ಕಲಾವಿದರ ಬೆನ್ನಿಗೆ ಗುದ್ದಿ, ಹೊಟ್ಟೆಗಲ್ಲ-ಪಟ್ಲ ಸತೀಶ ಶೆಟ್ಟಿ
ಕುಂಬಳೆ: ರಂಗದಲ್ಲಿ ರಸಭಾವಗಳಿಂದ ಪ್ರೇಕ್ಷಕರಿಗೆ ಮುದ ನೀಡುವ ಕಲಾವಿದರ ನೈಜ ಬದುಕು ತೀವ್ರ ಸಂಕಷ್ಟದಲ್ಲಿದೆ.ಕಲೆ, ಕಲಾವಿದರ ಉನ್ನತಿಗೆ ವಿಮಶರ್ೆಗಳನ್ನು ಎಷ್ಟು ಬೇಕಾದರೂ ಮಾಡಬಹುದು. ಆದರೆ ಅದನ್ನು ಕಾರ್ಯರೂಪಕ್ಕೆ ತರುವುದು ಸುಲಭ ಅಲ್ಲ. ಈ ನಿಟ್ಟಿನಲ್ಲಿ ಪಟ್ಲ ಫೌಂಡೇಶನ್ ಹಲವು ಕನಸುಗಳನ್ನು ಸಾಕಾರಗೊಳಿಸಲು ಸಹೃದಯರ ನೆರವಿನೊಂದಿಗೆ ಪ್ರಯತ್ನಿಸುತ್ತಿದೆ ಎಂದು ಖ್ಯಾತ ಯಕ್ಷಗಾನ ಭಾಗವತ, ಯಕ್ಷ ಧ್ರುವ ಪಟ್ಲ ಫೌಂಡೇಶನ್ನ ಸ್ಥಾಪಕ ಪಟ್ಲ ಸತೀಶ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳೂರಿನ ಯಕ್ಷದ್ರುವ ಪಟ್ಲ ಫೌಂಡೇಶನ್ ಕುಂಬಳೆ ಘಟಕದ ನೇತೃತ್ವದಲ್ಲಿ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದ ವಾಷರ್ಿಕ ಜಾತ್ರಾ ಮಹೋತ್ಸವದ ಅಂಗವಾಗಿ ಆರಾಟು ಮಹೋತ್ಸವದ ದಿನವಾದ ಗುರುವಾರ ಸಂಜೆ ಕ್ಷೇತ್ರ ಪರಿಸರದಲ್ಲಿ ಆಯೋಜಿಸಲಾದ "ಯಕ್ಷ ಸಂವಾದ-ಮಹಾ ದ್ವಂದ್ವ" ವಿಶೇಷ ಸಮಾರಂಭದ ಭಾಗವಾಗಿ ನಡೆದ ಸನ್ಮಾನ, ದತ್ತಿನಿಧಿ ಸಮರ್ಪಣಾ ಸಮಾರಂಭದಲ್ಲಿ ಹಿರಿಯ ಕಲಾವಿದ, ಯಕ್ಷಗಾನ ಗುರು ದಿವಾಣ ಶಿವಶಂಕರ ಭಟ್ ರವರಿಗೆ ದತ್ತಿನಿಧಿ ಸಮಪರ್ಿಸಿ ಅವರು ಮಾತನಾಡಿದರು.
ತನ್ನ ಕಲಾಸೇವೆ ಮತ್ತು ಇತರ ಸೇವಾ ಚಟುವಟಿಕೆಗಳ ವರ್ಚಸ್ಸಿಗೆ ಕೆಲವೆಡೆ ಕುಂದು ತರುವ ಯತ್ನಗಳು ನಡೆಯುತ್ತಿದೆ ಎಂದು ತಿಳಿಸಿದ ಅವರು ಪಟ್ಲ ಫೌಂಡೇಶನ್ ತನ್ನ ವೈಯುಕ್ತಿಕ ವಿಚಾರವಾಗಿದ್ದು, ಯಕ್ಷಗಾನ ಮೇಳ-ಪ್ರದರ್ಶನಗಳಿಗೆ ಪರಸ್ಪರ ಸಂಬಂಧ ಇಲ್ಲ ಎಂದು ಅವರು ಈ ಸಂದರ್ಭ ಪ್ರತಿಕ್ರಿಯಿಸಿ ಮಾತನಾಡಿದರು. ತಪ್ಪೆಸಗಿದರೆ ಕಲಾವಿದನ ಬೆನ್ನಿಗೆ ಹೊಡೆಯುವುದನ್ನು ಬಿಟ್ಟು ಹೊಟ್ಟೆಗೆ ಹೊಡೆಯುವ ಯತ್ನ ಮಾಡಬೇಡಿ ಎಂದು ಅವರು ಈ ಸಂದರ್ಭ ತಿಳಿಸಿದರು.
ಯಕ್ಷದ್ರುವ ಪಟ್ಲ ಫೌಂಡೇಶನ್ ಕುಂಬಳೆ ಗಟಕದ ಅಧ್ಯಕ್ಷ ಎಸ್.ಜಗನ್ನಾಥ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಕಣಿಪುರ ಶ್ರೀಕ್ಷೇತ್ರದ ಅರ್ಚಕ ಮಾಧವ ಅಡಿಗ ಕುಂಬಳೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಧಾಮರ್ಿಕ ನೆಲೆಗಟ್ಟು, ಸಂಪ್ರದಾಯ, ನಂಬಿಕೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಯಕ್ಷಗಾನ ಕಲೆಗೆ ಯಕ್ಷಪಿತಾಮಹ ಕುಂಬಳೆಯ ಪಾತರ್ಿಸುಬ್ಬ ನೀಡುರುವ ಕೊಡುಗೆ ಅಜರಾಮರ. ಕಲೆ, ಕಲಾವಿದರ ಸಮಗ್ರ ಶ್ರೇಯಸ್ಸಿಗೆ ಕಾಯೋನ್ಮುಖವಾಗಿರುವ ಪಟ್ಲ ಫೌಂಡೇಶನ್ ಸ್ತುತ್ಯರ್ಹ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಮಾತನಾಡಿ, ಪಾತಿಸುಬ್ಬನಿಂದ ಹೆಸರುಗಳಿಸಿರುವ ಕುಂಬಳೆಯಲ್ಲಿ ಪಾತರ್ಿಸುಬ್ಬನ ನೆನಪುಗಳನ್ನು ಹಸಿರಾಗಿಸಲು ತಡವಾಗಿಯಾದರೂ ಗ್ರಾ.ಪಂ. ಮೂಲಕ ಪ್ರಯತ್ನಿಸಲಾಗುತ್ತಿದೆ. ಕುಂಬಳೆ-ಕಂಚಿಕಟ್ಟೆ ರಸ್ತೆಗೆ ಯಕ್ಷಪಿತಾಮಹ ಪಾತರ್ಿಸುಬ್ಬನ ಹೆಸರನ್ನು ಇರಿಸುವ ಮೂಲಕ ಮಹಾನ್ ವ್ಯಕ್ತಿಯ ಸ್ಮರಣೆಗೆ ಅವಕಾಶವೀಯಲಾಗುವುದು ಎಂದು ಘೋಷಿಸಿದರು.
ಪಟ್ಲ ಫೌಂಡೇಶನ್ ಕೇಂದ್ರ ಘಟಕದ ಅಧ್ಯಕ್ಷ ಪುರುಷೋತ್ತಮ ಭಂಡಾರಿ ಅಡ್ಯಾರು ಉಪಸ್ಥಿತರಿದ್ದು ಮಾತನಾಡಿ ಫೌಂಡೇಶನ್ ನ ಈವರೆಗಿನ ಚಟುಟವಿಕೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗಾನ ಗುರು ದಿವಾಣ ಶಿವಶಂಕರ ಭಟ್ ರವರಿಗೆ ಸನ್ಮಾನ ಮತ್ತು ಯಕ್ಷದ್ರುವ ದತ್ತನಿಧಿಯನ್ನು ಈ ಸಂದರ್ಭ ಪ್ರಧಾನಗೈಯ್ಯಲಾಯಿತು. ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ದಿವಾಣ ಶಿವಶಂಕರ ಭಟ್, ಕಲೆ, ಕಲಾವಿದರ ಏಳಿಗೆಗಾಗಿ ರಚಿಸಲ್ಪಟ್ಟಿರುವ ಪಟ್ಲ ಫೌಂಡೇಶನ್ ಇತರರಿಗೆ ಮಾರ್ಗದಶರ್ಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಲಾವಿದರ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಸಂಸ್ಥೆಗೆ ಪ್ರತಿಯೊಬ್ಬರೂ ಬೆಂಬಲ ನೀಡಿ ಪೋಶಿಸಬೇಕು. ಜೀವನ ಪೂತರ್ಿ ಯಕ್ಷಗಾನದ ಶ್ರೇಯಸ್ಸಿಗೆ ದುಡಿಯುತ್ತಿರುವ ತನ್ನಂತವರಿಗೆ ನೆರವಾಗುವ ಸಂಸ್ಥೆ ಅಪೂರ್ವ ಯೋಜನೆಗಳ ಮೂಲಕ ಇನ್ನಷ್ಟು ವಿಸ್ತರಿಸಲಿ ಎಂದು ತಿಳಿಸಿದರು.
ಫೌಂಡೇಶನ್ ಮಾರ್ಗದರ್ಶಕ ಪಟ್ಲಗುತ್ತು ಮಹಾಬಲ ಶೆಟ್ಟಿ, ಕೇಂದ್ರ ಘಟಕದ ಉಪಾಧ್ಯಕ್ಷ ಡಾ.ಗಣೇಶ್, ರಮಾನಾಥ ಶೆಟ್ಟಿ, ಶಂಕರ ರೈ ಮಾಸ್ತರ್, ಮಂಜುನಾಥ ಆಳ್ವ ಮಡ್ವ, ಸುಜಿತ್ ರೈ, ಕುಂಬಳೆ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಗೀತಾ ಎಲ್.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕುಂಬಳೆ ಘಟಕದ ಗೌರವಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿ, ಪಾಂಡವಾಸ್ ಕಂಚಿಕಟ್ಟೆ ಸಂಘಟನೆಯ ಉಪಾಧ್ಯಕ್ಷ ಲತೀಶ್ ರೈ ವಂದಿಸಿದರು. ಪತ್ರಕರ್ತ ವೀಜೀ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಅಂಗಧ-ಪ್ರಹಸ್ತ, ಹಾಗೂ ಸಭಾ ಕಾರ್ಯಕ್ರಮದ ಬಳಿಕ ಜಾಬಾಲಿ-ನಂದಿನಿ ಪ್ರಸಂಗಗಳ ಮಹಾ ದ್ವಂದ್ವ ನಡೆಯಿತು. ಹಿಮ್ಮೇಳದಲ್ಲಿ ಪಟ್ಲ ಸತೀಶ ಶೆಟ್ಟಿ, ರಾಘವೇಂದ್ರ ಮಯ್ಯ ಹಾಲಾಡಿ, ಶ್ರೀಧರ ಪಡ್ರೆ, ಮುರಾರಿ ಕಡಂಬಳಿತ್ತಾಯ, ರಾಕೇಶ್ ಮಲ್ಯ ಹಳ್ಳಾಡಿ, ಪರಮೇಶ್ವರ ಭಂಡಾರಿ ಕಕರ್ಿ ಮತ್ತು ಮುಮ್ಮೇಳದಲ್ಲಿ ಉಜಿರೆ ಅಶೋಕ ಭಟ್, ಜಬ್ಬಾರ್ ಸಮೋ ಸಂಪಾಜೆ, ದಿವಾಣ ಶಿವಶಂಕರ ಭಟ್, ವೀಜೀ ಕಾಸರಗೋಡು ಪಾತ್ರಗಳನ್ನು ನಿರ್ವಹಿಸಿದರು.