HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ವಿದ್ಯಾಥರ್ಿಗಳು ಸಮಾಜಮುಖಿ ಚಿಂತನೆಗಳನ್ನು ತೊಡಗಿಸಿಕೊಳ್ಳಬೇಕು-ಕಜಂಪಾಡಿ ಸುಬ್ರಹ್ಮಣ್ಯ ಭಟ್
                  ನಾಲಂದದಲ್ಲಿ ವಿದ್ಯಾಥರ್ಿ ಸಂಘಟನೆ ಉದ್ಘಾಟನೆ
    ಪೆರ್ಲ: ವಿದ್ಯಾಥರ್ಿಗಳು ರಾಷ್ಟ್ರದ ನಿಮರ್ಾಪಕರು. ತರುಣರ ಸಂಖ್ಯೆ ಹೆಚ್ಚಿರುವ ದೇಶ ಭಾರತ. ಸೀಮಿತ ಬದುಕಿನಲ್ಲಿ ಒಂದಷ್ಟನ್ನು ಸಮಾಜದ ಮುಖಿ ಚಿಂತನೆಗಳ ಮೂಲಕ ಸಾಮಾಜಿಕವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು.ತಮ್ಮ ಶಕ್ತಿಯನ್ನು ಪರಸ್ಪರ ಸಂಘರ್ಷಕ್ಕೆ ಕಾರಣರಾಗುವುದರ ಬದಲಾಗಿ ಆ ಶಕ್ತಿಯನ್ನು ವಿಕಾಸದ ಕಡೆಗೆ ಕೊಂಡೊಯ್ದರೆ ಯಶಸ್ಸು, ನೆಮ್ಮದಿ ನೆಲೆಗೊಳ್ಳುವುದು ಎಂದು ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಗಳ ಸಲಹಾ ಮಂಡಳಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
  ಪೆರ್ಲದ ನಾಲಂದ ಮಹಾವಿದ್ಯಾಲಯದ ವಿದ್ಯಾಥರ್ಿ ಸಂಘಟನೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
  ಜಗತ್ತು ಕಣ್ಣು ಬಿಡುವುದಕ್ಕೆ ಮುಂಚೆ ನಮ್ಮ ರಾಷ್ಟ್ರ ಎಚ್ಚೆತ್ತು ಎಲ್ಲವನ್ನೂ ನಿರ್ವಹಿಸಿಯಾಗಿತ್ತು. ಅಂತಹ ಮಹಾನ್ ಸಶಕ್ತ ಭಾರತ ಬಳಿಕ ಹಿನ್ನೆಲೆಗೆ ತಳ್ಳಲ್ಪಟ್ಟದ್ದು ದೌಭರ್ಾಗ್ಯಕರವಾದರೂ ಇನ್ನಾದರೂ ಎಚ್ಚೆತ್ತು ರಾಷ್ಟ್ರದ ಸಮಗ್ರತೆಗೆ ಬೆಲೆನೀಡಿ ಅಭಿವೃದ್ದಿಗೆ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.
ಸಮತ್ವದಿಂದ ಲೋಕವನ್ನು ಗೆಲ್ಲಬೇಕು.ಲೋಕಾಸಮಸ್ತಾ ಸುಖಿನೋಭವಂತು ಎನ್ನುವಂತೆ  ನಾವು ನಮ್ಮ  ಮಾತು ನಿಜ ಮಾಡಬೇಕಾದುದು ವಿದ್ಯಾಥರ್ಿಗಳ ಆದ್ಯ  ಕರ್ತವ್ಯ.  ಆ ಮಾತಿನ ಧ್ಯೇಯ ವಾಕ್ಯದಂತೆ ನಡೆದುಕೊಳ್ಳಬೇಕು ಎಂದು ಕರೆಯಿತ್ತರು.
  ಲಲಿತ ಕಲಾ ಸಂಘಟನೆಯನ್ನು ಉದ್ಘಾಟಿಸಿದ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಮಲಯಾಳಂ ಸಿನಿಮಾ ನಟ, ಸಿಬಿ ಥೊಮಸ್ "ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ  ನನಗೆ ಬಹಳ ಹೆಮ್ಮೆ ಎಂದೆನಿಸುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸದೇ ಹೋಗಿರುತ್ತಿದ್ದರೆ ನನಗೆ ನನ್ನ ಜೀವನದಲ್ಲಿ ಅಮೂಲ್ಯ ಕ್ಷಣ ನಷ್ಟವಾಗುತ್ತಿತ್ತು. ಯಾಕೆಂದರೆ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ನೆನಪೆಂದರೆ ಅದು ಶಾಲಾ ಮತ್ತು ಕಾಲೇಜು ಜೀವನ ಎಂದು ತಿಳಿಸಿದ ಅವರು, ರಾಜಕೀಯ ರಹಿತನಾಗಿ ಶಾಲಾ ನಾಯಕನಾಗಿ ಗೆದ್ದ ಬಗ್ಗೆ ನೆನಪಿಸಿದರು.  ಜೀವನದಲ್ಲಿ ಒಳ್ಳೆ ಕನಸುಗಳೇನಿದೆ ಅದನ್ನು ನನಸು ಮಾಡುವ ದೃಢತೆ ನಮ್ಮಲ್ಲಿರಬೇಕು. ಲಕ್ಷ್ಯವನ್ನು ಮುಂದಿರಿಸಿಕೊಂಡು ದಿನ ನಿತ್ಯ ಪರಿಶ್ರಮಿಸುತ್ತಿದ್ದರೆ ಗೆದ್ದೇ ಗೆಲ್ಲುತ್ತೇವೆ, ಗೆಲ್ಲುತ್ತೇನೆ , ಗೆಲ್ಲಲೇ ಬೇಕು ಎನ್ನುವ ಆತ್ಮವಿಶ್ವಾಸ ಬದುಕಿನಲ್ಲಿ ಶ್ರೇಷ್ಠತೆಯನ್ನೊದಗಿಸುತ್ತದೆ.ಅದಕ್ಕನುಸಾರವಾಗಿ ದೈವಬಲವೂ ಜೊತೆ ನಿಲ್ಲುತ್ತದೆ ಎಂದು ನುಡಿದರು.
  ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ  ರೂಪವಾಣಿ ಆರ್. ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ನಾಲಂದ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೋ. ಶಂಕರನಾರಾಯಣ ಹೊಳ್ಳ ಉಪಸ್ಥಿತರಿದ್ದರು.
  ಕಾಲೇಜು ಯೂನಿಯನ್ ಅಧ್ಯಕ್ಷ ಅಪರ್ಿತ್ ಕೆ, ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾದ್ಯಕ್ಷೆ ಅನುಶಾ ಸಿ ಎಚ್, ಜೊತೆ ಕಾರ್ಯದಶರ್ಿ ಕುಮಾರಿ ಕಾವ್ಯ ಚಂದ್ರನ್, ಯುಯುಸಿ ಭರತ್, ಫೈನ್  ಆಟ್ಸರ್್ ಕಾರ್ಯದಶರ್ಿ ಅಭಿಲಾಷ್ ಮಾತನಾಡಿದರು.ಉಪನ್ಯಾಸಕ ಅಶೋಕ್ ಸ್ವಾಗತಿಸಿ , ಯೂನಿಯನ್ ಕಾರ್ಯದಶರ್ಿ  ವಿಕಾಸ್ .ವಿ ವಂದಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries