1.99 ಲಕ್ಷ ರೂ.ಗಳ ನಿಷೇಧಿತ 500 ರೂ. ನೋಟುಗಳ ಸಾಗಾಣಿಕೆ ಪತ್ತೆ
ಬದಿಯಡ್ಕ: ಕನರ್ಾಟಕದಿಂದ ಕೇರಳಕ್ಕೆ ಸಾಗಿಸಲಾಗುತ್ತಿದ್ದ ನಿಷೇಧಿತ 500 ರೂ.ಗಳ ಕರೆನ್ಸಿ ನೋಟುಗಳನ್ನು ಬದಿಯಡ್ಕ ಪೋಲೀಸರು ಬುಧವಾರ ವಶಪಡಿಸಿಕೊಂಡ ಘಟನೆ ನಡೆದಿದೆ.
ಬದಿಯಡ್ಕ ಪೋಲೀಸ್ ಠಾಣಾಧಿಕಾರಿ ಪ್ರಶಾಂತ್ ನೇತೃತ್ವದ ತಂಡ ಬುಧವಾರ ರಾತ್ರಿ ಚೆರ್ಕಳ-ಕಲ್ಲಡ್ಕ ಅಂತರ್ ರಾಜ್ಯ ಹೆದ್ದಾರಿಯ ಉಕ್ಕಿನಡ್ಕ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವಿಟ್ಲ ಭಾಗದಿಂದ ಆಗಮಿಸಿದ ಟಾಟಾ ಇಂಡಿಕಾ ಕಾರಿನಲ್ಲಿ 1 ಲಕ್ಷದ 99 ಸಾವಿರದ 500 ರೂ. ಮೌಲ್ಯದ ನಿಷೇಧಿತ 500 ರೂ.ಗಳ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಯಿತು.
ಘಟನೆಯ ಸಂಬಂಧ ಬೆಳ್ತಂಗಡಿಯ ಮಾಹಿನ್ ಎಂಬವರ ಪುತ್ರ ಬಶೀರ್(40), ಶೇಕಬ್ಬರ ಪುತ್ರ ಹಕೀಂ(35) ರನ್ನು ಬಂಧಿಸಲಾಗಿದ್ದು, ಕಾರನ್ನು ವಶಪಡಿಸಲಾಗಿದೆ.ನೋಟುಗಳ ಸಾಗಾಟದ ಬಗ್ಗೆ ಇನ್ನಷ್ಟೆ ಮಾಹಿತಿ ಲಭ್ಯವಾಗಬೇಕಿದ್ದು, ನಾರಂಪಾಡಿಯ ವ್ಯಕ್ತಿಯೋರ್ವರಿಗೆ ಹಸ್ತಾಂತರಿಸಲು ಕೊಂಡೊಯ್ಯಲಾಗುತ್ತಿತ್ತೆಂದು ಶಂಕಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.