HEALTH TIPS

No title

       ಆರಿಕ್ಕಾಡಿ ಪಾಡಾಂಗರೆ ಭಗವತೀ ಕಳಿಯಾಟ ಮಹೋತ್ಸವ
  ಕುಂಬಳೆ: ಕುಂಬಳೆ ಸಮೀಪದ ಆರಿಕ್ಕಡಿಯಲ್ಲಿರುವ ದೇವಾಡಿಗ ಸಮುದಾಯದ ಆರಾಧ್ಯ ಕ್ಷೇತ್ರ ಪಾಡಾಂಗರೆ ಶ್ರೀಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಜ.31 ರಿಂದ ಫೆ. 7ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
   ಸಮಾರಂಭದ ಅಂಗವಾಗಿ ಇಂದು ಬೆಳಿಗ್ಗೆ 10ಕ್ಕೆ ಗೊನೆ ಮುಹೂರ್ತ ನಡೆಯಲಿದೆ. ಜ.31 ರಂದು ಬೆಳಿಗ್ಗೆ ಗಣಹೋಮ, 8.30ಕ್ಕೆ  ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರ ಪರಿಸರದಿಂದ ಹೊರೆಕಾಣಿಕೆ ಮೆರವಣಿಗೆ, 10.30ಕ್ಕೆ ಆನೆ ಚಪ್ಪರದ ಉದ್ಘಾಟನೆ, 11.30ಕ್ಕೆ ಕೊಡಿಮರ ಏರುವುದು, ರಾತ್ರಿ 9ಕ್ಕೆ ಭಂಡಾರಚ ಏರುವುದು, 10 ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ.
   ಫೆ.1 ರಮದು ಪ್ರಾತಃಕಾಲ 4ಕ್ಕೆ ಭಗವತೀ ದರ್ಶನ, ಕೆಮಡಸೇವೆ, ಪ್ರದಕ್ಷಿಣೆ, ಬಿಂಬ ಬಲಿ ದರ್ಶನ, ಧ್ವಜಾರೋಹಣ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ, ರಾತ್ರಿ 8ಕ್ಕೆ ಪುಳ್ಳಿಪೂವಣ್ಣ ದೈವದ ವೆಳ್ಳಾಟ, 9ಕ್ಕೆ ಅನ್ನಸಂತರ್ಪಣೆ, 10ಕ್ಕೆ ಅಣಂಗುಭೂತ, ಪುಳ್ಳಿಪೂವಣ್ಣ ದೈವದ ಕೋಲ ನಡೆಯಲಿದೆ.ಫೆ.2 ರಂದು ಬೆಳಿಗ್ಗೆ 6ಕ್ಕೆ ಬಿಲ್ಲಾಪುರತ ಭಗವತೀ ನೇಮ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ 7.30ಕ್ಕೆ ವಯನಾಡ್ ಕುಲವನ್ ದೈವದ ಕೈಮೀದ್, ಮರ ಚೇರ್ಕಲ್ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ ಭಾಗವಾಗಿ ಸಂಜೆ 6ಕ್ಕೆ ನೃತ್ಯ ಸಂಚನ, 7.30 ರಿಂದ ವಿಠಲ ನಾಯಕ್ ವಿಟ್ಲ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.
   ಫೆ.3 ರಮದು ಬೆಳಿಗ್ಗೆ 7 ಕ್ಕೆ ವೀರಪುತ್ರ ದೈವದ ಕೋಲ, 10ಕ್ಕೆ ಮಲಯಂ ಚಾಮುಮಡಿ ದೈವದ ಕೋಲ, 1ಕ್ಕೆ ಅನ್ನಸಂತರ್ಪಣೆ, ಅಪರಾಹ್ನ 3 ಕ್ಕೆ ವಯನಾಡ್ ಕುಲವನ್ ದೈವದ ತೊಡಂಗಲ್, ವಿಷ್ಣುಮೂತರ್ಿ ದೈವದ ತೊಡಂಗಲ್ ನಡೆಯಲಿದೆ. ಸಂಜೆ 4ಕ್ಕೆ ಪುದಿಯ ಭಗವತೀ ತೊಡಂಗಲ್, 6ಕ್ಕೆ ವಯನಾಟ್ ಕುಲವನ್ ದೈವದ ವೆಳ್ಳಾಟಂ, 8 ರಿಂದ ಅನ್ನ ಸಂತರ್ಪಣೆ, 9ಕ್ಕೆ ಕನ್ನಿಕರಿಮಗನ್, ಕರಿವಿಲ್ಲ್, ವೇಟಕರಿಮಗನ್, ವೀರಪುತ್ರ ದೈವಗಳ ವೆಳ್ಳಾಟಂ, ಹೂವಿನ ಪೂಜೆ, ಭಗವತೀ ದರ್ಶನ, ಕೆಂಡಸೇವೆ,  ಬಿಂಬ ಬಲಿ ದರ್ಶನ, ಪುದಿಯ ಭಗವತೀ, ಚಾಮುಮಡಿ ದೈವಗಳ ತೋಟಂ, ಉರುಳು ಸೇವೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5ಕ್ಕೆ ಉಲ್ಪೆ ಮೆರವಣಿಗೆ ಕುಂಬಳೆ ಕಣಿಪುರ ಕ್ಷೇತ್ರದಿಂದ ಪಾಡಾಂಗರೆ ಭಗವತೀ ಕ್ಷೇತ್ರಕ್ಕೆ ಆಗಮಿಸಲಿದೆ.
  ಫೆ. 4 ರಂದು ಪ್ರಾತಃಕಾಲ 4ಕ್ಕೆ ಕರಿವಿಲ್ಲ್, ಕನ್ನಿಕರಿಮಗನ್ ದೈವಗಳ ಕೋಲ, 6ಕ್ಕೆ ವಿಷ್ಣುಮೂತರ್ಿ ದೈವದ ಕೋಲ, ವಯನಾಟ್ ಕುಲವನ್ ದೈವದ ಕೋಲ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ 4ಕ್ಕೆ ವೀರಪುತ್ರ ದೈವದ ಕೋಲ, ರಾತ್ರಿ 8 ರಿಂದ ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6ಕ್ಕೆ ಕು.ದಿವ್ಯಶ್ರೀಯವರಿಂದ ಹರಿಕಥಾ ಸಂಕೀರ್ತನೆ, 8.30ಕ್ಕೆ ವಿದುಷಿಃ ವಿದ್ಯಾಲಕ್ಷ್ಮೀ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯ ವೈವಿಧ್ಯ ನಡೆಯಲಿದೆ. ಫೆ.5 ರಂದು ಪ್ರಾತಃಕಾಲ 4ಕ್ಕೆ ಪಿಯಾಯಿ, 10ಕ್ಕೆ ಭಗವತೀ ದರ್ಶನ, ಕೆಮಡಸೇವೆ, ಬಿಂಬ ಬಲಿ ದರ್ಶನ, ಪುದಿಯ ಭಗವತೀ ಕೋಲ, ಕಲಶ ಪ್ರದಕ್ಷಿಣೆ, ವೀರಕಾಳಿ ದೈವದ ತೊಡಂಗಲ್ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ರಾತ್ರಿ 9 ರಿಂದ ವೀರಪುತ್ರ, ವೇಟಕರಿಮಗನ್ ವೆಳ್ಳಾಟ, ಭಗವತೀ ದರ್ಶನ, ಕೆಮಡಸೇವೆ, ಬಿಂಬ ಬಲಿ ದರ್ಶನ, ವೀರಕಾಳಿ ಮತ್ತು ಮಲಯಂ ಚಾಮುಮಡಿ ದೈವಗಳ ಕೋಲ ನಡೆಯಲಿದೆ. ಸಂಜೆ 4ಕ್ಕೆ ನಡೆಯಲಿರುವ ಧಾಮರ್ಿಕ ಸಭೆಯಲ್ಲಿ ಬ್ರಹ್ಮಶ್ರೀ ಕಕರ್ುಳ ಶಂಕರನಾರಾಯಣ ಕಡಮಣ್ಣಾಯರು ಆಶೀರ್ವಚನ ನಿಡುವರು. ಬಿ.ಕೆ.ಮಧೂರು ಅಧ್ಯಕ್ಷತೆ ವಹಿಸುವರು. ಕೇರಳದ ಪ್ರಸಿದ್ದ ಚಿಂತಕ ರಾಹುಲ್ ಈಶ್ವರ ಧಾಮರ್ಿಕ ಉಪನ್ಯಾಸ ನೀಡುವರು. ವಿವಿಧ ಗಣ್ಯರು ಉಪಸ್ಥಿತರಿರುವರು.ಸಂಜೆ 6ಕ್ಕೆ ಸಂಗೀತ ರಸಮಂಜರಿ, ಕೋಮಿಡಿ ಶೋ, ಮಿಮಿಕ್ರಿ ನಡೆಯಲಿದೆ.
  ಫೆ. 6 ರಂದು ಬೆಳಿಗ್ಗೆ 7ಕ್ಕೆ ಪಿಯಾಯಿ, 9ಕ್ಕೆ ಭಗವತೀ ದರ್ಶನ, ಕೆಮಡಸೇವೆ, ಬಿಂಬ ಬಲಿ ದರ್ಶನ, ವೀರಕಾಳಿ ದೈವದ ಕೋಲ, ಕಲಶ ಪ್ರದಕ್ಷಿಣೆ, ಪಾಡಾರ್ ಕುಳಂಗರ ಭಗವತಿಯ ತೊಡಂಗಲ್, ಪ್ರಸಾದ ವಿತರಣೆ, ,ಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ರಾತ್ರಿ 9ಕ್ಕೆ ಭಗವತೀ ದರ್ಶನ, ಕೆಮಡಸೇವೆ ಮೊದಲಾದ ಕಾರ್ಯಕ್ರಮಗಳು, 11 ಕ್ಕೆ ಮೇಚೇರಿ ಚಾಮುಂಡಿ ದೈವದ ತೊಡಂಗಲ್, 12 ಕ್ಕೆ ಮೇಚೇರಿ ಚಾಮುಂಡಿ ದೈವದ ತೋಟಂ ನಡೆಯಲಿದೆ.
   ಫೆ.7 ರಮದು ಪ್ರಾತಃಕಾಲ 3ಕ್ಕೆ ಮಲಯ ಚಾಮುಂಡಿ ದೈವದ ಕೋಲ, 5ಕ್ಕೆ ಮೇಚೇರಿ ಚಾಮುಂಡಿ ದೈವದ ಕೋಲ, 6ಕ್ಕೆ ಪಿಯಾಯಿ, 7ಕ್ಕೆ ವೀರಪುತ್ರ ದೈವದ ಕೋಲ, ಮಧ್ಯಾಹ್ನ 12ಕ್ಕೆ ಭಗವತೀ ದರ್ಶನ, ಕೆಮಡಸೇವೆ, ಬಿಂಬ ಬಲಿ ದರ್ಶನ, ಪಾಡಾರ್ ಕುಳಂಗರ ಭಗವತೀ ಕೋಲ, ಕಲಶ ಪ್ರದಕ್ಷಿಣೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ 4ಕ್ಕೆ ಧ್ವಜಾವರೋಹಣ, 8ಕ್ಕೆ ಭಂಡಾರ ಇಳಿಯುವುದು, ಗುಳಿಗನಿಗೆ ಕೋಳಿ ಸಮರ್ಪಣೆಯೊಂದಿಗೆ ಕಳಿಯಾಟ ಸಂಪನ್ನಗೊಳ್ಳುವುದು.
       

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries