HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಸಶಕ್ತ ಸುದೃಢ ಸಮಾಜ ನಿಮರ್ಾಣಕ್ಕೆ ಸ್ವಾಮಿ ವಿವೇಕಾನಂದರು ಪ್ರೇರಣೆ-ವಿಶ್ವನಾಥ್
   ಉಪ್ಪಳ: ಸ್ವಾಮಿ ವಿವೇಕಾನಂದರು ಯುವಕರಿಗೆ ಪ್ರೇರಣೆಯ ದ್ಯೋತಕರಾಗಿದ್ದಾರೆ. ಸಶಕ್ತ ,ಸುದೃಢ ಸಮಾಜ ನಿಮರ್ಾಣಕ್ಕೆ ಯುವಕರು ಮುಂದೆ ಬರಬೇಕಿದೆ. ರಾಷ್ಟ್ರಿಯ ಸ್ವಯಂಸೇವಕ ಸಂಘದ ದಿನನಿತ್ಯದ ಶಾಖೆಗಳ ಮೂಲಕ ಯುವಕರಿಗೆ ದೇಶಭಕ್ತಿಯ ಹಾಗೂ ದೇಶಕ್ಕಾಗಿ ಬದುಕುವ ಶಿಕ್ಷಣ ಪಡೆಯುತ್ತಿದ್ದಾರೆ.ವಿವೇಕಾನಂದರ ಕನಸು ಈ ರೀತಿಯಲ್ಲಿ ಸಾಕಾರಗೊಳ್ಳುತ್ತದೆ. ಇಂದು ದೇಶದಲ್ಲಿನ ಅತ್ಯಂತ ಉನ್ನತ ಸಾಂವಿಧಾನಿಕ ಹುದ್ದೆಗಳಲ್ಲಿ ವಿವೇಕಾನಂದರ ಆದರ್ಶಗಳನ್ನು ಸಂಘದ ಶಾಖೆಗಳ ಮೂಲಕ ಪಡೆದ ಹಲವರು ಇರುವುದು ಅತ್ಯಂತ ಸಂತೋಷ ಪಡುವ ವಿಚಾರ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಗ್ರಾಮ ವಿಕಾಸ ಪ್ರಮುಖ್ ವಿಶ್ವನಾಥ ಅಭಿಪ್ರಾಯ ವ್ಯಕ್ತಪಡಿಸಿದರು.
     ಬಾಯಾರು ಸಮೀಪದ ಪೆರುವೊಡಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಇತ್ತೀಚೆಗೆ ವಿವಿಧ ಧಾಮರ್ಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾದ ವಿವೇಕಾನಂದ ಜಯಂತಿ ಕಾರ್ಯಕ್ರಮದಲಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
   ಸಮಾರಂಭದ ಅಂಗವಾಗಿ ಮೊದಲಿಗೆ ಪೆರುವೊಡಿಯ ಬಾಲಗೋಕುಲ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಸಾರ್ವಜನಿಕ ಶ್ರೀದುಗರ್ಾಪೂಜೆ ನಡೆಯಿತು. ದೀಪ ಬೆಳಗಿಸಿ, ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ  ಸಮಾರಂಭ ಉದ್ಘಾಟಿಸಲಾಯಿತು.
  ಸಭೆಯ ಅಧ್ಯಕ್ಷತೆಯನ್ನು  ನಿವೃತ್ತ ಶಿಕ್ಷಕ ರಾಘವೇಂದ್ರ ಬಲ್ಲಾಳ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತು ಸದಸ್ಯರಾದ ಕಿಶೋರ್ ಕುಮಾರ್ ಹಾಗೂ ಜಯಲಕ್ಷ್ಮಿ ಭಟ್ ಉಪಸ್ಥಿತರಿದ್ದರು. ಸದಾನಂದ ಆಳ್ವ ಶುಭಾಶಂಸನೆಗೈದರು.ನಿವೃತ್ತ ಪೋಲೀಸ್ ಅಧಿಕಾರಿ  ಶ್ರೀರಾಮ ಸ್ವಾಗತಿಸಿ, ಪುಷ್ಪರಾಜ ಶೆಟ್ಟಿ ವಂದಿಸಿದರು. ರಾಮ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ದುಗರ್ಾಪೂಜೆಯ ಪ್ರಸಾದ ವಿತರಣೆ ಹಾಗೂ ಪ್ರಸಾದ ಭೋಜನ ನಡೆಯಿತು.
 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries