ್ಪಂಧನ:
   ಸಾರಿಗೆ ಸಚಿವರ ಭೇಟಿಯ ವೇಳೆ ಸಾರಿಗೆ ಇಲಾಖೆಗೆ ಸಂಬಂಧಿಸಿ ಗಡಿನಾಡು ಕಾಸರಗೋಡಿಗೆ ಪ್ರಾತಿನಿದ್ಯದ ಬೇಡಿಕೆ ಸಲ್ಲಿಸಿ ಸಚಿವರಿಗೆ ಹಲವರು ಬೇಡಿಕೆ ಸಲ್ಲಿಸಿದರು. ಈ ಸಂದರ್ಭ ಕ್ರಿಯಾತ್ಮಕವಾಗಿ ಸ್ಪಂಧಿಸಿದ ಸಚಿವರು ಕೂಡಲೇ ಪರಿಹಾರಕ್ಕೆ ಆದೇಶ ನೀಡಿದರು. ಈ ಪೈಕಿ ಮಂಜೇಶ್ವರದಿಂದ ಬೆಂಗಳೂರಿಗೆ ಬಸ್ ಸಂಚಾರ, ಕಾಸರಗೋಡಿನ ಇತರ ಭಾಗಗಳಿಗೆ ಕನರ್ಾಟಕ ಸಾರಿಗೆ ಆರಂಭಿಸಲು ಪೂರ್ವಭಾವೀ ಪರಿಶೀಲನೆಗಳ ಸಹಿತ ಹಲವು ಬೇಡಿಕೆಗಳ ಪೂರೈಕೆಗೆ ಭರವಸೆ ನೀಡಿದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries