ಅಡುಗೆ ಇಂಧನ ಸೇವೆಯಲ್ಲಿ ಅಸಡ್ಡೆ-ಗ್ರಾಹಕರ ಆರೋಪ
ಉಪ್ಪಳ: ಪೈವಳಿಕೆ ಸಮೀಪದ ಲಾಲ್ಬಾಗ್ ಬೊಳಂಗಳ ಎಂಬಲ್ಲಿ ಉಪ್ಪಳ ಅನಿಲ ಸರಬರಾಜು ಗ್ರಾಹಕರ ಮನೆಯೊಂದರಲ್ಲಿ ಅನಿಲ ಜಾಡಿ ಸೋರಿಕೆಯಾಗಿ ತಿಂಗಳು ಸಂದುಹೋಗಿದೆ. ಸೋರಿಕೆ ಉಂಟಾದಾಗ ಕೂಡಲೇ ಉಪ್ಪಳದ ಗ್ಯಾಸ್ ವಿತರಣೆ ಕೇಂದ್ರಕ್ಕೆ ವಿವರ ತಿಳಿಸಲಾಯಿತು. ಆದರೆ ಇಲ್ಲಿನ ನೌಕರರು ಇಂದು ಬರುತ್ತೇವೆ. ನಾಳೆ ಬರುತ್ತೇವೆಂದು ಹೇಳಿ ತಿಂಗಳಾದರೂ ಬರಲಿಲ್ಲ, ಈಗ ಈ ಅನಿಲ ಜಾಡಿ ಪೂತರ್ಿ ಖಾಲಿ ಆಗಿದ್ದು, ಮನೆಯಲ್ಲಿ ಪುಟ್ಟ ಮಕ್ಕಳು ಸ್ತ್ರೀಯರು ಇರುವ ಕಾರಣ ಅನಾಹುತ ಉಂಟಾಗ ಬಹುದೆಂದು ಈ ಜಾಡಿಯನ್ನು ಮನೆಯ ಹೊರಗೆ ಇಡಲಾಗಿದೆ. ಈ ವಿವಾರ ತಿಳಿಸಿದರೂ ಗ್ಯಾಸ್ ಕಂಪೆನಿಯವರು ನಿರ್ಲಕ್ಷ ತೋರಿರುವರು. ಇದರಿಂದಾಗಿ ಈ ಗ್ಯಾಸ್ ಸಿಲಿಂಡರ್ನಿಂದಾಗಿ ಉಂಟಾಗಬಹುದಾದ ಅನಾಹುತಕ್ಕೆ ಯಾರು ಹೊಣೆ ಎಂಬ ಆತಂಕ ಗ್ರಾಹಕರಲ್ಲಿ ಮೂಡಿದೆ. ಆದುದರಿಂದ ಇವರ ಸೇವೆಯ ನಿರ್ಲಕ್ಷ್ಯದ ಬಗ್ಗೆ ಗ್ರಾಹಕರು ಎಚ್ಚತ್ತು ಕೊಳ್ಳಬೇಕಾಗಿದೆ ಮತ್ತು ಗ್ಯಾಸ್ ವಿತರಕರ ಬಗ್ಗೆ ಗಮನ ಹರಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.ಅಲ್ಲದೆ ಗ್ರಾಹಕರ ವೇದಿಕೆಗೆ ದೂರು ನೀಡಲು ಮುಂದಾಗಿದ್ದಾರೆ.