ಕಾಸರಗೋಡಿನ ಕನ್ನಡಿಗರು ಬಹುಭಾಷಾ ಪ್ರೇಮಿಗಳು- ಎಚ್.ಎಮ್.ರೇವಣ್ಣ
ಕುಂಬಳೆ: ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಅವರು ಆಸ್ತಿಯಾಗುತ್ತಾರೆ. ಮನಸು ಸದಾ ಸದ್ವಿಚಾರ ಹಾಗೂ ಚಟುವಟಿಕೆ ನಿರತವಾಗಿದ್ದಾಗ ಉತ್ತಮ ಚಿಂತನೆಗಳು ಬೆಳೆಯುವುದರಿಂದ ಮಕ್ಕಳಲ್ಲಿ ಸ್ನೇಹಮಯ ಭಾವನೆಗಳು ಚಿಗುರುತ್ತವೆ. ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷಾ ಪ್ರೇಮ ಎದ್ದು ಕಾಣುತ್ತದೆ. ಕನ್ನಡ ಭಾಷೆಯನ್ನು, ಕನ್ನಡಿಗರನ್ನು ಗೌರವಿಸುವ ಕೆಲಸ ಇಲ್ಲಿ ನಡೆಯುತ್ತದೆ. ಈ ಭಾಷಾಭಿಮಾನ ಶ್ಲಾಘನೀಯ. ಬೇರೆ ಬೇರೆ ಮಾತೃಭಾಷೆಯನ್ನಾಡುವ ಇಲ್ಲಿನ ಸಾಮಾನ್ಯ ಜನರೂ ಸ್ಪುಟವಾಗಿ, ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡುವುದು ಹಾಗೂ ಭಾಷೆಯ ಸಾರವನ್ನು ಸಾರುತ್ತಿರುವುದು ಕಂಡರೆ ಆಶ್ಚರ್ಯ ಹಾಗೂ ಅಭಿಮಾನ ಉಕ್ಕಿಬರುತ್ತದೆ ಎಂದು ಕನರ್ಾಟಕ ಸಾರಿಗೆ ಸಚಿವರಾದ ಎಚ್.ಎಮ್.ರೇವಣ್ಣ ಅಭಿಪ್ರಾಯಪಟ್ಟರು.
ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿಯು ಕುಬಣೂರಿನ ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಅಪರಾಹ್ನ ಆಯೋಜಿಸಿದ ಸಾಹಿತ್ಯ ಸಾಂಸ್ಕೃತಿಕ ಪಯಣ-6 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಯಾವುದೇ ಪರಸಹಾಯಕ್ಕೆ ಕಾಯದೆ ತಮ್ಮ ಪರಿಶ್ರಮದಿಂದ ಕನ್ನಡದ ಸೇವೆ ಮಾಡುತ್ತಿರುವ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಹೆಜ್ಜೆ ಅತ್ತ್ಯುತ್ತಮ. ಸ್ವ ಪ್ರೇರಣೆುಂದ ಒಗ್ಗಟನಿಂದ ಸಮಾಜ ಹಾಗೂ ಭಾಷೆಯ ಸಂರಕ್ಷಣೆ ಮತ್ತು ಪ್ರತಿಭಾ ಸಂಪನ್ನರ, ಕಲಾವಿದರ ಸಾಧನೆಗೆ ನೀಡುವ ಮನ್ನಣೆಗೆ ನನ್ನ ಪೂರ್ಣ ಬೆಂಬಲವಿದೆ ಎಂದು ಅವರು ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿರುವ ಶಾಲೆಗಳಿಗೆ ನೀಡುವ ಪ್ರಾಧಾನ್ಯತೆ ಹಾಗೂ ಶಿಬಿರ, ತರಭೇತಿಗಳ ಮುಖಾಂತರ ಕಲೆ ಹಾಗೂ ಸಂಸ್ಕೃತಿಯನ್ನು ಭದ್ರವಾಗಿಸುವ ಕಾರ್ಯ ಪ್ರಶಂಸನೀಯ. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪಯಣದ ಹೆಸರು ಹಾಗೂ ಉದ್ಧೇಶ ಬಹಳ ಉತ್ತಮ ಹಾಗೂ ಮಾದರಿಯಾಗಿದೆ ಎಂದು ಅವರು ಪ್ರಶಂಸಿಸಿದರು.
ಪ್ರಗತಿಪರ ಕೃಷಿಕ, ಸಮಾಜ ಸೇವಕ ಪ್ರಭಾಕರ ಕಲ್ಲೂರಾಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನರ್ಾಟಕ ವಸತಿ ಮತ್ತು ವಿಹಾರಧಾಮ ನಿಗಮ ಮಂಡಳಿಯ ಅಧ್ಯಕ್ಷ ಎ.ಎನ್.ಮಹೇಶ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಮಂಗಲ್ಪಾಡಿ ಗ್ರಾಮ ಪಂಚಾಯತು ಸದಸ್ಯೆ ಜಯಶಮರ್ಿಳಾ, ಕನರ್ಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ,ಧಾಮರ್ಿಕ ಮುಖಂಡ ಗೋಪಾಲಕೃಷ್ಣ ವಾಂತಿಚ್ಚಾಲು,ಸಂಘಟಕ ನಿರಂಜನ ರೈ ಪೆರಡಾಲ,ಶಾಲಾ ಪ್ರಬಂಧಕಿ ಮೋಕ್ಷದಾ ಮುಂತಾದವರು ಶುಭಾಶಂಸನೆಗೈದರು. ಪ್ರೊ.ಪಿ.ಎನ್.ಮೂಡಿತ್ತಾಯ, ಜಾನಪದ ಕಲಾವಿದ ಮನುಪಣಿಕ್ಕರ್, ಸಂಘಟಕ ಝೆಡ್.ಎ ಕಯ್ಯಾರ್ ,ಮೀಡಿಯಾ ಕ್ಲಾಸಿಕಲ್ಸ್ ಕಾಸರಗೋಡು ಅಧ್ಯಕ್ಷ ಶ್ರೀಕಾಂತ್ ನೆಟ್ಟಣಿಗೆ ಬಾಲಪ್ರತಿಭೆಗಳಾದ ಉಪಾಸನ ಪಂಜರಿಕೆ,ಸಮನ್ವಿತಾ ಹಾಗೂ ದತ್ತೇಶ್, ಸಂಧ್ಯಾಗೀತಾ ಬಾಯಾರು, ವಸಂತ ಬಾರಡ್ಕ,ನಿತಿನ್ ಫೋಕ್ಸ್ ಸ್ಟಾರ್ ಉಪಸ್ಥಿತರಿದ್ದರು. ವಿದ್ಯಾಗಣೇಶ್ ಅಣಂಗೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿಯ ಪ್ರಧಾನ ಕಾರ್ಯದಶರ್ಿ ಅಖೀಲೇಶ್ ನಗುಮುಗಂ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ.ಪಿ ವಂದಿಸಿದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಉಪಾಧ್ಯಕ್ಷಪ್ರೊ.ಎ. ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.
ಕಿನ್ನಿಂಗಾರು-ಬದಿಯಡ್ಕ ಮಾರ್ಗವಾಗಿ ಮಂಗಳೂರಿಗೆ ರಸ್ತೆ ಸಾರಿಗೆ ಬಸ್ಸು ಸಂಚಾರವನ್ನು ಆರಂಭಿಸಬೇಕೆಂಬ ಮನವಿಯನ್ನು ಈ ಸಂದರ್ಭ ಮೀಡಿಯಾ ಕ್ಲಾಸಿಕಲ್ಸ್ ಕಾಸರಗೋಡು ಇದರ ಪದಾಧಿಕಾರಿಗಳು ಸಚಿವರಿಗೆ ಸಲ್ಲಿಸಿದರು. ಅಂತೆಯೇ ಶ್ರೀ ರಾಮ ಎ.ಯು.ಪಿ ಶಾಲೆಯಿಂದಲೂ ಸಚಿವರಿಗೆ ಮನವಿ ಸಲ್ಲಿಸಲಾಯಿತು. ರಂಗಕಮರ್ಿ ಉದಯ ಸಾರಂಗ್, ಮಿಮಿಕ್ರಿ ಕಲಾವಿದ ಸುರೇಶ್ ಮುಳ್ಳೇರಿಯ, ವಿನ್ಯಾಸಗಾರ ಸಂತೋಷ್ ಕುಮಾರ್ ಕಾಸರಗೋಡು, ನೃತ್ಯ-ಯಕ್ಷಗಾನ ಕಲಾವಿದೆ ತನುಜಾ ಕಿಶನ್ ಪಾಟಾಳಿ ಹಾಗೂ ಬಾಲ ಪ್ರತಿಭೆಗಳಾದ ದೇವಿ ಕಿರಣ್ ಹಾಗೂ ಜೀವನ್ ರಾಜ್ ಇವರನ್ನು ಸಚಿವ ರೇವಣ್ಣ ಗೌರವಿಸಿದರು.