HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಸಿ.ಪಿ.ಐ ಜಿಲ್ಲಾ ಸಮ್ಮೇಳನದ ಯಶಸ್ಸಿಗೆ ಪೈವಳಿಕೆಯಲ್ಲಿ ಸಿದ್ಧತೆ
   ಉಪ್ಪಳ: ಸಿ.ಪಿ.ಐ 23ನೇ ಪಾಟರ್ಿ ಕಾಂಗ್ರೆಸ್ ಎ. 25 ರಿಂದ 29ರ ತನಕ ಕೊಲ್ಲಂನಲ್ಲಿ  ನಡೆಯಲಿದೆ. ಇದರ ಪೂರ್ವಭಾವಿಯಾಗಿ ಕಾಸರಗೋಡು ಜಿಲ್ಲಾ ಸಮ್ಮೇಳನವು ಫೆ. 11 ರಿಂದ 13ರ ವರೆಗೆ ಚಟ್ಟಂಚಾಲ್ ಜರಗಲಿದೆ. ಈ ಸಮ್ಮೇಳನದ ಯಶಸ್ವಿಗಾಗಿ ಸಿ.ಪಿ.ಐ  ಪೈವಳಿಕೆ ಲೋಕಲ್ ಸಮಿತಿ ಸಭೆಯು ರಾಧಾಕೃಷ್ಣ ಭಟ್ರ ಅಧ್ಯಕ್ಷತೆಯಲ್ಲಿ ಸಿಪಿಐ ಕಛೇರಿಯಲ್ಲಿ ಜರಗಿತು.
  ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಎಂ. ಚಂದ್ರ ನಾಕ್ ಮಾಣಿಪ್ಪಾಡಿ ಜಿಲ್ಲಾ ಸಮ್ಮೇಳನದ ಯಶಸ್ವಿಯ ಕಾರ್ಯ ತಂತ್ರಗಳ ಬಗ್ಗೆ ಮಾಹಿತಿ ನೀಡಿದರು.  ಪಕ್ಷದ ಕಾರ್ಯಕರ್ತರು ನೇತಾರರು ದುಡಿದು ಈ ಸಮ್ಮೇಳನದ ಯಶಸ್ವಿಗೆ ಸಹಕರಿಸಬೇಕೆಂದರು.ಮಂಡಲ ಸಮಿತಿ ಸದಸ್ಯರಾದ ಲೋರೆನ್ಸ್ ಡಿ.ಸೋಜ, ಶಾಂಭವಿ ಬಾಯಿಕಟ್ಟೆ ,ಸುದಾನಂದ ಬಾಯಾರು ಮಾತನಾಡಿದರು. ಪಕ್ಷದ ತಿಮರ್ಾನದಂತೆ ಓಖಿ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಪಕ್ಷದ  ಸದಸ್ಯರು ನಿಧಿ ಸಂಗ್ರಹಿಸಿಕೊಡಲು ತೀಮರ್ಾನಿಸಲಾಯಿತು. ಜಿಲ್ಲಾ ಸಮ್ಮೇಳನದ ರ್ಯಾಲಿಯಲ್ಲಿ ಕೆಂಪು ಸಮವಸ್ತ್ರದಾರಿ ಸ್ವಯಂಸೇವಕರನ್ನು ಭಾಗವಹಿಸಲು ಆಯ್ಕೆ ಮಾಡಿ ಸದಸ್ಯರಿಗೆ ತರಬೇತಿ ನೀಡಲು ಮತ್ತು ಜಿಲ್ಲಾ ಸಮ್ಮೇಳನದ ಖಚರ್ುವೆಚ್ಚಕ್ಕಾಗಿ ಸದಸ್ಯರಿಂದ ನಿಧಿ ಸಂಗ್ರಹಿಸಲು ತಿಮರ್ಾನಿಸಲಾಯಿತು.ಜಿಲ್ಲಾ ಸಮ್ಮೇಳನದ ಪ್ರಚಾರಾರ್ಥವಾಗಿ ಗೋಡೆ ಬರಹ,ಫ್ಲಕ್ಸ್ ಬೋಡರ್ುಗಳನ್ನು ಸ್ಥಾಪಿಸಲು ಹಾಗೂ ಸಮ್ಮೇಳನದ ಧ್ವಜ ದಿನವಾದ ಫೆ.1 ರಂದು ಧ್ವಜ ನಾಟಲು,ಸಮ್ಮೇಳನದ ರ್ಯಾಲಿಯಲ್ಲಿ ಪೈವಳಿಕೆಯಿಂದ 500 ಮಂದಿ ಭಾಗವಹಿಸಲು ಪ್ರತಿ ಮನೆ ಮನೆಗೆ ಸಂದರ್ಶನ ಮಾಡಲು ತೀಮರ್ಾನಿಸಲಾಯಿತು.ಕೇಶವ ಬಾಯಿಕಟ್ಟೆ ,ಚನಿಯ ಕೊಮ್ಮಂಗಳ ,ಸಿ.ಸಂಜಿವ ಶೆಟ್ಟಿ, ರವಿ ಮಂತೇರೊ,ಕೃಷ್ಣ ಪಾಡಿ ಚಚರ್ೆಯಲ್ಲಿ ಭಾಗವಹಿಸಿದರು. ಓಖಿ ದುರಂತದಲ್ಲಿ ಮಡಿದವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.ಲೊರೆಸ್ಸ್ ಡಿ.ಸಜಾ ಸ್ವಾಗತಿಸಿ, ಚನಿಯ ಕೊಮ್ಮಂಗಳ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries